Galaxy XCover 7: 2 ವರ್ಷ ವಾರೆಂಟಿ ಜೊತೆಗೆ ಅಗ್ಗದ ಬೆಲೆಗೆ ಲಾಂಚ್ ಆಯಿತು Samsung ಮೊಬೈಲ್, ಇಂದೇ ಬುಕ್ ಮಾಡಿ

2 ವರ್ಷದ ವಾರಂಟಿಯೊಂದಿಗೆ ಲಾಂಚ್ ಆಯ್ತು Galaxy XCover7

Samsung Galaxy XCover 7 Smartphone: ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ ಅತ್ಯಾಕರ್ಷಕ ಮೊಬೈಲ್ ಗಳು ಬೆಳಕಿಗೆ ಬಂದಿದೆ. ಅನೇಕ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ತಮ್ಮ ಕಂಪನಿಯ ಮೊಬೈಲ್ ಫೋನ್ ಗಳ  ಮೇಲೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡುತ್ತಿವೆ. ಇದೀಗ Samsung ಕಂಪನಿ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಅತಿ ಅಗ್ಗದ ಬೆಲೆಗೆ ಪರಿಚಯಿಸಿದೆ. ನೀವು ಮೊಬೈಲ್ ಖರೀದಿಸಲು ಬಯಸುತ್ತಿದ್ದರೆ ಈ ಹೊಸ ಮಾದರಿಯ ಮೊಬೈಲ್ ಬಗ್ಗೆ ತಿಳಿದುಕೊಳ್ಳಿ.

Samsung Galaxy XCover 7 Smartphone
Image Credit: Original Source

2 ವರ್ಷದ ವಾರಂಟಿಯೊಂದಿಗೆ ಲಾಂಚ್ ಆಯ್ತು Samsung Galaxy XCover 7 
ಸದ್ಯ ಮಾರುಕಟ್ಟೆಯಲ್ಲಿ Samsung ಕಂಪನಿಯು ಇದೀಗ ನೂತನವಾಗಿ 2 ವರ್ಷ ವಾರಂಟಿಯೊಂದಿಗೆ ಅತ್ಯಾಕರ್ಶಕ ಫೀಚರ್ ನ Samsung Galaxy XCover 7 Smartphone ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ 5G ಸ್ಮಾರ್ಟ್ಫೋನ್ ಗಳ ಸಾಲಿನಲ್ಲಿ ಇದೀಗ XCover7 ಸ್ಮಾರ್ಟ್ಫೋನ್ ಕೂಡ ಸೇರಿಕೊಳ್ಳಲಿದೆ.

ನೀವು ಮಾರುಕಟ್ಟೆಯಲ್ಲಿ XCover 7 Smartphone ನ Standard ಅಥವಾ Enterprise ರೂಪಾಂತರವನ್ನು ಖರೀದಿಸಬಹುದು. ಈ ಎರಡು ರೂಪತಾರಗಳ ಬೆಲೆಯೂ ಕ್ರಮವಾಗಿ 27,208 ಮತ್ತು 27,350 ರೂ. ಆಗಿದೆ. Galaxy XCover 7, ಅದರ ಉನ್ನತ ಬಾಳಿಕೆ, ಕಠಿಣ ಕೇಸ್ ಮತ್ತು ಬಲವರ್ಧಿತ ಗಾಜಿನ ಪ್ರದರ್ಶನದೊಂದಿಗೆ ಮಿಲಿಟರಿ-ದರ್ಜೆಯ ಬಾಳಿಕೆ (MIL-STD-810H2) ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Samsung Galaxy XCover 7 Smartphone Price
Image Credit: Computerbild

Samsung Galaxy XCover7 ಸ್ಮಾರ್ಟ್ಫೋನ್ ನ ಕ್ಯಾಮರಾ ಫೀಚರ್ ಹೀಗಿದೆ
ನೀವು ಈ ನೂತನ Samsung Galaxy XCover7 Smartphone ನ ಕ್ಯಾಮರಾ ಫೀಚರ್ ನ ಬಗ್ಗೆ ಕೇಳಿದರೆ ಮೊಬೈಲ್ ಖರೀದಿಸಲು ಮನಸ್ಸು ಮಾಡುವುದಂತೂ ನಿಜ. ಈ ಸ್ಮಾರ್ಟ್ ಫೋನ್ ನ ಹಿಂಬದಿಯ್ಲಲಿ 50MP ಕ್ಯಾಮರಾ ಹಾಗೂ ಮುಂಭಾಗದಲ್ಲಿ 5MP ಕ್ಯಾಮರಾವನ್ನು ಅಳವಡಿಸಲಾಗಿದೆ. ಇನ್ನು 6GB RAM +128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಹಾಗೆಯೆ MicroSD Card ನ ಮೂಲಕ 1TB ವರೆಗೆ ಸ್ಟೋರೇಜ್ ಅನ್ನು ವಿಸ್ತರಿಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group