Shoe And Socks: 1 ರಿಂದ 10 ನೇ ತರಗತಿ ಮಕ್ಕಳಿಗೆ ಇನ್ನೊಂದು ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ನಿರ್ಧಾರ.

ಇನ್ನುಮುಂದೆ 1 ರಿಂದ 10 ನೇ ತರಗತಿ ಮಕ್ಕಳಿಗೆ ಸಿಗಲಿದೆ ಉಚಿತ ಶೂ ಮತ್ತು ಸಾಕ್ಸ್.

Shoe And Socks For School Students: 2023 -24 ನೇ ಸಾಲಿನ ಶಿಕ್ಷಣ ನೀತಿಯಲ್ಲಿ ಈ ಬಾರಿ ಸಾಕಷ್ಟು ಬದಲಾವಣೆ ಆಗಲಿದೆ. ಈಗಾಗಲೇ 5, 8,10, 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಹೊಸ ನಿಯಮಗಳು ಬಿಡುಗಡೆಗೊಂಡಿವೆ. ಇನ್ನು ಶಾಲೆಗಳು ಆರಂಭಗೊಂಡ ಹಿನ್ನಲೆ ಮಕ್ಕಳಿಗೆ ವಿವಿಧ ರೀತಿಯ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ರಾಜ್ಯದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಹೊಸ ಹೊಸ ನಿಯಮಗಳ ಜೊತೆಗೆ ವಿವಿಧ ಸೌಲಭ್ಯಗಳನ್ನು ನೀಡಲು ಮುಂದಾಗಿದೆ.

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಆರಂಭಗೊಂಡಿದೆ. ಶಾಲಾ ಮಕ್ಕಳ ಅನುಕೂಲಕ್ಕಾಗಿ ಶಿಕ್ಷಣ ಇಲಾಖೆ ಹಲವು ಸೌಲಭ್ಯವನ್ನು ಜಾರಿಗೊಳಿಸಿದೆ. ಇದೀಗ ಶಾಲಾ ಮಕ್ಕಳಿಗೆ ಶಿಸ್ತು ಬದ್ದ ಸಮವಸ್ರ್ತ ನೀಡಲಾಗುತ್ತದೆ. ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡುವ ಕುರಿತು ಈಗಾಗಲೇ ವರದಿಯಾಗಿದೆ.

School children will get shoes and socks
Image Credit: News18

1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ಇದೀಗ ಪ್ರಾಥಮಿಕ ಹಾಗೂ ಪ್ರಾಢಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. 1 ರಿಂದ 10 ನೇ ತರಗತಿಯ ಎಲ್ಲಾ ಎಸ್ ಡಿಎಂಸಿ ಅದ್ಯಕ್ಷರು, ಶಾಲಾ ಮುಖ್ಯಮಕ್ಕಳಿಗೆ ಒಂದು ಜೊತೆ ಶೂ ಮತ್ತು ಸಾಕ್ಸ್ ಖರೀದಿ ಪ್ರಕ್ರಿಯೆಯನ್ನು ಆರಂಭ ಮಾಡುವಂತೆ ಶಿಕ್ಷಣ ಇಲಾಖೆಯು ಎಸ್ ಡಿಎಂಸಿಗಳಿಗೆ ಸೂಚನೆ ನೀಡಿದೆ.

ಇನ್ನುಮುಂದೆ ಶಾಲಾ ಮಕ್ಕಳಿಗೆ ಸಿಗಲಿದೆ ಶೂ ಮತ್ತು ಸಾಕ್ಸ್
ಶಾಲಾ ಮಕ್ಕಳಿಗೆ ಸಮವಸ್ತ್ರದ ಜೊತೆಗೆ ಶೂ ಹಾಗೂ ಸಾಕ್ಸ್ ನೀಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ 265 ರೂ. 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ 295 ರೂ. 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ 325 ರೂ.

School children will get shoes and socks
Image Credit: Timesnownews

ಶೂ ಮತ್ತು ಸಾಕ್ಸ್ ನೀಡಲು ನಿಗದಿ ಮಾಡಲಾಗಿದೆ. ಮಕ್ಕಳಿಗೆ ಈ ಸೌಲಭ್ಯವನ್ನು ನೀಡಲು ಆಯಾ ಬಿಇಒ ಕೂಡಲೇ ಕ್ರಮ ವಹಿಸಬೇಕು ಎಂದು ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಸರ್ಕಾರೀ ಶಾಲೆಗೆ ಹೋಗುವ ಮಕ್ಕಳಿಗೂ ಯಾವುದೇ ಕಡಿಮೆ ಅನಿಸಬಾರದು ಅನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಈ ನಿರ್ಧಾರವನ್ನ ಮಾಡಿದೆ.

Join Nadunudi News WhatsApp Group

Join Nadunudi News WhatsApp Group