Sim Deactivation : ರಾತ್ರೋರಾತ್ರಿ ಕೇಂದ್ರ ಸರ್ಕಾರದ ದೊಡ್ಡ ಘೋಷಣೆ, ಇಂತಹ ಜನರ ಮೊಬೈಲ್ ಸಂಖ್ಯೆ ರದ್ದು.

ಇಂತಹ ಜನರ ಸಿಮ್ ಕಾರ್ಡ್ ರದ್ದು ಮಾಡಿದ ಸರ್ಕಾರ.

Sim Deactivation Latest Update: ಸದ್ಯ ದೇಶದಲ್ಲಿ ವಂಚನೆಯ ಪ್ರಕರಣಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ. ಹೆಚ್ಚುತ್ತಿರುವ ವಂಚನೆಯ ತಡೆಗಾಗಿ ಸರ್ಕಾರ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಡಿಜಿಟಲ್ ವಂಚನೆಯ ತಡೆಗಾಗಿ ಸರ್ಕಾರ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

ಇನ್ನು ವಂಚನೆಗೆ ಮುಖ್ಯ ಕಾರಣ ಮೊಬೈಲ್ ಸಂಖ್ಯೆಗಳು. ಅಂದರೆ ಬಳಕೆದಾರರು ವಿವಿಧ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವಂಚನೆಯನ್ನು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕಾಗಿ ಸರಕಾರ ಸಿಮ್ ಕಾರ್ಡ್ ಖರೀದಿಯಲ್ಲಿ ಹೊಸ ಹೊಸ ನಿಯಮ ಅಳವಡಿಸುತ್ತಿದೆ. ಈಗಾಗಲೇ ದೇಶದಲ್ಲಿ ಸಾಕಷ್ಟು ಜನರ ಮೊಬೈಲ್ ಸಂಖ್ಯೆಯನ್ನು ಸರಕಾರ ರದ್ದು ಮಾಡಿದೆ.

Sim Deactivation Latest Update
Image Credit: Retailnews

ರಾತ್ರೋರಾತ್ರಿ ಕೇಂದ್ರ ಸರ್ಕಾರದ ದೊಡ್ಡ ಘೋಷಣೆ
ಇತ್ತೀಚಿಗೆ ಜನರು ಸುಳ್ಳು ಮಾಹಿತಿಯನ್ನ ನೀಡಿ ಹೆಚ್ಚು ಹೆಚ್ಚು ಸಿಮ್ ಗಳನ್ನೂ ಖರೀದಿಸುತ್ತಿದ್ದಾರೆ. ದೂರ ಸಂಪರ್ಕ ಇಲಾಖೆ ಬಲ್ಕ್ ಸಿಮ್ ಖರೀದಿಯನ್ನು ನಿಷೇದಿಸಿದ್ದು, ಇದರ ಬದಲಾಗಿ ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಬಿಸಿನೆಸ್ KYC ಮಾತ್ರವಲ್ಲದೆ, ಆ ಸಿಮ್ ಪಡೆದುಕೊಂಡ ವ್ಯಕ್ತಿಯ KYC ಕೂಡ ಮಾಡಲಾಗುತ್ತದೆ.

ಸಿಮ್ ಖರೀದಿಗೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ
ಇನ್ನುಮುಂದೆ ಹೊಸ ಫೋನ್ ಸಿಮ್ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಎಲ್ಲಾ ಸೇಲ್ ಡೀಲರ್ ಗಳಿಗೆ ನೋಂದಣಿ ಕಡ್ಡಾಯವಾಗಿದೆ. ಇನ್ನು ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಅಸ್ತಿತ್ವದಲ್ಲಿರುವ ಅಂಗಡಿಗಳು ಸಹ ಈಗಾಗಲೇ ಹೊಸ ನಿಯಮದ ಪ್ರಕಾರ ತಮ್ಮ KYC ಅನ್ನು ಮಾಡಬೇಕಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 10 ಲಕ್ಷ ದಂಡ ವನ್ನು ವಿಧಿಸಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

Sim Deactivation
Image Credit: Manilashaker

ಇಂತಹ ಜನರ ಮೊಬೈಲ್ ಸಂಖ್ಯೆ ರದ್ದು
ಹೆಚ್ಚುತ್ತಿರುವ ನಕಲಿ ಸಿಮ್ ಗಳ ಬಳಕೆಯನ್ನು ತಡೆಗಟ್ಟಲು ಸರ್ಕಾರ  ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ನಿಯಮದ ಪ್ರಕಾರ, ಮಾರಾಟಗಾರರು ಪೂರ್ವ ಸಕ್ರಿಯಗೊಳಿಸಿದ ಸಿಮ್ ಗಳನ್ನೂ ಇತರರಿಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಇನ್ನು ಸರ್ಕಾರ ಡಿಜಿಟಲ್ ವಂಚನೆಯ ವಿರುದ್ಧ ಕ್ರಮ ಕೈಗೊಂಡಿದ್ದು ಈಗಾಗಲೇ 70 ಲಕ್ಷ ಮೊಬೈಲ್ ಸಂಖ್ಯೆಗಳು ರದ್ದಾಗಿವೆ. ಈ ಮೂಲಕ ದೇಶದಲ್ಲಿ ಸಂಭವಿಸಲಿರುವ 900 ಕೋಟಿ ರೂ. ಗಳ ವಂಚನೆಯನ್ನು ಸರ್ಕಾರ ತಡೆದಿದೆ.

Join Nadunudi News WhatsApp Group

Join Nadunudi News WhatsApp Group