DA Hike: ಸರ್ಕಾರೀ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಸಿದ್ದರಾಮಯ್ಯ, DA ಮತ್ತು ಸಂಬಳದಲ್ಲಿ ಇಷ್ಟು ಹೆಚ್ಚಳ

ರಾಜ್ಯ ಸರ್ಕಾರೀ ನೌಕರರ ತುಟ್ಟಿಭತ್ಯೆಯನ್ನು ಶೇ. 3 .75 ರಷ್ಟು ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.

State Govt Employees DA Hike: ಸದ್ಯ ದೇಶದಲ್ಲಿ ಹಲವು ಸಮಯದಿಂದ ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ನೌಕರರ DA ಹೆಚ್ಚಳದ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ವೇತನ ಎಚ್ಚಲಾದ ಬಗ್ಗೆ ಘೋಷಿಸಿದೆ.

ಪ್ರಸ್ತುತ ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ 4 % DA ಹೆಚ್ಚಳ ಮಾಡಿದೆ. ಸದ್ಯ ಕೇಂದ್ರದ ಈ ಘೋಷಣೆಯ ಬೆನ್ನಲೇ ರಾಜ್ಯ ಸರ್ಕಾರ ನೌಕರರ DA ಹೆಚ್ಚಳದ ಬಗ್ಗೆ ಮಹತ್ವದ ಸಭೆ ನಡೆಸಿ ಆದೇಶವನ್ನು ಹೊರಡಿಸಿದೆ. ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.

DA Hike For Government Employees In Karnataka
Image Credit: Deccan Herald

ರಾಜ್ಯ ಸರ್ಕಾರೀ ನೌಕರರಿಗೆ ಶೇ. 3 .75 ರಷ್ಟು DA ಹೆಚ್ಚಳ
ರಾಜ್ಯ ಸರ್ಕಾರಿ ನೌಕರರ ( Karnataka Government Employees) ತುಟ್ಟಿ ಭತ್ಯೆಯನ್ನು (DA) 38.75% ರಿಂದ 48.5% ಕ್ಕೆ ಹೆಚ್ಚಿಸಲು ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಹೀಗಾಗಿ ಶೇ.3.75ರಷ್ಟು ಡಿಎ ಹೆಚ್ಚಿಸಿದ ನಂತರ ಯಾರಿಗೆ ಎಷ್ಟು ವೇತನ ಸಿಗಲಿದೆ ಅನ್ನೋ ಬಗ್ಗೆ ಎಲ್ಲರಲ್ಲಿ ಪ್ರಶ್ನೆ ಮೂಡುವುದು ಸಹಜ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, 2018ರ ಪರಿಷ್ಕೃತ ತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರೀ ನೌಕರರಿಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮೂಲವೇತನದ ಶೇ.38.75ರಿಂದ ಶೇ.42.5ರವರೆಗಿನ ಪರಿಷ್ಕೃತ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲು ಸರ್ಕಾರ ಮುಂದಾಗಿದೆ.

Karnataka Government Employees
Image Credit: Trak

ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಅಥವಾ ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು ಅಥವಾ ಕುಟುಂಬ ನಿವೃತ್ತಿ ವೇತನದಾರರಿಗೂ ಸಹ ದಿನಾಂಕ 1 ನೇ ಜನವರಿ 2024 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನನು ಮೂಲ ನಿವೃತ್ತಿ ವೇತನ ಅಥವಾ ಕೆತುಂಬ ನಿವೃತ್ತಿ ವೇತನದ ಪ್ರಸಕ್ತ ಶೇ. 38 .75 ರಿಂದ ಶೇ. 42 .5 ಕ್ಕೆ ಹೆಚ್ಚಿಸಿ ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿದೆ.

Join Nadunudi News WhatsApp Group

State Govt Employees DA Hike
Image Credit: Times Now News

Join Nadunudi News WhatsApp Group