New Repo Rate: ಗೃಹಸಾಲ, ವಯಕ್ತಿಕ ಸಾಲ ಮತ್ತು ಇತರೆ ಬ್ಯಾಂಕ್ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್, RBI ನಿರ್ಧಾರ ಪ್ರಕಟ.

ರೆಪೋ ದರದ ಬದಲಾವಣೆ ಬಗ್ಗೆ ಶಕ್ತಿಕಾಂತ್ ದಾಸ್ ಮಹತ್ವದ ಘೋಷಣೆ.

Shaktikanta Das About Repo Rate: ಬ್ಯಾಂಕ್ ನಿಯಮಗಳಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಅನೇಕ ನಿಯಮಗಳು ಬದಲಾಗುತ್ತಿವೆ. ಏಪ್ರಿಲ್ 1, 2023 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಹೊಸ ಹಣಕಾಸು ವರ್ಷದ ಆರಂಭದಿಂದ ಹಣಕಾಸೇತರ ವ್ಯವಹಾರದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಹಣಕಾಸಿನ ವ್ಯವಹಾರಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ.

Shaktikanta Das About Repo Rate
Image Credit: Economictimes

ಆರ್ ಬಿಐ ರೆಪೋ ದರ (RBI Repo Rate) 
ಇನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಇತ್ತೀಚಿಗೆ ತನ್ನ ಎಂಸಿಎಲ್ಆರ್ ದರವನ್ನು ಪರಿಷ್ಕರಿಸುತ್ತಿದೆ. ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸಿದೆ. ಇನ್ನು ಇತ್ತೀಚಿಗೆ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಆರ್ ಬಿಐ ಸದ್ಯದಲ್ಲೇ ರೆಪೋ ದರ ಪರಿಷ್ಕರಿಸಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇದೀಗ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ರೆಪೋ ದರ ಹೆಚ್ಚಳದ ಕುರಿತು ಮಾಹಿತಿ ನೀಡಿದ್ದಾರೆ.

ಆರ್ ಬಿಐ ರೆಪೋ ದರ ಏರಿಕೆ ಸಾಧ್ಯತೆ
ಆರ್ ಬಿಐ ರೆಪೋ ದರ ಹೆಚ್ಚಿಸಿದೆ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ. ಇದೀಗ ಆರ್ ಬಿಐ ರೆಪೋ ದರದ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಕೂಡ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ ಆರ್ ಬಿಐ ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ.

RBI Governor Shaktikant Das announced that there is no change in Reserve Repo rate.
Image Credit: Hindustantimes

ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. ಇದೀಗ RBI ರೆಪೋ ದರ ಮತ್ತೆ ಹೆಚ್ಚಳ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ.

ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್
2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಈ ರೆಪೋ ದರಗಳ ಹೆಚ್ಚಳ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ. ಹಣ ದುಬ್ಬರವನ್ನು ಕಡಿಮೆ ಮಾಡುವತ್ತ ಆರ್ ಬಿಐ ಗಮನ ಹರಿಸಿದೆ. ಹಣದುಬ್ಬರವು ಆರ್ ಬಿಐ ಗುರಿಗಿಂತ ಹೆಚ್ಚಿದ್ದರೂ ಆರ್ ಬಿಐ 4 ಶೇ. ಹಣದುಬ್ಬರ ದರವನ್ನು ಸಾಧಿಸಲು ಬದ್ಧವಾಗಿದೆ.

Join Nadunudi News WhatsApp Group

Shaktikanta Das About Repo Rate
Image Credit: Rightsofemployees

ಪ್ರಮುಖ ಹಣದುಬ್ಬರ ದರವು ಕಡಿಮೆಯಾಗುತ್ತಿದೆ ಮತ್ತು ಇದರ ಪರಿಣಾಮವು ನೀತಿ ದರಗಳ ಮೇಲೆ ಕಂಡುಬರುತ್ತಿದೆ. ಇನ್ನು ‘ರೆಪೋ ದರ ಮತ್ತು ರಿಸರ್ವ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ’ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಹೊರಡಿಸಿದ್ದಾರೆ.

ಈ ಮೂಲಕ ಗೃಹಸಾಲ, ವಯಕ್ತಿಕ ಸಾಲ ಮತ್ತು ಇತರೆ ಬ್ಯಾಂಕ್ ಸಾಲ ಮಾಡಿದವರಿಗೆ ಸಿಹಿ ಸುದ್ದಿ ನೀಡಿದೆ. ರೆಪೋ ದರ ಹೆಚ್ಚಾದರೆ ಸಾಲದ EMI ಹೊರೆ ಕೂಡ ಹೆಚ್ಚಾಗುತ್ತಿತ್ತು. ಆದರೆ ಈ ಬಾರಿ ಕೂಡ ರೆಪೋ ದರ ಯಥಾಸ್ಥಿತಿ ಕಂಡುಕೊಂಡಿದೆ.

Join Nadunudi News WhatsApp Group