Singer Mangli Remuneration: ದುಬಾರಿ ಆಯಿತು ಒಂದು ಹಾಡಿಗೆ ಮಂಗ್ಲಿ ಪಡೆಯುವ ಸಂಭಾವನೆ, ದುಬಾರಿ ಸಿಂಗರ್ ಮಂಗ್ಲಿ.

Singer Mangli Remuneration: ಕನ್ನಡ ಹಾಗು ಇನ್ನಿತರ ಭಾಷೆಗಳಿಗೆ ಧ್ವನಿಯಾದ ಗಾಯಕಿ ಮಂಗ್ಲಿ (Singer Mangli) ತಮ್ಮ ಹಾಡಿನ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈಗ ಗಾಯಕಿ ಮಂಗ್ಲಿ ಸಿನಿಮಾದಲ್ಲಿ ಸಹ ನಟಿಸಲು ಮುಂದಾಗಿದ್ದಾರೆ.

Mangli, a singer who asked for expensive remuneration for singing
Image Credit: instagram

ಹಲವು ಭಾಷೆಯ ಗಾಯಕಿ ಮಂಗ್ಲಿ
ಗಾಯಕಿ ಮಂಗ್ಲಿ ಮೊದಲು ಜಾನಪದ ಹಾಡನ್ನು ಹಾಡುತ್ತ ಮುಂದೆ ಬಂದು ಈಗ ಹಾಲವು ಭಾಷೆಯ ಸಿನಿಮಾಗಳಿಗೆ ಹಾಡುವುದರ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಗಾಯಕಿ ಮಂಗ್ಲಿ ಮೊದಲು ಟಿವಿಯಲ್ಲಿ ಹಾಸ್ಯ ಕಾರ್ಯಕ್ರಮ ಮಾಡುತ್ತ ನಿರೂಪಣೆ ಮಾಡುತ್ತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ಮಂಗ್ಲಿ ಅವರು ಹಲವು ಭಾಷೆಯ ಖ್ಯಾತ ಗಾಯಕಿ ಆಗಿದ್ದಾರೆ.

Mangli, the singer, gets paid dearly to sing a song
Image Credit: instagram

ಸಂಭಾವನೆಯನ್ನು ಹೆಚ್ಚಿಸಿಕೊಂಡ ಮಂಗ್ಲಿ
ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಂಗ್ಲಿ ತಮ್ಮ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಟಿವಿ ಶೋಗಳು ಆ ಬಳಿಕ ತೆಲಂಗಾಣ ಜನಪದ ಹಾಡುಗಳು, ಜಾತ್ರೆ ಹಾಡುಗಳು, ಸಂಕ್ರಾಂತಿ ಹಾಡುಗಳು, ಸಮಕ್ಕ ಸಾರಕ್ಕ ಜಾತ್ರೆ ಹಾಡುಗಳ ಮೂಲಕ ಜನಪ್ರಿಯಗೊಂಡ ಮಂಗ್ಲಿ ಆ ನಂತರ ಬಹಳ ವೇಗವಾಗಿ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಪಡೆದುಕೊಂಡರು.

Singer Mangli gets a salary of 2 lakh rupees for singing a song
Image Credit: instagram

ಹಾಡುವುದಕ್ಕೆ ದುಬಾರಿ ಸಂಭಾವನೆ ಕೇಳಿದ ಮಂಗ್ಲಿ
ಮಂಗ್ಲಿ ಮೊದಲು ಪ್ರತಿ ಹಾಡಿಗೆ ಕೇವಲ 20000 ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರು. ಇತ್ತೀಚಿಗೆ ತಮಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಹಾಡುವುದಕ್ಕೆ 2 ಲಕ್ಷ ಸಂಭಾವನೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ತಮ್ಮ ಲೈವ್ ಶೋಗಳ ಸಂಭಾವನೆಯನ್ನೂ ಸಹ ದೊಡ್ಡ ಮಟ್ಟದಲ್ಲಿ ಮಂಗ್ಲಿ ಏರಿಸಿದ್ದಾರೆ.

Singer Mangli gets a salary of two lakhs per song and expensive remuneration for stage programs
Image Credit: instagram

ಬಹಳಷ್ಟು ಜನಪ್ರಿಯ ಆದ ಮಂಗ್ಲಿ
ದರ್ಶನ್ (Darshan) ನಟನೆಯ ರಾಬರ್ಟ್ (Robert) ಸಿನಿಮಾದ ತೆಲುಗು ಆವೃತ್ತಿಗಾಗಿ ಕಣ್ಣೇ ಅಧಿರಿಂದಿ ಹಾಡನ್ನು ಮಂಗ್ಲಿ ಹಾಡಿದ್ದರು. ಆ ಹಾಡು ಭಾರಿ ಹಿಟ್ ಆದ ಬೆನ್ನಲ್ಲೆ ಕನ್ನಡದಲ್ಲಿ ಮಂಗ್ಲಿಗೆ ದೊಡ್ಡ ಮಟ್ಟದ ಬೇಡಿಕೆ ಬಂದಿತ್ತು. ಆ ಹಾಡಿನ ಬಳಿಕ ಹಲವು ಕನ್ನಡ ಹಾಡುಗಳನ್ನು ಮಂಗ್ಲಿ ಹಾಡಿದ್ದಾರೆ. ಏಕ್ ಲವ್ ಯಾ ಸಿನಿಮಾಕ್ಕಾಗಿ ಮಂಗ್ಲಿ ಹಾಡಿರುವ ಹಾಡು ಬಹಳ ಜನಪ್ರಿಯವಾಗಿದೆ.

Join Nadunudi News WhatsApp Group

Join Nadunudi News WhatsApp Group