Rules Changes: ನಾಳೆಯಿಂದ ಬದಲಾಗಲಿದೆ ಹಲವು ಹಣಕಾಸು ನಿಯಮಗಳು, ಕಟ್ಟಬೇಕು ಅಧಿಕ ಶುಲ್ಕ ಮತ್ತು ದಂಡ.

ಮೇ ಮೊದಲ ವಾರದಿಂದ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಆಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ.

Changing Financial Rules: ಇಂದು ಏಪ್ರಿಲ್ ತಿಂಗಳ ಕೊನೆಯ ದಿನವಾಗಿದೆ. ನಾಳೆಯಿಂದ ಹೊಸ ಹೊಸ ನಿಯಮಗಳು ಜಾರಿಯಾಗಲಿದೆ. ಪ್ರತಿ ತಿಂಗಳ ಆರಂಭದಲ್ಲಿ ಸಾಕಷ್ಟು ನಿಯಮಗಳು ಜಾರಿಯಾಗುವುದು ಮತ್ತು ಕೆಲವು ಬದಲಾವಣೆಗಳು ಆಗುವುದು ಸಾಮಾನ್ಯವಾಗಿದೆ.

ಮೇ ಒಂದರಿಂದ ಅನೇಕ ಹೊಸ ಹಣಕಾಸು ನಿಯಮಗಳನ್ನು ಬದಲಾಯಿಸಲಾಗುತ್ತದೆ ಅಥವಾ ರದ್ದುಗೊಳಿಸಲಾಗುತ್ತದೆ. ಈ ಬದಲಾವಣೆಗಳು ನಿಮ್ಮ ಆರ್ಥಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ. ಮೇ 1 ರಿಂದ ಬದಲಾಗುವ ಕೆಲವು ನಿಯಮಗಳು ಇಲ್ಲಿದೆ.

There will be many changes in the financial sector in May which will directly affect people.
Image Credit: telegraphindia

ಮೇ ಒಂದರಿಂದ ಜಿಎಸ್ ಟಿ ನಿಯಮದಲ್ಲಿ ಬದಲಾವಣೆ ಆಗಲಿದೆ.
ಮೇ ತಿಂಗಳ ಆರಂಭದಿಂದ ವ್ಯಾಪಾರಿಗಳಿಗೆ ಜಿಎಸ್ ಟಿ ಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಹೊಸ ನಿಯಮದ ಪ್ರಕಾರ 100 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ವಹಿವಾಟಿನ ರಸೀದಿಯನ್ನು 7 ದಿನಗಳಲ್ಲಿ ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವುದು ಈಗ ಕಡ್ಡಾಯವಾಗಿದೆ. ಪ್ರಸ್ತುತ ಇನ್ ವಾಯ್ಸ್ ಗಳ ಉತ್ಪಾದನೆ ಮತ್ತು ಅಪ್ ಲೋಡ್ ದಿನಾಂಕಕ್ಕೆ ಅಂತಹ ಯಾವುದೇ ಮಿತಿಯಿಲ್ಲ.

There will be major changes in many financial rules including GST in May
Image Credit: swarajyamag

ಮೇ ಒಂದರಿಂದ ಆಗುವ ಬದಲಾವಣೆಗಳು
ಇನ್ನು ಮಾರುಕಟ್ಟೆಯ ನಿಯಂತ್ರಕ SEBI (Securities and Exchange Board of India) ಮತ್ತೊಂದು ನಿಯಮವನ್ನು ಬದಲಾಯಿಸಿದೆ. ಮ್ಯೂಚುಯಲ್ ಫಂಡ್ ಕಂಪನಿಗಳು ಕೆವೈಸಿ ಸಿದ್ದವಾಗಿರುವ ಇ ವ್ಯಾಲೆಟ್ ಗಳಿಂದ ಹಣವನ್ನು ಸ್ವೀಕರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಳಿಕೊಂಡಿದೆ.

ನಿಮ್ಮ ವ್ಯಾಲೆಟ್ ನಲ್ಲಿ ಕೈವೈಸಿ ಇಲ್ಲದಿದ್ದರೆ ಅದರ ಮೂಲಕ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಈ ನಿಯಮ ಮೇ 1 ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರವು ಪ್ರತಿ ತಿಂಗಳು ವಾಣಿಜ್ಯ ಸಿಲಿಂಡರ್ LPG, CNG ಮತ್ತು Png ದರಗಳನ್ನು ಬದಲಾಯಿಸುತ್ತದೆ.

Join Nadunudi News WhatsApp Group

There will be a change in gas cylinder price in the first week of May.
Imge Credit: abplive

ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆ 91.50 ರೂಪಾಯಿ. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2028 ರೂ. ಸರ್ಕಾರವು ಮೇ 1 ರಂದು ಬೆಲೆಗಳನ್ನು ಬದಲಾಯಿಸಬಹುದು. ಕೊನೆಯ ಬದಲಾವಣೆ ಬಹಳ ಮುಖ್ಯ. ಹಣದ ಕೊರತೆಯಿಂದ ಎಟಿಎಂನಲ್ಲಿ ವಹಿವಾಟು ವಿಫಲವಾದರೆ ಪಿಎನ್‌ಬಿ ಗ್ರಾಹಕರಿಗೆ 10 ರೂ. ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ.

Join Nadunudi News WhatsApp Group