Vegetable Price: ಪ್ರತಿನಿತ್ಯ ತರಕಾರಿ ಕೊಳ್ಳುವ ಜನರಿಗೆ RBI ನಿಂದ ಗುಡ್ ನ್ಯೂಸ್, ಮಹತ್ವದ ಘೋಷಣೆ ಮಾಡಿದ RBI

ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹೆಚ್ಚುತ್ತಿರುವ ತರಕಾರಿ ಬೆಲೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

Shaktikanta Das About Vegetable Price: ಜನಸಾಮಾನ್ಯರು ಹೊಸ ಹಣಕಾಸು ವರ್ಷದ ಆರಂಭದಿಂದ ಹಣದುಬ್ಬರ ಪರಿಸ್ಥಿಯನ್ನು ಎದುರಿಸಬೇಕಾಗಿದೆ. ಈ ಬಾರಿಯ ಹಣದುಬ್ಬರದ ಪರಿಸ್ಥಿತ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ನಷ್ಟವನ್ನು ನೀಡುತ್ತಿದೆ. ಬೆಲೆಯ ಏರಿಕೆಯಿಂದಾಗಿ ಜನಸಾಮಾನ್ಯರು ವಿಚಲಿತರಾಗಿದ್ದಾರೆ.

ಪ್ರತಿ ನಿತ್ಯ ಬಳಸುವ ಆಹಾರ ಪದಾರ್ಥಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಇನ್ನು ಚಿನ್ನದ ಬೆಲೆ, ವಾಹನಗಳ ಬೆಲೆ, ದವಸ ದಾನ್ಯಗಳ ಬೆಲೆ, ಹೋಟೆಲ್ ತಿನಿಸುಗಳ ದರ, ಗ್ಯಾಸ್ ಸಿಲಿಂಡರ್ ಬೆಲೆ, ಕಚ್ಚಾ ತೈಲಗಳ ಬೆಳೆಯಿಂದ ಹಿಡಿದು ನಿತ್ಯ ಬಳಕೆಯ ತರಕಾರಿ ಬೆಲೆಯೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

Shaktikanta Das About Vegetable Price
Image Credit: Business

ತರಕಾರಿ ಬೆಲೆಯಲ್ಲಿ ಹೆಚ್ಚಿನ ಏರಿಕೆ
ಇನ್ನು ಈ ನಡುವೆ ದೇಶದಲ್ಲಿ ಟೊಮೇಟೊ ಬೆಲೆಯಂತು ಕೇಳಿದರೆ ಜನರಿಗೆ ಶಾಕ್ ಆಗುತ್ತಿದೆ. ಕೆಜಿಗೆ 20 ರೂ. ಇದ್ದ ಟೊಮೇಟೊ ಇದೀಗ 20 ರೂ. ನೀಡಿದರೆ ಅರ್ಧ ಟೊಮೇಟೊ ಕೂಡ ಸಿಗದ ಪರಿಸ್ಥಿತಿಯಲ್ಲಿದೆ. ಕಳೆದ ಎರಡು ಮೂರು ತಿಂಗಳಿಂದ ಟೊಮೊಟೊ ದರ 150 ರಿಂದ 200 ತಲುಪಿದೆ. ಟೊಮೇಟೊ ಖರೀದಿ ಜನರಿಗೆ ಕಷ್ಟವಾಗುತ್ತಿದೆ. ಟೊಮೊಟೊ ಬೆಲೆಯ ಏರಿಕೆಯ ಪರಿಣಾಮವಾಗಿ ಹೋಟೆಲ್ ಗಳ ತಿನಿಸುಗಳ ದರ ಕೂಡ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಈಗ ಟೊಮೊಟೊ ಬೆಲೆ ಇಳಿಕೆ ಆಗಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಟೊಮೇಟೊ ಬೆಲೆ ಏರಿಕೆಗೆ ತಾತ್ಕಾಲಿಕ ಸಮಸ್ಯೆ ಎದುರಾಗಿದೆ. ಟೊಮೇಟೊ ದರ ತೀವ್ರ ಏರಿಕೆಗೆ ಮಳೆಯೇ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಟೊಮೇಟೊ ದರ ಹೆಚ್ಚುತ್ತಿದೆ. ಇನ್ನು ಮುಂಗಾರು ಆರಂಭದ ಕಾರಣ ಟೊಮೇಟೊ ಬೆಳೆ ಪ್ರಸ್ತುತ ಋತುಮಾನದ ಬದಲಾವಣೆಗಳ ಮೂಲಕ ಸಾಗುತ್ತಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2022 -23 ರ ಬೆಳೆ ಋತುವಿನಲ್ಲಿ ಟೊಮೇಟೊ ಉತ್ಪಾದನೆಯು 20 .62 ಮಿಲಿಯನ್ ಟನ್ ಗಳು ಎಂದು ಅಂದಾಜಿಸಲಾಗಿದೆ. ಶೀಘ್ರವೇ ಟೊಮೊಟೊ ದರ ಇಳಿಕೆ ಆಗಲಿದೆ ಎಂದು ಆರ್ ಬಿಐ ಹೇಳಿದೆ. ಇದರ ಬೆನ್ನಲ್ಲೇ ಇದೀಗ ಆರ್ ಬಿಐ ಮಹತ್ವದ ಘೋಷಣೆ ಹೊರಡಿಸಿದೆ.

Join Nadunudi News WhatsApp Group

Good news from RBI for daily vegetable buyers
Image Credit: News9live

ಪ್ರತಿನಿತ್ಯ ತರಕಾರಿ ಕೊಳ್ಳುವ ಜನರಿಗೆ RBI ನಿಂದ ಗುಡ್ ನ್ಯೂಸ್
ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಹೆಚ್ಚುತ್ತಿರುವ ತರಕಾರಿ ಬೆಲೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭರದಲ್ಲಿ ತರಕಾರಿ ಬೆಲೆಗಳು ಕಡಿಮೆಯಾಗಲು ಪ್ರಾರಂಭಿಸಿವೆ ಮತ್ತು ಸೆಪ್ಟೆಂಬರ್ ನಿಂದ ಇನ್ನು ಇಳಿಕೆಯಾಗುವ ಸಾಧ್ಯತೆ ಇದೆ.

ಪುನರಾವರ್ತಿತ ಆಹಾರ ಮೇಲೇ ಆಘಾತಗಳು ಆಗಾಗ ಸಂಭವಿಸುವ ಘಟನೆಗಳು ಹಣದುಬ್ಬರ ನಿರೀಕ್ಷೆಯ್ನ್ನು ಹೆಚ್ಚಿಸುವ ಅಪಾಯವನ್ನು ಉಂಟುಮಾಡುತ್ತದೆ. ಇದು ಸೆಪ್ಟೆಂಬರ್ 2022 ರಿಂದ ನಡೆಯುತ್ತಿದೆ. ನಾವು ಇದನ್ನು ಗಮನಿಸುತ್ತೇವೆ. ಎಂದು ಶಕ್ತಿಕಾಂತ್ ದಾಸ್ (Shaktikanta Das) ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group