Smartphone Usage: ಭಾರತದ ಒಬ್ಬ ಮಾನವನ ದಿನಕ್ಕೆ ಎಷ್ಟು ಬಾರಿ ಮೊಬೈಲ್ ಬಳಸುತ್ತಾನೆ ಗೊತ್ತಾ…? ಸಂಶೋಧನೆಯಿಂದ ಬಂದ ಮಾಹಿತಿ.

ಭಾರತದ ಜನರು ಪ್ರತಿನಿತ್ಯ ಇಷ್ಟು ಸಮಯ ಮೊಬೈಲ್ ಬಳಸುತ್ತಾರೆ, ಸಂಶೋಧನೆಯಿಂದ ಬಹಿರಂಗ

Smartphone Usage Stats 2024: ಸದ್ಯ ಸ್ಮಾರ್ಟ್ ಫೋನ್ ಮಾನವನ ಅವಿಭಾಜ್ಯ ಅಂಗ ಆಗಿದೆ ಅಂದರೆ ತಪ್ಪಾಗಲಾರದವು ಜನರು ಅಷ್ಟೊಂದು Smart Phone ಗಳನ್ನೂ ಬಳಸುತ್ತಿದ್ದಾರೆ. ಎಲ್ಲರ ಕೈಯಲ್ಲೂ Smart Phone ಇದ್ದೆ ಇರುತ್ತದೆ. Smart Phone ಬಳಸದೆ ಇರುವವರ ಸಂಖ್ಯೆ ಅತಿ ಕೆಡಿಮೆ ಎನ್ನಬಹುದು. ಮನೆಯಲ್ಲಿ ಇರುವ ಪ್ರತಿಯೊಬ್ಬರ ಬಳಿ ಒಂದಾದರು ಫೋನ್ ಇದ್ದೆ ಇರುತ್ತದೆ. ಇನ್ನು Smart Phone ಗಳನ್ನೂ ನೋಡದೆ ಕೆಲವರ ದಿನ ಆರಂಭವಾಗುವುದಿಲ್ಲ.

ಬೆಳಿಗ್ಗೆ ಎದ್ದ ತಕ್ಷಣ Smart Phone ನೋಡುವ ಮೂಲಕ ತಮ್ಮ ದಿನವನ್ನು ಆರಂಭಿಸುವ ಸಾಕಷ್ಟು ಜನರಿದ್ದಾರೆ. ಸದ್ಯದ Digital ದುನಿಯಾದಲ್ಲಿ ಸಣ್ಣ ಮಕ್ಕಳ ಕೈಯಲ್ಲೂ ಕೂಡ Smart Phone ಇರುತ್ತದೆ. Smart Phone ಬಳಕೆಗೆ ಯಾವುದೇ ಮಿತಿ ಇಲ್ಲ ಎನ್ನಬಹುದು. ಹಗಲು ರಾತ್ರಿ ಅನ್ನದೆ ಜನರು Phone ಅನ್ನು ಬಳಸುತ್ತ ಇರುತ್ತಾರೆ.

Smartphone Usage Stats 2024
Image Credit: Edition

ಭಾರತದ ಒಬ್ಬ ಮಾನವನ ದಿನಕ್ಕೆ ಎಷ್ಟು ಬಾರಿ ಮೊಬೈಲ್ ಬಳಸುತ್ತಾನೆ ಗೊತ್ತಾ…?
ಇನ್ನು Smart Phone ಬಳಸುವವರು ದಿನಕ್ಕೆ ಎಷ್ಟು ಬಾರಿ ಫೋನ್ ಅನ್ನು ಮುಟ್ಟುತ್ತಾರೆ ಎನ್ನುವ ಬಗ್ಗೆ ನಿಮಗೆ ಅಂದಾಜಿದೆಯೇ..? ಜನರ ಕೈಯಲ್ಲಿ ದಿನ ಪೂರ್ತಿ Mobile ಇರುತ್ತದೆ. ಸಮಯ ಸಿಕ್ಕಾಗಲೆಲ್ಲ ಮೊಬೈಲ್ ಅನ್ನು ಬಳಸುತ್ತ ಇರುತ್ತಾರೆ. ಇನ್ನು ಭಾರತೀಯ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಅನ್ನು ದಿನಕ್ಕೆ 70 ರಿಂದ 80 ಬಾರಿ ಮುಟ್ಟುತ್ತಾರೆ ಎಂದು ವರದಿಗಳು ಹೇಳುತ್ತವೆ.

