Ration Card Cancellation Rule: ಮತ್ತೆ ರದ್ದಾಗಲಿದೆ ಇಂತಹ ರೇಷನ್ ಕಾರ್ಡುಗಳು, ಸರ್ಕಾರದ ದಿಟ್ಟ ನಿರ್ಧಾರ.

Ration Card Cancellation Rule: ರೇಷನ್ ಕಾರ್ಡ್ (Ration Card) ಗೆ ಸಂಬಂಧಿಸಿದಂತೆ ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತರಲಾಗಿದೆ. ದೇಶದಲ್ಲಿ ಈಗಾಗಲೇ 2 ಕೋಟಿಗೂ ಅಧಿಕ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ. ಅನರ್ಹರು ಕೂಡ ಅರ್ಹರ ಹಾಗೆ ರೇಷನ್ ಧಾನ್ಯಗಳನ್ನ ಪಡೆದುಕೊಳ್ಳುತ್ತಿರುವ ಕಾರಣ ಕೇಂದ್ರ ಸರ್ಕಾರ (Central Govt) ಮತ್ತು ರಾಜ್ಯ ಸರ್ಕಾರ (State Govt) ಈಗಾಗಲೇ 2.41 ಕೋಟಿಗೂ ಅಧಿಕ ರೇಷನ್ ಕಾರ್ಡುಗಳನ್ನ ರದ್ದು ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ರೇಷನ್ ಲಾರ್ಡುಗಳನ್ನ ರದ್ದು ಮಾಡುವ ನಿರ್ಧಾರವನ್ನ ಮಾಡಿದೆ.

ಕೆಲವು ಕುಟುಂಬದವರಿಗೆ ಹಲವು ಮಾಹಿತಿಗಳನ್ನ ನೀಡದ ನಂತರವೂ ಸರ್ಕಾರಕ್ಕೆ ತಮ್ಮ ರೇಷನ್ ಕಾರ್ಡುಗಳನ್ನ ಒಪ್ಪಿಸದ ಕಾರಣ ಈಗ ಸರ್ಕಾರ ಇನ್ನೊಂದು ನಿರ್ಧಾರವನ್ನ ಮಾಡಿದ್ದು ಇಂತಹ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ತೀರ್ಮಾನವನ್ನ ಮಾಡಿದೆ.

Government has decided to cancel more ration cards
Image Credit: economictimes.indiatimes

ಈಗಾಗಲೇ ದೇಶದಲ್ಲಿ ರದ್ದಾಗಿದೆ ಕೋಟ್ಯಾಂತರ ರೇಷನ್ ಕಾರ್ಡುಗಳು
ಬಡ ಕುಟುಂಬದ ಜನರಿಗೆ ಅನುಕೂಲ ಆಗಲಿ ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಪಡಿತರಗಳನ್ನ ನೀಡುತ್ತಿದ್ದೆ, ಆದರೆ ಕೆಲವು ಅನರ್ಹರು ಬಡವರಿಗೆ ನೀಡಲಾಗುತ್ತಿರುವ ಪಡಿತರಗಳನ್ನ ಪಡೆದುಕೊಳ್ಳುತ್ತಿದ್ದಾರೆ.

ಅರ್ಹರಿಗೆ ಸಿಗುವ ಪಡಿತರ ಅನರ್ಹರಿಗೆ ಸಿಗಬಾರದು ಅನ್ನುವ ಉದ್ದೇಶದಿಂದ ಈಗಾಗಲೇ ದೇಶಲ್ಲಿ ಸುಮಾರು 2.41 ಕೋಟಿ ಅನರ್ಹ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅನರ್ಹ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗ ತೀರ್ಮಾನವನ್ನ ಮಾಡಲಾಗಿದೆ.

More ineligible ration cards to be canceled in the country
Image Credit: economictimes.indiatimes

ಕೇಂದ್ರ ಸರ್ಕಾರದ ದಿಟ್ಟ ಆದೇಶ
ಅದೆಷ್ಟೋ ಅನರ್ಹರು ಈಗಲೂ ಕೂಡ ಬಡವರ ರೀತಿ ಪಡಿತರ ಧಾನ್ಯಗಳನ್ನ ಪಡೆದುಕೊಳ್ಳುತ್ತಿದ್ದು ಅವರ ರೇಷನ್ ಕಾರ್ಡುಗಳನ್ನ ರದ್ದು ಮಾಡುವುದರ ಜೊತೆಗೆ ಅವರಿಗೆ ದಂಡವನ್ನ ಹಾಕಬೇಕು ಎಂದು ಕೇಂದ್ರ ಸರ್ಕಾರ ಈಗ ಆದೇಶವನ್ನ ಹೊರಡಿಸಿದೆ.

