Akrama Sakrama: ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುತ್ತಿರುವ ಜನರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ, ಇನ್ನು ವರ್ಷ ಅವಧಿ ವಿಸ್ತರಣೆ.

Akrama Sakrama: ಸರ್ಕಾರೀ ಜಾಗದಲ್ಲಿ (Govt Land) ವ್ಯವಸಾಯ ಮಾಡುತ್ತಿರುವ ಜನರಿಗೆ ಇನ್ನೊಂದು ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ. ಹೌದು ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುತ್ತಿರುವವರಿಗೆ ಆ ಭೂಮಿಯನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಇನ್ನೊಂದು ವರ್ಷ ಕಾಲಾವಧಿಯನ್ನ ಸರ್ಕಾರ ನೀಡಿದೆ. ಅದೆಷ್ಟೋ ರೈತರು (Farmers) ಸರ್ಕಾರೀ ಜಾಗದಲ್ಲಿ ವ್ಯವಸಾಯವನ್ನ ಮಾಡಿಕೊಂಡು ಜೀವನವನ್ನ ಮಾಡುತ್ತಿದ್ದಾರೆ ಮತ್ತು ಅದೆಷ್ಟೋ ವರ್ಷಗಳಿಂದ ಆ ಜಾಗವನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲಾಗದೆ ಕಷ್ಟವನ್ನ ಪಡುತ್ತಿದ್ದಾರೆ.

ಕೆಲವು ಸಮಯಗಳ ಹಿಂದೆ ರಾಜ್ಯ ಸರ್ಕಾರ ಅಕ್ರಮ ಸಕ್ರಮ (Akrama Sakrama) ಯೋಜನೆಯ ಅಡಿಯಲ್ಲಿ ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುತ್ತಿರುವವರಿಗೆ ಆ ಜಾಗವನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರ್ಜಿಯನ್ನ ಕರೆದಿತ್ತು ಮತ್ತು ರಾಜ್ಯದಲ್ಲಿ ಅದೆಷ್ಟೋ ರೈತರು ಅರ್ಜಿಯನ್ನ ಕೂಡ ಸಲ್ಲಿಸಿದ್ದಾರೆ. ಸದ್ಯ ಇನ್ನು ಅದೆಷ್ಟೋ ರೈತರು ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಇನ್ನೂ ಕೂಡ ಅರ್ಜಿಯನ್ನ ಸಲ್ಲಿಸದ ಕಾರಣ ರಾಜ್ಯ ಸರ್ಕಾರ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಅರ್ಜಿಯನ್ನ ಸಲ್ಲಿಸಲು ಇನ್ನೊಂದು ವರ್ಷ ಕಾಲಾವಧಿಯನ್ನ ನೀಡಿದೆ.

The state government has given another year to apply for the illegal government scheme
Image credit: economictimes.indiatimes.com

ಸರ್ಕಾರೀ ಜಾಗದಲ್ಲಿ ಸಾಗುವಳಿಯನ್ನ ಮಾಡುತ್ತಿರುವ ರೈತರಿಗೆ ಆ ಜಾಗವನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ನಮುನೆ 57 ರ ಅಡಿಯಲ್ಲಿ ಅರ್ಜಿಯನ್ನ ಸಲ್ಲಿಸಲು ಇದ್ದ ಕಾಲಾವಧಿಯನ್ನ ಇನ್ನೊಂದು ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಹಲವು ವರ್ಷಗಳಿಂದ ಅದೆಷ್ಟೋ ರೈತರು ತಮಗೆ ಸ್ವಂತ ಜಾಗವಿಲ್ಲದೆ ಸರ್ಕಾರೀ ಜಾಗದಲ್ಲಿ ವ್ಯವಸಾಯವನ್ನ ಮಾಡಿಕೊಂಡು ಬಂದಿದ್ದಾರೆ.

ಕೆಲವು ವರ್ಷಗಳಿಂದ ಸರ್ಕಾರ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಅರ್ಜಿಯನ್ನ ಕರೆಯದ ಕಾರಣ ರೈತರು ಹಲವು ವರ್ಷಗಳಿಂದ ವ್ಯವಸಾಯ ಮಾಡಿದ ದಾಖಲೆ ಇದ್ದರೂ ಕೂಡ ಆ ಜಾಗವನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲಾಗದೆ ಕಷ್ಟ ಪಡುತ್ತಿದ್ದರು. ಸದ್ಯ ಈಗ ಅಕ್ರಮ ಸಕ್ರಮ ಅಡಿಯಲ್ಲಿ ಸರ್ಕಾರೀ ಜಾಗದಲ್ಲಿ ವ್ಯವಸಾಯ ಮಾಡುತ್ತಿವವರು ಆ ಜಾಗವನ್ನ ತಮ್ಮ ಹೆಸರಿಗೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅರ್ಜಿಯನ್ನ ಕರೆದಿದೆ ಮತ್ತು ಅದಕ್ಕೆ ಒಂದು ವರ್ಷಗಳ ಕಾಲಾವಧಿಯನ್ನ ಕೂಡ ಸರ್ಕಾರ ನೀಡಿದೆ.

ಅಕ್ರಮ ಸಕ್ರಮ ಅಡಿಯಲ್ಲಿ ನಮುನೆ 57 ರ ಅಡಿಯಲ್ಲಿ ಅರ್ಜಿಯನ್ನ ಸಲ್ಲಿಸುವವರಿಗೆ ಇನ್ನೊಂದು ವರ್ಷ ಕಾಲಾವಧಿಯನ್ನ ನೀಡಲಾಗಿದ್ದು ಇದು ರೈತರ ಖುಷಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಈಗಾಗಲೇ ಅದೆಷ್ಟೋ ಜನರು ಅಕ್ರಮ ಸಕ್ರಮ ಅಡಿಯಲ್ಲಿ ಅರ್ಜಿಯನ್ನ ಸಲ್ಲಿಸಿದ್ದು ಇನ್ನೂ ಹಲವು ರೈತರು ಅರ್ಜಿಯನ್ನ ಸಲ್ಲಿಸದೆ ಹಾಗೆ ಇರುವ ಕಾರಣ ಅದರ ಅವಧಿಯನ್ನ ಒಂದು ವರ್ಷಕ್ಕೆ ಮುಂದೂಡಲಾಗಿದೆ.

Join Nadunudi News WhatsApp Group

Join Nadunudi News WhatsApp Group