ಇನ್ನು ಸಾಕಷ್ಟು ಜನರು ನಿರ್ಧಿಷ್ಟ ಕಾರಣ ಇಲ್ಲದೆ ಸುಮ್ಮ ಸುಮ್ಮನೆ Mobile ಅನ್ನು ಬಳಸುತ್ತಾರೆ ಎಂದು ವರದಿಯು ಬಹಿರಂಗಪಡಿಸಿದೆ. Boston Consulting Group (BCG) ವರದಿಯ ಪ್ರಕಾರ, 50% ಜನರು ತಮ್ಮ ಫೋನ್‌ ಗಳನ್ನು ಸ್ಪರ್ಶಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಅವರು ತಮ್ಮ Smart Phone ಗಳನ್ನು ಏಕೆ ತೆರೆಯುತ್ತಾರೆ ಎಂಬುದು ಅವರಿಗೆ ತಿಳಿದಿಲ್ಲ. ಆದರೆ 45-50% ಜನರು ತಮ್ಮ ಫೋನ್ ಅನ್ನು ಕೆಲವು ಕಾರ್ಯಗಳಿಗಾಗಿ ಮಾತ್ರ ತೆರೆಯುತ್ತಾರೆ ಎಂದು ವರದಿ ಹೇಳುತ್ತದೆ.

Smartphone Usage Statistics
Image Credit: Smseagle

ಮೊಬೈಲ್ ಬಳಕೆಯಿಂದ ಆಗುವ ಪರಿಣಾಮದ ಬಗ್ಗೆ ಅರಿವಿರಲಿ
ಸದ್ಯ ಈಗಂತೂ ಎಲ್ಲವು ಡಿಜಿಟಲೀಕರಣಗೊಳ್ಳುತ್ತಿದೆ. ಮೊಬೈಲ್ ಬಳಕೆಯು ಜನರಿಗೆ ಹೆಚ್ಚು ಉಪಯೋಗಕಾರಿಯೇ. Mobile ಇದ್ದರೆ ಸಾಕು ಕುಳಿತಲ್ಲಿಯೇ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ಈಗಂತೂ ಹಣಕಾಸಿನ ವಹಿವಾಟು ಮೊಬೈಲ್ ಮೂಲಕ ನಡೆಯುತ್ತಿರುವ ಕಾರಣ ಮೊಬೈಲ್ ಬಳಕೆ ಹೆಚ್ಚಿದೆ ಎನ್ನಬಹುದು.

Join Nadunudi News WhatsApp Group

ಇನ್ನು ವ್ಯಕ್ತಿಯ ಎಲ್ಲ ವೈಯಕ್ತಿಕ ಮಾಹಿತಿಯು ಮೊಬೈಲ್ ನಲ್ಲಿ ಇರುವ ಕಾರಣ ಮೊಬೈಲ್ ಬಳಕೆಗೆ ಕೆಲವೊಮ್ಮೆ ಅಪಾಯವನ್ನು ತಂದೊಡ್ಡುದೆ. ಮೊಬೈಲ್ ಬಳಕೆಯಿಂದ ಎಷ್ಟು ಪ್ರಯೋಜನವಾಗಲಿದೆ ಕೆಲವೊಮ್ಮೆ ಅಷ್ಟೇ ಸಮಸ್ಯೆಯನ್ನು ತಂದೊಡ್ಡುತ್ತದೆ. ಅತಿಯಾದ ಮೊಬೈಲ್ ಫೋನ್ ಬಳಕೆಯು ಆರೋಗ್ಯ ಸಮಸ್ಯೆಗೆ ಕೂಡ ಕಾರಣವಾಗಬಹುದು.

Join Nadunudi News WhatsApp Group