Siddaramaiah Love Story: ಸಿದ್ದರಾಮಯ್ಯ ಮೊದಲು ಪ್ರೀತಿ ಮಾಡಿದ ಹುಡುಗಿ ಯಾರು ಗೊತ್ತಾ…? ಕ್ಯೂಟ್ ಆಗಿದೆ ಸಿದ್ದು ಲವ್ ಸ್ಟೋರಿ.

ಸಿದ್ದರಾಮಯ್ಯ ಮೊದಲು ಪ್ರೀತಿ ಮಾಡಿದ ಹುಡುಗಿ ಯಾರು ಗೊತ್ತಾ...?

Siddaramaiah Love Story: ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ರಾಜಕೀಯ ವಿಚಾರವಾಗಿ ಸಿದ್ದರಾಮಯ್ಯ ಅವರು ಆಗಾಗ ಸುದ್ದಿಯಾಗುತ್ತಾರೆ. ಸದ್ಯ ಸಿದ್ದರಾಮಯ್ಯ ಅವರು ತಮ್ಮ ಪ್ರೀತಿಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಲವ್ ಸ್ಟೋರಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಸಿದ್ದು ಲವ್ ಸ್ಟೋರಿ ಇದೀಗ ಬಾರಿ ವೈರಲ್ ಆಗುತ್ತಿದೆ.

Siddaramaiah Love Story
Image Credit: Oneindia

ಸಿದ್ದರಾಮಯ್ಯ ಮೊದಲು ಪ್ರೀತಿ ಮಾಡಿದ ಹುಡುಗಿ ಯಾರು ಗೊತ್ತಾ…?
ಜನ ಸ್ಪಂದನ ಹಾಗೂ ಮಾನವ ಮಂಟಪ ಆಯೋಜಿಸಿದ್ದ ಅಂತರ್‌ ಜಾತಿ ವಿವಾಹ ನೋಂದಣಿ ವೇದಿಕೆಯ ವೆಬ್‌ ಸೈಟ್‌ ಉದ್ಘಾಟಿಸಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜ್ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ನನಗೂ ಅಂತರ್ಜಾತಿ ವಿವಾಹ ಆಗಬೇಕು ಎನ್ನುವ ಆಸೆ ಇತ್ತು. ನಾನು ಲಾ ಓದುತ್ತಿದ್ದಾಗ ಬೇರೆ ಜಾತಿಯ ಸ್ನೇಹಿತೆಯನ್ನು ಮದುವೆಯಾಗಲು ಬಯಸಿದ್ದೆ. ಆದರೆ ಆ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಾಲೇಜು ದಿನಗಳಲ್ಲಿ ತಮ್ಮ ಒನ್ ಸೈಡ್ ಲವ್ ಸ್ಟೋರಿ ನೆನಪಿಸಿಕೊಂಡಿದ್ದಾರೆ.

ಅಂತರ್ಜಾತಿ ವಿವಾಹಗಳಿಂದ ಮಹಿಳೆಯರು ಮತ್ತು ಎಲ್ಲಾ ವರ್ಗದ ದುರ್ಬಲ ವರ್ಗದವರು ಆರ್ಥಿಕ ಶಕ್ತಿ ಪಡೆದಾಗ ಸಮಾಜದಲ್ಲಿ ಚಲನೆ ಉಂಟಾಗುತ್ತದೆ. ಸಮಾನ ಸಮಾಜದ ಆಶಯ ಈಡೇರಲು ಜಾತಿ ನಾಶ ಸಾಧ್ಯ ಎಂದರು. ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶವಾಗುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಂಬೇಡ್ಕರ್ ಮತ್ತು ಕುವೆಂಪು ಅವರ ಆಸೆಯಂತೆ ಸಮಾನ ಸಮಾಜ ನಿರ್ಮಾಣವಾಗಬೇಕಾದರೆ ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group