Smart Meter: ಈಗ ಮೋಸ ಮಾಡಲು ಸಾಧ್ಯವಿಲ್ಲ,ಈ ಯಂತ್ರದ ಮೂಲಕ ತಿಳಿದುಕೊಳ್ಳಿ ನೀವು ಬಳಸಿದ ವಿದ್ಯುತ್ ಯೂನಿಟ್.

ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ನಿಮ್ಮ ಮನೆಯ ಅಥವಾ ಆಫೀಸ್ ನಲ್ಲಿ ಎಷ್ಟು ವಿದ್ಯುತ್ ಬಳಸಿದ್ದೀರಾ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Smart Prepaid Meter Installation: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಾರಿ ಚರ್ಚೆ ನಡೆಯುತ್ತಿದೆ. ಈಗಾಗಲೇ ರಾಜ್ಯದಲ್ಲಿ ಜೂನ್ 11 ರಿಂದ ಶಕ್ತಿ ಯೋಜನೆ ಜಾರಿಯಾಗಿದೆ. ಇನ್ನು ನಾಲ್ಕು ಯೋಜನೆಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಇನ್ನು ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆ ಬಿಡುಗಡೆ ಆಗುವ ಬಗ್ಗೆ ಈಗಾಗಲೇ ಸಾಕಷ್ಟು ಅಪ್ಡೇಟ್ ಹರಡಿದ್ದವು. ಗೃಹ ಜ್ಯೋತಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಈಗಾಗಲೇ ಜನಸಾಮಾನ್ಯರಲ್ಲಿ ಗೊಂದಲ ಏರ್ಪಟ್ಟಿದೆ. ಅರ್ಹ ಫಲಾನುಭವಿಗಳು ಯಾರು ಎನ್ನುವ ಬಗ್ಗೆ ಸರ್ಕಾರ ಹೊಸ ಹೊಸ ಆದೇಶ ಹೊರಡಿಸುತ್ತಿದೆ.

How to check how many units of electricity are consumed
Image Credit: financialexpress

ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತ
ಕಾಂಗ್ರೆಸ್ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಆಗಸ್ಟ್ 1 ರಿಂದ ಜಾರಿಗೆ ತರಲು ತೀರ್ಮಾನಿಸಿದೆ. 12 ತಿಂಗಳ ಸರಾಸರಿ ಆಧಾರದ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ನೀವು ಸರಾಸರಿ 70 ಯೂನಿಟ್ ಕರೆಂಟ್ ಬಳಸಿದ್ದರೆ ಅಥವಾ 199 ಯೂನಿಟ್ ಕರೆಂಟ್ ಬಳಕೆ ಮಾಡಿದ್ದರೆ, ಅಂದರೆ 12 ತಿಂಗಳ ಸರಾಸರಿ ಮೇಲೆ ವಿದ್ಯುತ್ ಫ್ರೀ ಕೊಡಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಆಗಸ್ಟ್ ನಿಂದ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಜೂನ್ ತಿಂಗಳ ಬಿಲ್ ಕಟ್ಟಬೇಕು ಹಾಗೂ ಜುಲೈ ತಿಂಗಳ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಚಾರ್ಜ್ ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದೀಗ ನೀವು ನಿಮ್ಮ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಎಷ್ಟು ಯುನಿಟ್ ವಿದ್ಯುತ್ ಬಳಸಿದ್ದೀರಿ ಎನ್ನುವ ಬಗ್ಗೆ ತಿಳಿದುಕೊಳ್ಳಲು ಹೊಸ ಸಾಧನವನ್ನು ಕಂಡುಹಿಡಿಯಲಾಗಿದೆ.

How to check how many units of electricity are consumed
Image Credit: dnaindia

ಎಷ್ಟು ಯುನಿಟ್ ವಿದ್ಯುತ್ ಬಳಕೆ ಆಗಿದೆ ಎನ್ನುವ ಬಗ್ಗೆ ಪರಿಶೀಲಿಸುವ ವಿಧಾನ
ಸ್ಮಾರ್ಟ್ ಪ್ರೀಪೈಡ್ ಮೀಟರ್ ಅಳವಡಿಸಿಕೊಂಡು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ನಿಮ್ಮ ಮನೆಯಲ್ಲಿ ಅಥವಾ ಆಫೀಸ್ ನಲ್ಲಿ ಎಷ್ಟು ವಿದ್ಯುತ್ ಬಳಸಿದ್ದೀರಾ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಡಿಸ್ಕಾಂಗಳು (DISCOM) ಸ್ಮಾರ್ಟ್ ಮೀಟರ್ ಗಳನ್ನೂ ಪ್ರತಿದಿನ ರಿಮೋಟ್ ಮೂಲಕ ಪರಿಶೀಲಿಸಬೇಕು.

Join Nadunudi News WhatsApp Group

ಡಿಸ್ಕಾಂಗಳ ಬಳಿ ಇರುವ ಸ್ಮಾರ್ಟ್ ಮೀಟರ್ ಗಳ ಡೇಟಾವನ್ನು ಪ್ರತಿದಿನ ನವೀಕರಿಸಲಾಗುತ್ತದೆ. ಆ ಡೇಟಾವನ್ನು ವೆಬ್ ಸೈಟ್ ಅಥವಾ ಅಪ್ಲಿಕೇಶನ್ ಗಳಲ್ಲಿ ಇರಿಸಬೇಕು ಅಥವಾ SMS ಆಗಿ ಕಳುಹಿಸಬೇಕು. ಡಿಸ್ಕಾಂ ಈ ರೀತಿ ಮಾಡುದರಿಂದ ಗ್ರಾಹಕರು ಪ್ರತಿನಿತ್ಯ ಎಷ್ಟು ವಿದ್ಯುತ್ ಬಳಸಿದ್ದಾರೆ,ಎಷ್ಟು ಬಳಸಬಹುದು, ಎಷ್ಟು ಬ್ಯಾಲೆನ್ಸ್ ಉಳಿದಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group