October Rule: ಅಕ್ಟೋಬರ್ ನಿಂದ ಬದಲಾಗಲಿವೆ ಈ 6 ನಿಯಮಗಳು, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ.

ಅಕ್ಟೋಬರ್ ನಿಂದ ಬದಲಾಗಲಿವೆ ಈ 6 ನಿಯಮಗಳು, ಬದಲಾಗಲಿರುವ ನಿಯಮಗಳ ಬಗ್ಗೆ ತಿಳಿಯಿರಿ.

October New Rule: 2023 ರ Septembar ತಿಂಗಳು ಮುಕ್ತಾಯಗೊಳ್ಳಲು ಇನ್ನು ಕೇವಲ 12 ದಿನಗಳು ಬಾಕಿ ಇದೆ. Septembar ತಿಂಗಳಿನ ಆರಂಭದಲ್ಲಿ ಸಾಕಷ್ಟು ನಿಯಮಗಳು ಬದಲಾಗಿದ್ದವು. ಇನ್ನು Septembar ಮುಗಿದ ನಂತರ October ಆರಂಭಗೊಳ್ಳಲಿದೆ. ಪ್ರತಿ ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮ ಜಾರಿಯಾಗುವಂತೆ October ನಲ್ಲಿ ಕೂಡ ಸಾಕಷ್ಟು ನಿಯಮಗಳು ಜಾರಿಯಾಗಲಿವೆ.

ಇನ್ನು ಜನಸಾಮಾನ್ಯರಿಗೆ Septembar ತಿಂಗಳಿನಲ್ಲಿ ಸಾಕಷ್ಟು ಕೆಲಸಗಳು ಪೂರ್ಣಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 30 ರೊಳಗೆ ಯಾವ ಯಾವ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕು ಎನ್ನುವ ಬಗ್ಗೆ ಈಗಾಗಲೇ ಸೂಚನೆ ನೀಡಿದೆ. ಇನ್ನು October ಆರಂಭದಿಂದ ಈ 6 ನಿಯಮಗಳಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಇದೀಗ October 2023 ರಿಂದ ಬದಲಾಗಲಿರುವ ನಿಯಮಗಳ ಬಗ್ಗೆ ತಿಳಿದುಕೊಂಡು Septembar 30 ರೊಳಗೆ ಈ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ.

 

October ನಿಂದ ಬದಲಾಗಲಿವೆ ಈ 6 ನಿಯಮಗಳು
1. 2000 Rs Note Exchange
ಸೆಪ್ಟೆಂಬರ್ 30 ರದ್ದಾಗಿರುವ 2,000 ರೂ ಮುಖಬೆಲೆಯ ನೋಟಿನ ಬದಲಾವಣೆ ಅಥವಾ ವಿನಿಮಯಕ್ಕೆ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 30 ರೋಳಗೆ ನಿಮ್ಮ ಬಳಿ ಇರುವ 2,000 ರೂ ಮುಖಬೆಲೆಯ ನೋಟಿನ ಠೇವಣಿ ಅಥವಾ ವಿನಿಮಯ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬಹುದು. ಸೆಪ್ಟೆಂಬರ್ 30 ರ ನಂತರ ನಿಮ್ಮ ಬಳಿ ಇರುವ ಪಿಂಕ್ 2,000 ರೂ ನೋಟಿಗೆ ಯಾವುದೇ ಮೌಲ್ಯ ಇರುವುದಿಲ್ಲ.

2. Trading And Demat Account Nomination
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ಗೆ ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 30 ನಾಮಿನೇಷನ್ ಸಲ್ಲಿಕೆಗೆ ಕೊಣೆಯ ದಿನಾಂಕವಾಗಿದೆ.

Join Nadunudi News WhatsApp Group

 

3. Aadhaar Link For Saving Account
ನೀವು ಉಳಿತಾಯ ಯೋಜನೆಗಳಾದ, Public provident Fund , National Saving Certificate ನಂತಹ ಯಾವುದೇ ಸಣ್ಣಾ ಉಳಿತಾಯ ಯೋಜನೆಗಳನ್ನು ನಿಮ್ಮ Aadhar Card ನ ಜೊತೆ ಲಿಂಕ್ ಮಾಡಬೇಕಿದೆ. ಇನ್ನು ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, Septembar 30 ರೊಳಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಂಚೆ ಇಲಾಖೆ ನಿಮ್ಮ ಉಳಿತಾಯ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.

SBI Home Loan New Rule
Image Credit: Original Source

4. Ration Card Link With Aadhaar
ಪಡಿತರ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವು ಅಗತ್ಯವಾಗಿದೆ. ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮವಾಗಿದೆ. ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಆದ್ದರಿಂದ ಕೇಂದ್ರ ಸರ್ಕಾರ ಜನರಿಗೆ ಆಧಾರ್ ಗೆ ಪಡಿತರ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.

 

5. SSY Aadhaar Link
ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರು ಆಧಾರ್  ಕಾರ್ಡ್ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.  ಖಾತೆದಾರರು ಸೆಪ್ಟೆಂಬರ್ 30 ರ ಒಳಗೆ ಆಧಾರ್ ಹಾಗು ಪ್ಯಾನ್ ಕಾರ್ಡ್ ವಿವರವನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ ನಿಮ್ಮ ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆಯ ಖಾತೆ ಸ್ಥಗಿತಗೊಳ್ಳಲಿದೆ.

6. SBI WeCare FD Scheme
ಇನ್ನು ಹಿರಿಯ ನಾಗರೀಕರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI Wecare FD ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು 7.5 ರ ಬಡ್ಡಿದರವನ್ನು ಪಡೆಯಬಹುದು. ಇನ್ನು ಸೆಪ್ಟೆಂಬರ್ 30 ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

Join Nadunudi News WhatsApp Group