Rohit Sharma: ಹಾರ್ದಿಕ್ ಪಾಂಡ್ಯ ಕುರಿತಂತೆ ಜನರ ಬಳಿ ಮನವಿ ಮಾಡಿಕೊಂಡ ಶರ್ಮಾ, ವಿಡಿಯೋ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ಕುರಿತಂತೆ ಜನರ ಬಳಿ ಮನವಿ ಮಾಡಿಕೊಂಡ ಶರ್ಮಾ

Rohit Sharma Video Viral: ಈ ಹಿಂದೆ ಬರೋಬ್ಬರಿ 5 ಬಾರಿ ಕಪ್ ಗೆದ್ದ Mi ತಂಡ ಈ ಬಾರಿ IPL ನಲ್ಲಿ ಬಾರಿ ಹಿಂದುಳಿದಿದೆ. ಇನ್ನು Mi ತಂಡದ ಕ್ಯಾಪ್ಟನ್ ಬದಲಾದ ಕಾರಣ ಅಭಿಮಾನಿಗಳು ಬೇಸರ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇನ್ನು IPL 2024 ರಲ್ಲಿ ನಡೆದ ಮೂರು ಪಂದ್ಯದಲ್ಲಿ Mi ತಂಡ ಸೋಲು ಕಂಡಿದೆ. Hardik Pandya ಕ್ಯಾಪ್ಟನ್ಸಿ ಬಗ್ಗೆ ನೆಗಟಿವ್ ಕಮೆಂಟ್ ಹೆಚ್ಚಾಗುತ್ತಿದೆ ಎನ್ನಬಹುದು.

ಈವರೆಗೆ ಆಡಿದ ಮೂರು ಪಂದ್ಯಗಳಲ್ಲೂ ಕೂಡ MI ತಂಡ ಸೋತಿತೆ. ಸತತ ಸೋಲಿನ ಕಾರಣ MI ತಂಡದ ಅಭಿಮಾನಿಗಳು ಬೇಸರದಲ್ಲಿದ್ದರೆ. ಸದ್ಯ ಹಾರ್ದಿಕ ಪಾಂಡ್ಯ ಅವರ ಬಗ್ಗೆ ಟೀಕೆಗಳು ಕೊಡ ಹೆಚ್ಚುತ್ತಿದೆ. ಇದನ್ನು ಗಮನಿಸಿದ MI ತಂಡದ ಮಾಜಿ ನಾಯಕ Rohit Sharma ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

Rohit Sharma Latest News
Image Credit: Live Mint

ಹಾರ್ದಿಕ್ ಪಾಂಡ್ಯ ಕುರಿತಂತೆ ಜನರ ಬಳಿ ಮನವಿ ಮಾಡಿಕೊಂಡ ಶರ್ಮಾ
IPL ನಲ್ಲಿ ಗುಜರಾತ್ ವಿರುದ್ಧ 6 ರನ್‌ ಗಳಿಂದ ಸೋತ ನಂತರ ಮುಂಬೈ ತಂಡ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ 31 ರನ್‌ ಗಳಿಂದ ಹೀನಾಯ ಸೋಲು ಅನುಭವಿಸಿತು. ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ MI ಸೋತಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್‌ ಗೆ ಮತ್ತೆ ಕೆಟ್ಟ ಅನುಭವವಾಗಿದೆ.

ಆದರೆ, ಈ ಸಂದರ್ಭದಲ್ಲಿ ಮಾಜಿ MI ನಾಯಕ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಹೀಗೆ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಂಬೈ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಬೊಬ್ಬೆ ಹೊಡೆದು ಟೀಕೆ ಮಾಡುತ್ತಿದ್ದರು. ಆಗ ರೋಹಿತ್ ಅಭಿಮಾನಿಗಳನ್ನು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು. ಬೌಂಡರಿ ಲೈನ್‌ ನಲ್ಲಿ ಫೀಲ್ಡಿಂಗ್ ಮಾಡುವಾಗ ಕೈಸನ್ನೆ ಮೂಲಕ ಹಾರ್ದಿಕ್ ಪಾಂಡ್ಯಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ಗೆ ಹೇಳಿದರು.

Rohit Sharma Video Viral
Image Credit: Hindustan Times

Join Nadunudi News WhatsApp Group

Join Nadunudi News WhatsApp Group