Samsung Smartphone Offer: ಸ್ಯಾಮ್ ಸಂಗ್ ಮೊಬೈಲ್ ಮೇಲೆ ಭರ್ಜರಿ ಆಫರ್ ಘೋಷಣೆ, ಅತೀ ಕಡಿಮೆ ಬೆಲೆಗೆ ಮೊಬೈಲ್ ಮಾರಾಟ.

Samsung Smartphone Offer: ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸ್ಮಾರ್ಟ್ ಫೋನ್ (Smartphone) ಕಂಪನಿಗಳು ಹೊಸ ರಿಯಾಯಿತಿಯೊಂದಿದೆ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇದೀಗ ಸ್ಯಾಮ್ ಸಂಗ್ ಕಂಪನಿ (Samsung Company) ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ಬಿಡುಗಡೆ ಮಾಡಿದೆ.

ಪ್ಲಿಪ್ ಕಾರ್ಟ್ ನಲ್ಲಿ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್
ಸ್ಯಾಮ್ ಸಂಗ್ ಗ್ಯಾಲಕ್ಸಿ S22 (Samsung galaxy S22) ಸರಣಿಯು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಈ ಸರಣಿಯ ಎಲ್ಲ ಸ್ಮಾರ್ಟ್ ಫೋನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಈ ಸ್ಮಾರ್ಟ್ ಫೋನ್ ಮೇಲೆ ನಿರೀಕ್ಷೆಗೂ ಮೀರಿದ ರಿಯಾಯಿತಿ ಸಿಗುತ್ತಿದೆ. ಪ್ಲಿಪ್ ಕಾರ್ಟ್ (Flipkart) ನಲ್ಲಿ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಫೋನ್ ಗಳನ್ನೂ ಮಾರಾಟ ಮಾಡಲಾಗುತ್ತದೆ.

Announcement of great offer on Samsung mobile, sale of mobile at very low price.
Image Source: News18

ಅತಿ ಕಡಿಮೆ ಬೆಲೆಯಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್
ಸ್ಯಾಮ್ ಸಂಗ್ ಗ್ಯಾಲ್ಯಾಕ್ಸಿ (Samsung Galaxy S22 Plus) S22 ಪ್ಲಸ್ 5 ಜಿ ಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್ ಫೋನ್ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಪ್ಲಿಪ್ ಕಾರ್ಟ್ ನಲ್ಲಿ (Flipkart) ಈ ಫೋನ್ ನ ಬೆಲೆ 101999 ರೂಪಾಯಿ. ಆದರೆ ಈಗಾಗಲೇ ಪ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಮೇಲೆ 31% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. 31 % ರಿಯಾಯಿತಿಯ ನಂತರ ಗ್ರಾಹಕರು ಸ್ಮಾರ್ಟ್ ಫೋನ್ ಅನ್ನು ಕೇವಲ 69,999 ರೂಪಾಯಿಗೆ ಖರೀದಿಸಬಹುದು.

Announcement of great offer on Samsung mobile, sale of mobile at very low price.
Image Source: India Today

ಸ್ಮಾರ್ಟ್ ಫೋನ್ ಎಕ್ಸ್ಚೇಂಜ್ ಆಫರ್ (Exchange Offer)
69,999 ಮೌಲ್ಯದ ಪ್ರೀಮಿಯಂ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ 21,400 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಆದರೆ ಇದು ವಿನಿಮಯ ಬೋನಸ್ ಆಗಿರಲಿದೆ.

Join Nadunudi News WhatsApp Group

ನಿಮ್ಮಲ್ಲಿ ಉತ್ತಮ ಸ್ಥಿತಿಯಲ್ಲಿರುವ ಸ್ಮಾರ್ಟ್ ಫೋನ್ ಇದ್ದರೆ ಮಾತ್ರ ನೀವು ಎಕ್ಸ್ ಚೇಂಜ್ ಬೋನಸ್ ಲಾಭವನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಗಹಕರು ಗರಿಷ್ಠ 21400 ರೂ.ರಿಯಾಯಿತಿಯನ್ನು ಪಡೆಯಬಹುದು.

Announcement of great offer on Samsung mobile, sale of mobile at very low price.
Image Source: India Today

Join Nadunudi News WhatsApp Group