August Rules: ಆಗಸ್ಟ್ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.

ಆಗಸ್ಟ್ ಮೊದಲ ವಾರವೇ ಹಲವು ನಿಯಮಗಳು ಬದಲಾಗಿದ್ದು ಜನರ ಮೇಲೆ ನೇರ ಪರಿಣಾಮವನ್ನ ಬೀರಲಿದೆ.

Rules Changes From 1st August: ಪ್ರತಿ ತಿಂಗಳ ಮೊದಲ ದಿನದಂದು ಹೊಸ ಹೊಸ ನಿಯಮಗಳು ಜಾರಿ ಆಗುತ್ತವೆ. ಸರ್ಕಾರವು ಪ್ರತಿ ತಿಂಗಳ ಆರಂಭದಲ್ಲಿ ಅನೇಕ ರೀತಿಯ ನಿಯಮಗಳನ್ನು ಬದಲಾಯಿಸುತ್ತದೆ. ಅಗತ್ಯ ವಸ್ತುಗಳ ಬೆಲೆಯಲ್ಲಿ ತಿಂಗಳಿಂದ ತಿಂಗಳಿಗೆ ಅನೇಕ ಬದಲಾವಣೆಗಳು ಆಗುತ್ತಾ ಇರುತ್ತದೆ.

ಇದೀಗ ನಾವು ಜುಲೈ ತಿಂಗಳ ಕೊನೆಯ ವಾರದಲ್ಲಿ ಇದ್ದೇವೆ. ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳ ಆರಂಭದಲ್ಲಿ ಅನೇಕ ನಿಯಮಗಳು ಜಾರಿ ಆಗಲಿದೆ. ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಗ್ಯಾಸ್, ಸಿಲಿಂಡರ್ ಗಳು ಮತ್ತು ಬ್ಯಾಂಕ್ ಸಂಬಂಧಿತ ಕೆಲಸಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ.

Rules Changes From 1st August
Image Credit: Timesofindia

ಆಗಸ್ಟ್ 1 ರಿಂದ ಬದಲಾಗಲಿವೆ ಈ ನಿಯಮಗಳು
ಮುಂದಿನ ತಿಂಗಳು ಆಗಸ್ಟ್ ಒಂದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತಗಳಾಗಬಹುದು. ಇನ್ನು ಸಾಕಷ್ಟು ನಿಯಮಗಳು ಆಗಸ್ಟ್ 1 ರಿಂದ ಬದಲಾಗಲಿವೆ.

ಎಲ್ ಪಿ ಜಿ ಗ್ಯಾಸ್
ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ತಿಂಗಳ 1 ರಂದು ನಿಗದಿಪಡಿಸಲಾಗುತ್ತದೆ. ಆಗಸ್ಟ್ 1 2023 ರಿಂದ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗಳು ಮತ್ತು ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆಗಳನ್ನು ದೇಶಾದ್ಯಂತ ಬದಲಾಯಿಸಬಹುದು ಎಂದು ಹೇಳಲಾಗುತ್ತಿದೆ.

bank of baroda latest news
Image Credit: Economictimes

ಬ್ಯಾಂಕ್ ಖಾತೆ
ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಆಗಸ್ಟ್ 1 ರಿಂದ ಈ ಬ್ಯಾಂಕ್ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಬಹುದು. ಇದರ ಅಡಿಯಲ್ಲಿ ಹಣದ ವಹಿವಾಟಿನ ನಿಯಮಗಳನ್ನು ಬದಲಾಯಿಸಬಹುದು.

Join Nadunudi News WhatsApp Group

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ನಿಧಿ ಯೋಜನೆ ನಿಯಮಗಳನ್ನು ಬದಲಾಯಿಸಬಹುದು. ಈ ಯೋಜನೆಯಡಿ ಇನ್ನು ಇ-ಕೆವೈಸಿ ಮಾಡದ ಜನರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.

Rules Changes From 1st August
Image Credit: Businessleague

ಸಂಚಾರ ನಿಯಮ
ಆಗಸ್ಟ್ 1 ರಿಂದ ನೀವು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ 10,000 ರೂಪಾಯಿ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದಲ್ಲದೆ ನೀವು ಕುಡಿದ ನಂತರ ನಿವು ಮತ್ತೆ ಕುಡಿದು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ನೀವು 15,000 ದಂಡವನ್ನು ಪಾವತಿಸಬೇಕಾಗಬಹುದು ಮಾತ್ತು 2 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.

Join Nadunudi News WhatsApp Group