Expiry Date: ನಿಮ್ಮ ಮೊಬೈಲಿಗೆ Expiry ಡೇಟ್ ಇದೆಯಾ…? ಒಂದು ಮೊಬೈಲ್ ಎಷ್ಟು ವರ್ಷಗಳ ನಂತರ Expiry ಆಗುತ್ತೆ.

ಸ್ಮಾರ್ಟ್ ಫೋನ್ ಗಳು ಎಷ್ಟು ವರ್ಷದ ಬಳಿಕ Expiry ಆಗುತ್ತದೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Smartphone Expiry Date: ಸಾಮಾನ್ಯವಾಗಿ ನಾವು ಬಳಸುವಂತಹ ಎಲ್ಲ ವಸ್ತುಗಳು ಕೂಡ ಒಂದಲ್ಲ ಒಂದು ಹಾಳಾಗುತ್ತವೆ. ವೈಜ್ಞಾನಿಕವಾಗಿ ಹೇಳಬೇಕಂದರೆ ಎಲ್ಲ ವಸ್ತುಗಳಿಗೂ ಎಕ್ಸ್ ಪೈರಿ (Expiry Date) ಇದ್ದೆ ಇರುತ್ತದೆ. ಇನ್ನು ಸದ್ಯದ ಡಿಜಿಟಲ್ ದುನಿಯಾದಲ್ಲಿ ಹೆಚ್ಚಾಗಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯಾಗುತ್ತಿದೆ. ಈ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಮುಕ್ತಾಯದ ದಿನಾಂಕವನ್ನು ಹೊಂದಿರುತ್ತದೆ.

Smartphone Expiry Date
Image Credit: News 24

ನಿಮ್ಮ ಮೊಬೈಲಿಗೆ Expiry ಡೇಟ್ ಇದೆಯಾ…?
ಇನ್ನು ನಾವು ದೈನಂದಿನ ಜೀವನದಲ್ಲಿ ಬಳಸುವಂತಹ ಸ್ಮಾರ್ಟ್ಫೋನ್ ಗಳಿಗೆ ಕೂಡ ಎಕ್ಸ್ ಪೈರಿ ಡೇಟ್ ಇದ್ದೆ ಇರುತ್ತದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗೆ ಮುಕ್ತಾಯದ ದಿನಾಂಕ ಯಾವುದು..? ಹಾಗೆಯೆ ಸ್ಮಾರ್ಟ್ ಫೋನ್ ನಲ್ಲಿ ಎಕ್ಸ್ ಪೈರಿ ಡೇಟ್ ಎಲ್ಲಿ ಇರುತ್ತದೆ..? ಎನ್ನುವ ಪ್ರಶ್ನೆ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು. ಸ್ಮಾರ್ಟ್ ಫೋನ್ ಗಳು ಎಷ್ಟು ವರ್ಷದ ಬಳಿಕ ಮುಕ್ತಾಯಗೊಳ್ಳುತ್ತದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

ಒಂದು ಮೊಬೈಲ್ ಎಷ್ಟು ವರ್ಷಗಳ ನಂತರ Expiry ಆಗುತ್ತೆ
ಸ್ಮಾರ್ಟ್ಫೋನ್ ಎಲೆಕ್ಟ್ರಾನಿಕ್ ಸಾಧನವಾಗಿದೆ. ಇತರ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಂತೆ, ಸ್ಮಾರ್ಟ್‌ ಫೋನ್ ತನ್ನ ಬ್ಯಾಟರಿಯಲ್ಲಿ ರಾಸಾಯನಿಕಗಳನ್ನು ಬಳಸುತ್ತದೆ. ಅದು ಸ್ವಲ್ಪ ಸಮಯದ ನಂತರ ಮುಕ್ತಾಯಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ ಗಳು ಸ್ಥಿರ ಬ್ಯಾಟರಿಗಳೊಂದಿಗೆ ಬರುತ್ತಿವೆ ಮತ್ತು ಬ್ಯಾಟರಿ ಹಾನಿಗೊಳಗಾದರೆ ನೀವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ.

Smartphone Expiry Date Check
Image Credit: Pakkafilmy

ಸ್ಮಾರ್ಟ್ ಫೋನ್ ನ ಎಕ್ಸ್ ಪೈರಿ ಬಗ್ಗೆ ಹೇಳುವುದಾದರೆ, ಎಷ್ಟು ವರ್ಷ ಬಳಸಿದರೂ ಅವಧಿ ಮುಗಿಯುವುದಿಲ್ಲ. ವಾಸ್ತವವಾಗಿ, ಸ್ಮಾರ್ಟ್ಫೋನ್ ನಿರ್ದಿಷ್ಟ ಮುಕ್ತಾಯ ದಿನಾಂಕವನ್ನು ಹೊಂದಿಲ್ಲ. ಆದಾಗ್ಯೂ, ಕೆಲವು ಕಾರಣಗಳಿಂದ, ಸ್ಮಾರ್ಟ್ಫೋನ್ ಗಳನ್ನೂ ಒಂದು ದಿನ ಸರಿಯಾಗಿ ಬಳಸದಿದ್ದರೂ ಸಹ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.

ಸ್ಮಾರ್ಟ್ಫೋನ್ ನ ಜೀವತಾವಾದಿ ಎಷ್ಟಿರುತ್ತದೆ…?
ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಬ್ರಾಂಡೆಡ್ ಸ್ಮಾರ್ಟ್ ಫೋನ್ ಸ್ವಲ್ಪ ಸಮಯದವರೆಗೆ ನಿಮಗೆ ಬೆಂಬಲ ನೀಡುತ್ತದೆ. ಸ್ಮಾರ್ಟ್‌ ಫೋನ್‌ ಗಳಲ್ಲಿ ಚಿಪ್ಸ್ ಮತ್ತು ಆಕ್ಸೆಸರಿಗಳನ್ನು ಬಳಸಲಾಗುತ್ತದೆ. ನೀವು ಫೋನ್ ಅನ್ನು ಎಚ್ಚರಿಕೆಯಿಂದ ಬಳಸಿದರೆ ಅದು ದೀರ್ಘಕಾಲ ಉಳಿಯುತ್ತದೆ. ಹೆಚ್ಚಿನ ಫೋನ್‌ ಗಳು ಯಾವುದೇ ತೊಂದರೆಯಿಲ್ಲದೆ 8 ರಿಂದ 10 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಕೆಲವು ಸಂದರ್ಭಗಳಲ್ಲಿ ನೀವು ಸ್ಮಾರ್ಟ್ ಫೋನ್ ಬ್ಯಾಟರಿ ಸಮಸ್ಯೆಯನ್ನು ಕಾಣಬಹುದು.

Join Nadunudi News WhatsApp Group

Join Nadunudi News WhatsApp Group