Galaxy Mobiles: Samsung ಈ ಎರಡು ಮೊಬೈಲ್ ಖರೀದಿಸಲು ಅಂಗಡಿ ಮುಂದೆ ಕ್ಯೂ ನಿಂತ ಜನರು, ದಾಖಲೆಯ ಮಾರಾಟ

ಸ್ಯಾಮ್ ಸಂಗ್ ಕಂಪನಿಯ ಈ ಮೊಬೈಲ್ ಖರೀದಿಸಲು ಅಂಗಡಿ ಮುಂದೆ ಜನಸಂದಣಿ

Samsung Galaxy A25 5G And Galaxy A15 5G Smartphone Offer: ಮೊಬೈಲ್ ಖರೀದಿ ಮಾಡುವವರಿಗೆ ಸ್ಯಾಮ್‌ಸಂಗ್‌ (Samsung) ಉತ್ತಮ ಕೊಡುಗೆಯನ್ನು ನೀಡುತ್ತಿದೆ, ಈಗ ಸ್ಯಾಮ್‌ಸಂಗ್‌ ನ ಹೊಸ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವ ಮೂಲಕ ತನ್ನ ಗ್ರಾಹಕರನ್ನು ಆಕರ್ಷಿಸಲಿದೆ.

ಹೌದು, ಡಿಸೆಂಬರ್ 26, 2023 ರಂದು ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ A25 5G ಮತ್ತು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ಗಳನ್ನು (Samsung Galaxy A25 5G, Galaxy A15 5G smartphone) ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಇದೀಗ ಈ ಎರಡು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಆಫರ್ ನಲ್ಲಿ ಖರೀದಿಗೆ ಲಭ್ಯವಿದ್ದು ಇವುಗಳ ಸಂಪೂರ್ಣ ಮಾಹಿತಿ ತಿಳಿಯಿರಿ.

Samsung Galaxy A25 5G Smartphone
Image Credit: Livehindustan

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಬೆಲೆ ಹಾಗು ಲಭ್ಯತೆ

ಮ್‌ಸಂಗ್‌ ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ 6.5 ಇಂಚಿನ FHD + ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಅನ್ನು 2 ಸ್ಟೋರೇಜ್ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಅದರಂತೆ 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ 26,999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8GB RAM + 256GB ವೇರಿಯಂಟ್‌ಗೆ 29,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಎಸ್‌ಬಿಐ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 3,000 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಈ ವಿಶೇಷ ಸ್ಮಾರ್ಟ್‌ಫೋನ್ ನೀಲಿ, ಹಳದಿ ಮತ್ತು ನೀಲಿ ಕಪ್ಪು ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Join Nadunudi News WhatsApp Group

Samsung Galaxy A15 5G Smartphone
Image Credit: Original Source

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 5G ಬೆಲೆ ಹಾಗು ಲಭ್ಯತೆ

ಈ ಸ್ಮಾರ್ಟ್‌ಫೋನ್‌ ಸಹ ಎರಡು ಸ್ಟೋರೇಜ್‌ ವೇರಿಯಂಟ್‌ನಲ್ಲಿ ಲಭ್ಯ ಇದೆ. ಅಂದರೆ ಬೇಸಿಕ್ 8GB RAM + 128GB ಸ್ಟೋರೇಜ್ ಆಯ್ಕೆಯ ಫೋನ್‌ ಬೆಲೆ 19,499 ರೂ. ಗಳಾಗಿದ್ದು, ಹೈ-ಎಂಡ್ 8GB RAM + 256GB ಸ್ಟೋರೇಜ್‌ ಆಯ್ಕೆಯ ಫೋನ್‌ಗೆ 22,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್‌ ಖರೀದಿ ವೇಳೆಯಲ್ಲಿ ಎಸ್‌ಬಿಐ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿದ್ರೆ 1,500 ರೂ.ಗಳ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇದು ನೀಲಿ, ತಿಳಿ ನೀಲಿ ಮತ್ತು ನೀಲಿ ಕಪ್ಪು ಬಣ್ಣಗಳಲ್ಲಿ ಕಂಡುಬಂದಿದೆ.

Join Nadunudi News WhatsApp Group