Sumalatha Dance: ಮಗನ ಮದುವೆಯಲ್ಲಿ ಸಕತ್ ಸ್ಟೆಪ್ ಹಾಕಿದ ಸುಮಲತಾ, ವಿಡಿಯೋ ವೈರಲ್ ಆಗಿದೆ.

ಅಭಿಷೇಕ್ ಮದುವೆಯ ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಟಿ ಸುಮಲತಾ ಡಾನ್ಸ್ ಮಾಡಿದ ವಿಡಿಯೋ ವೈರಲ್.

Sumalatha Dance Video: ಅಭಿಷೇಕ್ (Abhishek Ambareesh) ಹಾಗೂ ಅವಿವಾ (Aviva) ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೈರಲ್ ಆಗುತ್ತಿದೆ. ಚಂದನವನದ ಸ್ಟಾರ್ ನಟ ನಟಿಯರು ಸೇರಿದಂತೆ ಸಾಕಷ್ಟು ರಾಜಕೀಯ ಮುಖಂಡರು ಅಭಿಷೇಕ್ ಹಾಗೂ ಅವಿವಾ ಮದುವೆಗೆ ಸಾಕ್ಷಿಯಾಗಿದ್ದಾರೆ.

ಇದೀಗ ಅಭಿಷೇಕ್ ಮದುವೆಯ ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಟಿ ಸುಮಲತಾ (Sumalatha) ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.

Actress Sumalatha danced in the music program
Image Credit: youtube

ಬಹುಕಾಲದ ಗೆಳತಿಯ ಕೈಹಿಡಿದ ಅಂಬಿ ಪುತ್ರ
ಕರ್ಕಾಟಕ ಶುಭ ಲಗ್ನದ ಶುಭ ಮುಹೂರ್ತದಲ್ಲಿ ಅಭಿ ಹಾಗೂ ಅವಿವಾ ಮದುವೆ ನಡೆದಿದೆ. ಸಾಕಷ್ಟು ಕಲಾವಿದರು, ಗಣ್ಯರು. ಕುಟುಂಬದವರ ಜೊತೆ ಅವಿವಾ ಹಾಗು ಅಭಿಷೇಕ್ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಜೂನ್ 5 ರ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30 ರಿಂದ 10:30 ಮುಹೂರ್ತದಲ್ಲಿ ಅಭಿಷೇಕ್ ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.

ಇಬ್ಬರು ಜೊತೆಯಾಗಿ ಸಪ್ತಪದಿ ತುಳಿದು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Actress Sumalatha danced in the music program
Image Credit: onmanorama

ಸಂಗೀತ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿದ ನಟಿ ಸುಮಲತಾ
ಅಭಿಷೇಕ್ ಅಂಬರೀಷ್ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ. ಅಲ್ಲದೆ ಆರತಕ್ಷತೆ ಸಂಭ್ರಮ ಸಹ ಬಹಳ ಅದ್ದೂರಿಯಾಗಿ ನಡೆದಿದೆ. ಈ ಶುಭ ಸಮಾರಂಭಕ್ಕೆ ಹೆಚ್ಚಿನ ಸ್ಯಾಂಡಲ್ ವುಡ್ ನಟ ನಟಿಯರು ಆಗಮಿಸಿದ್ದಾರೆ. ಅದ್ದೂರಿ ಮದುವೆ ಆರತಕ್ಷತೆಯ ಬಳಿಕ ಸಂಗೀತ ಪಾರ್ಟಿಯನ್ನು ಸಹ ಹಮ್ಮಿಕೊಂಡಿದ್ದರು.

Join Nadunudi News WhatsApp Group

ಈ ಸಂಗೀತ ಕಾರ್ಯಕ್ರಮದಲ್ಲಿ ನಟ ದರ್ಶನ್, ಯಶ್, ನಟಿ ರಮ್ಯಾ ಕೃಷ್ಣ, ನಟಿ ಮಾಲಾಶ್ರೀ ಸೇರಿದಂತೆ ಸಾಕಷ್ಟು ನಟ ನಟಿಯರು ಭಾಗಿಯಾಗಿ ಪಾರ್ಟಿಯಲ್ಲಿ ಹೆಜ್ಜೆ ಹಾಕಿದ್ದಾರೆ.

ಅಲ್ಲದೆ ನಟಿ ಸುಮಲತಾ ಸಹ ಅಭಿಷೇಕ್, ಅವಿವಾ, ಯಶ್ ಹಾಗು ದರ್ಶನ್ ಜೊತೆ ಸೇರಿ ಹೆಜ್ಜೆ ಹಾಕಿದ್ದಲ್ಲದೆ ಸಂಭಂದಿಕರೊಡನೆ ಹಾಗು ಗೆಳೆಯ ಗೆಳತಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದರ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಟಿ ಸುಮಲತಾ ಅದೆಷ್ಟೇ ವಯಸ್ಸಾಗಿದ್ದರೂ ಸಹ ಈ ಕಾರ್ಯಕ್ರಮದಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

Actress Sumalatha danced in the music program
Image Credit: postsen

ಅಂಬರೀಷ್ ಹಾಡಿಗೆ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ಮಂದಿ
ಇನ್ನು ಹೇಳುವುದಾದರೆ ದರ್ಶನ್, ಅಭಿಷೇಕ್, ಯಶ್, ನಟಿ ಸುಮಲತಾ, ಹಾಗು ಅವಿವಾ ಜೊತೆಯಾಗಿ ಕೈ ಹಿಡಿಕೊಂಡು ಅಂಬರೀಷ್ ಅವರ ಹೇ ಜಲೀಲಾ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೇದಿಕೆಯಲ್ಲಿ ಸ್ಯಾಂಡಲ್ ವುಡ್ ನಟ ನಟಿಯರನ್ನು ಜೊತೆಯಾಗಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

Join Nadunudi News WhatsApp Group