Join Nadunudi News WhatsApp Group

ಯಾವ ಯಾವ ರೇಷನ್ ಕಾರ್ಡ್ ರದ್ದಾಗಲಿದೆ
ಸರ್ಕಾರೀ ಕೆಲಸದಲ್ಲಿ ಇರುವವರು, ಸ್ವಂತ ಕಾರು ಅಥವಾ ಇತರೆ ದುಬಾರಿ ವಾಹನ ಹೊಂದಿರುವವರು, ಬಡತನ ರೇಖೆಗಿಂತ ಹೆಚ್ಚಿನ ಭೂಮಿಯನ್ನ ಹೊಂದಿರುವವರು, ವಾರ್ಷಿಕ ಆದಾಯ ಅಧಿಕ ಇರುವವರ ರೇಷನ್ ಕಾರ್ಡುಗಳನ್ನ ರದ್ದು ಮಾಡಲು ಈಗಾಗಲೇ ಆದೇಶವನ್ನ ಹೊರಡಿಸಲಿದೆ.

ದಂಡದ ಜೊತೆ ಜೈಲು ಶಿಕ್ಷೆ
ಸರ್ಕಾರ ಈಗಾಗಲೇ ಆದೇಶವನ್ನ ಹೊರಡಿಸಿದ್ದು ಅನರ್ಹರು ಕೂಡ ಪಡಿತರಾದ ಧಾನ್ಯಗಳನ್ನ ಪಡೆದುಕೊಳ್ಳುತ್ತಿದ್ದಾರೆ ಅಂತಹ ಪಡಿತರ ಚೀಟಿಗಳನ್ನ ಮರಳಿಸುವಂತೆ ಆದೇಶವನ್ನ ನೀಡಿದ್ದು ಆದೇಶದ ನಡುವೆಯೂ ಅದನ್ನ ಪಾಲನೆ ಮಾಡದೆ ಇದ್ದರೆ ಅಂತವರಿಗೆ ದಂಡದ ಜೊತೆ ಜೈಲು ಶಿಕ್ಷೆಯನ್ನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Ration cards of more ineligible families to be cancelled
Image Credit: economictimes.indiatimes

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಅಡಿಯಲ್ಲಿ ಈಗಾಗಲೇ 2.41 ಕೋಟಿ ಅನರ್ಹ ಕುಟುಂಬದ ಪಡಿತರ ಚೀಟಿಗಳನ್ನ ರದ್ದು ಮಾಡಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಅನರ್ಹ ರೇಷನ್ ಕಾರ್ಡುಗಳನ್ನ ರದ್ದು ಮಾಡುವ ತೀರ್ಮಾನವನ್ನ ಮಾಡಲಾಗಿದೆ.

ಭಾಕಿ ಉಳಿದುಕೊಂಡಿದೆ ಹೊಸ ರೇಷನ್ ಕಾರ್ಡುಗಳ ಅರ್ಜಿ
ಹೊಸ ರೇಷನ್ ಕಾರ್ಡುಗಳಿಗೆ ವರ್ಷದ ಆರಂಭದಲ್ಲಿ ಅರ್ಜಿಯನ್ನ ಕರೆಯಲಾಗಿತ್ತು, ಆದರೆ ಇನ್ನೂ ಕೂಡ ಯಾರಿಗೂ ಹೊಸ ರೇಷನ್ ಕಾರ್ಡುಗಳನ್ನ ವಿತರಣೆ ಮಾಡಲಾಗಿಲ್ಲ. ರಾಜ್ಯದಲ್ಲಿ ಸುಮಾರು 32 ಲಕ್ಷಕ್ಕೂ ಅಧಿಕ ಜನರು ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನ ಸಲ್ಲಿಸಿದ್ದು ಅವರ ಅರ್ಜಿಗಳು ಇನ್ನೂ ಹಾಗೆ ಉಳಿದುಕೊಂಡಿದೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ ಇನ್ನು ಆದೇಶ ಬಂದಿಲ್ಲ
ರೇಷನ್ ಕಾರ್ಡುಗಳ ವಿತರಣೆ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಕೂಡ ಆದೇಶವನ್ನ ಹೊರಡಿಸಿದ ಕಾರಣ ಹಾಕಿದ ಅರ್ಜಿಗಳು ಇನ್ನೂ ಕೂಡ ಹಾಗೆ ಉಳಿದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದು ಸದ್ಯ ರಾಜ್ಯ ಸರ್ಕಾರದ ಆದೇಶ ಬರುವ ತನಕ ಕಾಯುವುದು ಅನಿವಾರ್ಯವಾಗಿದೆ.

Join Nadunudi News WhatsApp Group