GPS Toll Collection: ಪ್ರತಿನಿತ್ಯ ಟೋಲ್ ಕಟ್ಟುವವರಿಗೆ ಕೇಂದ್ರದಿಂದ ಹೊಸ ರೂಲ್ಸ್, ಟೋಲ್ ನಿಯಮ ಬದಲಾವಣೆ

ಹೊಸ ವಿಧಾನದ ಮೂಲಕ ಟೋಲ್ ಕಲೆಕ್ಷನ್ ಮಾಡಲು ಮುಂದಾದ ಕೇಂದ್ರ, ಟೋಲ್ ನಿಯಮ ಬದಲಾವಣೆ

Toll Collection By Using ANPR: ಸದ್ಯ ದೇಶದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ರಸ್ತೆ ಸಂಚಾರ ನಿಯಮಗಳಲ್ಲಿ ಹೊಸ ಹೊಸ ರೀತಿಯ ಬದಲಾವನ್ನೇ ತರುತ್ತಿದ್ದಾರೆ. ಇನ್ನು ಮುಖ್ಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಪ್ರಮುಖವಾಗಿ ಟೋಲ್ ಕಟ್ಟುವುದು ಅಗತ್ಯವಾಗಿದೆ. ಈ ಹಿಂದೆ ವಾಹನ ಸವಾರರಿಗೆ Toll ಕಟ್ಟುವುದುಒಂದು ರೀತಿಯ ಸಮಸ್ಯೆಯಾಗಿ ಹೋಗಿತ್ತು.

ಪ್ರಸ್ತುತ ಕೇಂದ್ರ ಸರ್ಕಾರ ಈ ಟೋಲ್ ಸಂಗ್ರಹಣೆಗಾಗಿ ಅನೇಕ ವಿಧಾನವನ್ನು ಬಳಸುತ್ತಿದೆ. ವಿವಿಧ ತಂತ್ರಜಾನಗಳ ಬಳಕೆಯಿಂದಾಗಿ ಟೋಲ್ ಸಂಗ್ರಹಣೆ ಸದ್ಯ ಸುಲಭವಾಗಿದೆ. ಎನ್ನಬಹುದು. ಸದ್ಯ ಕೇಂದ್ರ ಸರ್ಕಾರ ಟೋಲ್ ಸಂಗ್ರಹಣೆಯ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲು ಹೊಸ ಪ್ಲಾನ್ ಹಾಕಿದೆ. ಈ ಹೊಸ ಯೋಜನೆಯು ಟೋಲ್ ಸಂಗ್ರಹಣೆಯ ಸಮಯದಲ್ಲಿ ವಾಹನ ಸಾವಿರ ಸಮಯವನ್ನು ಸಾಕಷ್ಟು ಉಳಿಸಲಿದೆ.

New Toll System
Image Credit: Economic Times

ಟೋಲ್ ಸಂಗ್ರಹಣೆಗಾಗಿ ಇನ್ನುಮುಂದೆ ವೈಟ್ ಮಾಡುವ ಅಗತ್ಯವಿಲ್ಲ
ಈ ಹಿಂದೆ ಟೋಲ್ ಸಂಗ್ರಹಣೆಯ ಸಮಯದಲ್ಲಿ ವಾಹನ ಸವಾರರು ಕೈಯಲ್ಲಿ ಹಣವನ್ನು ಹಿಡಿದುಕೊಂಡು ಕ್ಯೂ ನಲ್ಲಿ ನಿಂತು ಟೋಲ್ ಪಾವತಿ ಮಾಡಬೇಕಿತ್ತು. ಆದರೆ ಸರ್ಕಾರ ಈ ಸಮಸ್ಯೆಯನ್ನು ಹೋಗಲಾಡಿಸಲು ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಹೌದು ಇನ್ನುಮುಂದೆ ವಾಹನ ಸವಾರರು ಟೋಲ್ ಸಂಗ್ರಹಣೆಗಾಗಿ ಕ್ಯೂ ನಲ್ಲಿ ನಿಂತು ಕಾಯುವ ಅಗತ್ಯವಿಲ್ಲ. ಕೈಯಲ್ಲಿ ಹಣ ಇಟ್ಟುಕೊಳ್ಳಬೇಕೆಂದಿಲ್ಲ. ಇದರ ಬದಲಾಗಿ ಕೇಂದ್ರ ಸರ್ಕಾರ GPS ಆಧಾರಿತ ಟೋಲ್ ಕಲೆಕ್ಷನ್ ಸಿಸ್ಟಮ್ ಅನ್ನು ಜಾರಿಗೆ ತರಲು ನಿರ್ಧರಿಸಿದೆ.

ಈ GPS ಆಧಾರಿತ ಸಿಸ್ಟಮ್ ಹೇಗೆ ಕಾರ್ಯ ನಿರ್ವಹಿಸಲಿದೆ..?
ಟೋಲ್ ಸಂಗ್ರಹಕ್ಕಾಗಿ ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ANPR (Automated Number Plate Reader) ಕ್ಯಾಮರಾಗಳು ಎನ್ನುವ ಹೊಸ GPS ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇನ್ನು ಎಏನ್ ಪಿಆರ್ ವ್ಯವಸ್ಥೆಯು ವಾಹನದ ಪರವಾನಗಿ ಫಲಕವನ್ನು ಓದುವ ಮೂಲಕ ತೆರಿಗೆಯನ್ನು ವಾಹನದ ಮಾಲಿಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸುತ್ತದೆ.

Toll Collection By Using ANPR
Image Credit: Medium

ಪ್ರವೇಶ ಮತ್ತು ನಿರ್ಗಮನದಲ್ಲಿ ಎಏನ್ ಪಿಆರ್ ಕ್ಯಾಮರಗಳನ್ನು ಇರಿಸಲಾಗುತ್ತದೆ. ಈ GPS ಸಿಸ್ಟಮ್ ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಕ್ಯಾಮರಾಗಳು ಪರವಾನಗಿ ಫಲಕದ ಫೋಟೋವನ್ನು ಕ್ಲಿಕ್ ಮಾಡಿ ವಾಹನದ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ಅನ್ನು ಕಡಿತಗೊಳಿಸುತ್ತದೆ. ಬ್ಯಾಂಕ್ ಅಕೌಂಟ್ ನಲ್ಲಿ ಕ್ಯಾಶ್ ಇದ್ದರೆ ಸಾಕು ಇನ್ನುಮುಂದೆ ನೀವು ಟೋಲ್ ಸಂಗ್ರಹಣೆಗೆ ಹೆಚ್ಚು ಚಿಂತಿಸಬೇಕಾಗಿಲ್ಲ.

Join Nadunudi News WhatsApp Group

Join Nadunudi News WhatsApp Group