Shaktikanta Das: ನೋಟ್ ಬ್ಯಾನ್ ಬೆನ್ನಲ್ಲೇ 2000 ರೂ ನೋಟುಗಳ ಮೇಲೆ ಇನ್ನೊಂದು ಘೋಷಣೆ, RBI ಬಹುದೊಡ್ಡ ಆದೇಶ.

2000 ರೂಪಾಯಿ ನೋಟುಗಳ ಮೇಲೆ ಇನ್ನೊಂದು ಆದೇಶ ಹೊರಡಿಸಿದ RBI.

Shaktikanta Das About 2000 Note: RBI ನೋಟು ವಿನಿಮಯಕ್ಕೆ ಸೆಪ್ಟೆಂಬರ್ 30 ರಿಂದ ಮತ್ತೆ ಸಮಯಾವಕಾಶವನ್ನು ನೀಡಿತ್ತು. RBI Septembar 30 ರ ಕೊನೆಯ ದಿನಾಂಕವನ್ನು October 7 ರ ವರೆಗೆ ಮಂದುವ ಮೂಲಕ ಸಾರ್ವಜನಿಕರಿಗೆ ಮತ್ತೆ ಅವಕಾಶವನ್ನು ನೀಡಿತ್ತು. ನಿಮ್ಮ ಬಳಿ ಇರುವ 2,000 ರೂ ನೋಟನ್ನು ಅಕ್ಟೋಬರ್ 7 ರವರೆಗೆ ನೀವು ವಿನಿಮಯ ಅಥವಾ ಠೇವಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತ್ತು.

ಸದ್ಯ RBI ನೀಡಿದ ಸಮಯಾವಕಾಶ ಮುಗಿದಿದ್ದು, October 8 ರಿಂದ 2,000 ರೂ ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇನ್ನುಮುಂದೆ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಿಸಿಕೊಳ್ಳಲು ಅವಕಾಶ ಇರುವುದಿಲ್ಲ. ಇದೀಗ 2000 ರೂಪಾಯಿ ನೋಟುಗಳ ಕುರಿತು RBI ಗವರ್ನರ್ ಮಾಹಿತಿ ನೀಡಿದ್ದಾರೆ.

Shaktikanta Das About 2000 Note
Image Credit: Opindia

ಬ್ಯಾಂಕ್ ನಲ್ಲಿ 2000 ನೋಟುಗಳಿಗೆ ಮೌಲ್ಯವಿಲ್ಲ
October 7 ವರೆಗೆ ಜನರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು. ಆದರೆ October 8 ರಿಂದ ಬ್ಯಾಂಕ್ ನಲ್ಲಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಸದ್ಯ ಇಲ್ಲಿ ಮಾತ್ರ 2000 ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇಲ್ಲಿ ಮಾತ್ರ 2000 ರೂ. ನೋಟುಗಳ ಠೇವಣಿಗೆ ಅವಕಾಶ
ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ. Reserve Bank Of India (RBI) 19 ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

Shaktikanta Das About 2000 Note
Image Credit: Panasiabiz

2000 ರೂ ನೋಟುಗಳ ಬಗ್ಗೆ ಶಕ್ತಿಕಾಂತ್ ದಾಸ್ ಹೇಳಿಕೆ
Reserve Bank of India ಗವರ್ನರ್ Shaktikanta Das ಅವರು 2000 ರೂ ನೋಟುಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. “2,000 ರೂಪಾಯಿ ನೋಟುಗಳು ವಾಪಸ್ ಬರುತ್ತಿದ್ದು, ಈಗ ಕೇವಲ 10,000 ಕೋಟಿ ರೂಪಾಯಿ ಮೌಲ್ಯದ ನೋಟುಗಳು ಜನರ ಬಳಿ ಇವೆ. ಈ ನೋಟುಗಳೂ ವಾಪಸು ಅಥವಾ ಠೇವಣಿಯಾಗಲಿವೆ ಎನ್ನುವ ವಿಶ್ವಾಸವಿದೆ. ಚಲಾವಣೆಯಿಂದ ಹಿಂತೆಗೆದುಕೊಂಡ 2000 ರೂಪಾಯಿ ನೋಟುಗಳ ಪೈಕಿ ಶೇ. 87 ರಷ್ಟು ನೋಟುಗಳು ಬ್ಯಾಂಕ್‌ ಗಳಲ್ಲಿ ಠೇವಣಿಯಾಗಿ ಹಿಂದಿರುಗಿವೆ ಎಂದು ಶಕ್ತಿಕಾಂತ್ ದಾಸ್ ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group