Inxcome Tax File: ಆದಾಯ ತೆರಿಗೆ ಕಟ್ಟುವವರಿಗೆ ಇನ್ನೊಂದು ಆಫರ್, ಸಿಗಲಿದೆ 2.5 ಲಕ್ಷ ರೂ ರಿಯಾಯಿತಿ

ಆದಾಯ ತೆರಿಗೆ ಪಾವತಿದಾರರಿಗೆ ಸಿಗಲಿದೆ 2.5 ಲಕ್ಷ ರೂ. ರಿಯಾಯಿತಿ, ಆದಾಯ ತೆರಿಗೆ ಇಲಾಖೆಯ ನಿಯಮ.

Tax New Update 2023: ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ತೆರಿಗೆ (Tax) ಪಾವತಿಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಜಾರಿಗೊಳಿಸಿದ್ದಾರೆ. ಇನ್ನು ತೆರಿಗೆ ರಿಟರ್ನ್ ಪಾವತಿಗೆ ಕೊನೆಯ ದಿನಾಂಕ ನಿಗದಿಯಾಗಿದ್ದು ಕೋಟ್ಯಾಂತರ ತೆರಿಗೆ ಪಾವತಿದಾರರು ತೆರಿಗೆ ರಿಟರ್ನ್ ಅನ್ನು ಸಲ್ಲಿಸುತ್ತಿದ್ದಾರೆ.

ತೆರಿಗೆ ರಿಟರ್ನ್ ಪಾವತಿಯಲ್ಲಿ ನಿರ್ಮಲ ಸೀತಾರಾಮನ್ ಅವರು ಕೆಲವು ವಿನಾಯಿತಿಯನ್ನು ಕೂಡ ಘೋಷಿಸಿದ್ದಾರೆ. ತೆರಿಗೆ ವಿನಾಯಿತಿಯ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ.

ಐಟಿ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿ
ಜುಲೈ 31 ರ ವರೆಗೆ ಐಟಿ ರಿಟರ್ನ್ ಸಲ್ಲಿಕೆಯ ಸಮಯಾವಕಾಶವನ್ನು ನೀಡಲಾಗುತ್ತಿದೆ. ಇ ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ ಅನ್ನು ಸಲ್ಲಿಸಬಹುದು. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ವ್ಯವಹಾರಗಳು ಮತ್ತು ಕಂಪನಿಗಳಿಗೆ ಏಳು ರೀತಿಯ ಐಟಿಆರ್ ಫಾರ್ಮ್ ಗಳಿರುತ್ತದೆ.

Income tax payers will get Rs 2.5 lakh. discount
Image Credit: NDTV

ಹಳೆ ತೆರಿಗೆ ಪದ್ಧತಿ ಹಾಗೂ ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ಐಟಿಆರ್ ಅನ್ನು ಸಲ್ಲಿಸಬಹುದಾಗಿದೆ. ಇನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ತೆರಿಗೆ ಪಾವತಿಯಲ್ಲಿ ಹೆಚ್ಚಿನ ವಿನಾಯಿತಿಯನ್ನು ನೀಡಿದ್ದಾರೆ. ಇಂತಹ ಆದಾಯಗಳಿಗೆ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ. ನೀವು ತೆರಿಗೆ ಪಾವತಿದಾರರಾಗಿದ್ದರೆ ಯಾವ ಆದಾಯಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ ಎನ್ನುವ ಬಗ್ಗೆ  ತಿಳಿಯೋಣ.

ಆದಾಯ ತೆರಿಗೆ ಪಾವತಿದಾರರಿಗೆ ಸಿಗಲಿದೆ 2.5 ಲಕ್ಷ ರೂ. ರಿಯಾಯಿತಿ
ಇನ್ನು 2021 -22 ರ ಹಣಕಾಸು ವರ್ಷದವರೆಗೆ ನಿಮ್ಮ ಒಟ್ಟು ಆದಾಯವು ರೂ. 2 .5 ಲಕ್ಷ ಅಥವಾ ಅದಕ್ಕಿಂತ ಕಡಿಮೆಯಿದ್ದರೆ, ಜುಲೈ 31 ರ ನಂತರ ಆದಾಯ ತೆರಿಗೆಯನ್ನು ಸಲ್ಲಿಸಲು ನೀವು ದಂಡವನ್ನು ಪಾವತಿಸುವ ಅಗತ್ಯ ಇರುವುದಿಲ್ಲ. ನಿಮ್ಮ ಪರವಾಗಿ ಸಲ್ಲಿಸಿದ ಐಟಿಆರ್ ಅನ್ನು ಶೂನ್ಯ ಐಟಿಆರ್ ಎಂದು ಕರೆಯಲಾಗುತ್ತದೆ.

Join Nadunudi News WhatsApp Group

Income tax payers will get Rs 2.5 lakh. discount
Image Credit: Economictimes

ಇನ್ನು ಹಳೆಯ ತೆರಿಗೆ ಪದ್ದತಿಯ ಪ್ರಕಾರ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 2 .5 ಲಕ್ಷ, 60 ರಿಂದ 80 ವರ್ಷದ ವಯಸ್ಸಿನವರಿಗೆ 3 ಲಕ್ಷದ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಇನ್ನು 80 ವರ್ಷ ಮೇಲಿನ ವಯಸ್ಸಿನವರಿಗೆ ಮೂಲ ತೆರಿಗೆ ವಿನಾಯಿತಿಯ ಮಿತಿ 5 ಲಕ್ಷ ಆಗಿರುತ್ತದೆ. ಇನ್ನು 7 ಲಕ್ಷದ ಆದಾಯವು ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ.

Join Nadunudi News WhatsApp Group