Siddu Moolomani And Priya Achar: ಗಟ್ಟಿಮೇಳ ನಟಿ ಪ್ರಿಯಾ ಮತ್ತು ಪಾರು ನಟ ಸಿದ್ದು ಮದುವೆಗೆ ಡೇಟ್ ಫಿಕ್ಸ್.

Siddu Moolimani And Priya J Achar Marriage: ಜೀ ಕನ್ನಡ (zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳ (Gattimela) ಅತಿ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.

ಗಟ್ಟಿಮೇಳ ಧಾರಾವಾಹಿ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಆಗಿ ಮಿಂಚುತ್ತಿದೆ. ಈ ಧಾರಾವಾಹಿಯಲ್ಲಿ ಪ್ರತಿಯೊಬ್ಬರ ಪಾತ್ರ ಸಹ ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಪ್ರಿಯಾ ಸಹ ಅದ್ಭುತವಾಗಿ ನಟಿಸುತ್ತಿದ್ದಾರೆ.

GattiMela actress Priya and Paru actor Siddu fix date for marriage.
Image Credit: instagram

ಇತ್ತೀಚಿಗೆ ಪಾರು ಸೀರಿಯಲ್ ನಟ ಸಿದ್ದು ಮೂಲಿಮನಿ (Siddu Moolimani) ಜೊತೆ ಗಟ್ಟಿಮೇಳ ಪ್ರಿಯಾ J ಆಚಾರ್ (Priya J Achar)  ನಿಶ್ಚಿತಾರ್ಥ ಮಾಡಿಕೊಂಡಿದ್ದು ಈಗ ಇವರಿಬ್ಬರ ಮದುವೆಗೆ ಡೇಟ್ ಫಿಕ್ಸ್ ಆಗಿದೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ
ಕಿರುತೆರೆಯಲ್ಲಿ ಮದುವೆ ದಿಬ್ಬಣ್ಣದ ಸೌಂಡ್ ಜೋರಾಗಿದೆ. ಗಟ್ಟಿಮೇಳ ಪ್ರಿಯಾ ಮತ್ತು ಪಾರು ಧಾರಾವಾಹಿಯ ಸಿದ್ದು ಮೂಲಿಮನಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Sidhu Moolimani and Priya J Achar's wedding date has been fixed
Image Credit: instagram

ಕಿರುತೆರೆಯ ಲವ್ ಬರ್ಡ್ಸ್ ಪ್ರಿಯಾ ಮತ್ತು ಸಿದ್ದು ಮದುವೆಗೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ವಾಹಿನಿಯ ರಿಯಾಲಿಟಿ ಶೋ ನಲ್ಲಿ ಶುರುವಾದ ಸ್ನೇಹ ಧಮಾಕ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಇವರಿಬ್ಬರ ಪ್ರೀತಿ ಶುರುವಾಯಿತು. ಈಗ ಹಿರಿಯರ ಒಪ್ಪಿಗೆಯ ಮೇರೆಗೆ ಪ್ರಿಯಾ ಮತ್ತು ಸಿದ್ದು ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

Join Nadunudi News WhatsApp Group

Priya J Achar is getting married to Siddu Moolimani
Image Credit: instagram

ಫೆಬ್ರವರಿಯಲ್ಲಿ ನಟ ಸಿದ್ದು ಮತ್ತು ಪ್ರಿಯಾ ಮದುವೆ
ಕಳೆದ ನವೆಂಬರ್ ನಲ್ಲಿ ಗಟ್ಟಿಮೇಳ ಖ್ಯಾತಿಯ ಪ್ರಿಯಾ ಮತ್ತು ಸಿದ್ದು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್ ಗೆ ಸರ್ಪ್ರೈಸ್ ನೀಡಿದ್ದರು.

ಈಗ ಮದುವೆಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಗಟ್ಟಿಮೇಳ ನಟಿ ಪ್ರಿಯಾ ಜೊತೆ ಇದೇ ಫೆಬ್ರವರಿಯಲ್ಲಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಿದ್ದು ಮದುವೆಯಾಗುತ್ತಿದ್ದಾರೆ. ಇವರಿಬ್ಬರ ಮದುವೆ ಸುದ್ದಿ ಕೇಳುತಿದ್ದಂತೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Join Nadunudi News WhatsApp Group