Challan New Rule: ಬಂತು ಹೊಸ ಟ್ರಾಫಿಕ್ ರೂಲ್ಸ್, ವಾಹನ ಸವಾರರೆ ಈ ತಪ್ಪು ಮಾಡಿದ್ರೆ ಮನೆಗೆ ಬರಲಿದೆ ನೋಟೀಸ್.

ವಾಹನ ಸವಾರರೆ ಈ ತಪ್ಪು ಮಾಡಿದ್ರೆ ಮನೆಗೆ ಬರಲಿದೆ ನೋಟೀಸ್

Traffic Challan New Rule: ಪ್ರಸ್ತುತ ದೇಶದಲ್ಲಿ Traffic Rule ಎಷ್ಟೊಂದು ಕಠಿಣವಾಗಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸಂಚಾರಿ ಪೊಲೀಸರು ಪ್ರತಿ ಸಂಚಾರ ನಿಯಮ ಉಲ್ಲಂಘನೆಗೆ ದಂಡವನ್ನು ಪಾವತಿಸುತ್ತಾರೆ. ಈಗಾಗಲೇ ವಾಹನ ಸವಾರರು ಸಾಕಷ್ಟು ದಂಡವನ್ನು ಪಾವತಿಸಿದ್ದಾರೆ ಎನ್ನಬಹುದು.

ಇನ್ನು ಟ್ರಾಫಿಕ್ ನಿಯಂತ್ರಣಕ್ಕಾಗಿ ಸಂಚಾರ ಇಲಾಖೆಯು ಆಗಾಗ ನಿಯಮವನ್ನು ಬದಲಿಸುತ್ತಾ ಇರುತ್ತದೆ. ಇನ್ನು ತಂತ್ರಜ್ಞಾನಗಳ ಬೆಳವಣಿಯಿಂದಾಗಿ Traffic ನಲ್ಲಿ ಕೂಡ ಸಾಕಷ್ಟು ತಂತ್ರಜ್ಞಾನಗಳನ್ನು ಬಳಸಲಾಗಿದೆ. Traffic ನಿಯಮ ಉಲ್ಲಂಘನೆಗೆ ದಂಡವನ್ನು ನೀಡುವುದು ಕೂಡ ಈಗ ಡಿಜಿಟಲೀಕರಣವಾಗಿದೆ. ಸದ್ಯ ವಾಹನ ಸವಾರರಿಗೆ ಅಗತ್ಯವಾದ ಮಾಹಿತಿಯೊಂದು ಹೊರಬಿದ್ದಿದೆ.

Traffic Challan New Rule
Image Credit: Informal Newz

ಸಂಚಾರ ನಿಯಮ ಉಲ್ಲಂಘನೆಗೆ ಹೊಸ ನಿಯಮ ಅನ್ವಯ
ಇನ್ನು ಜನಸಾಮಾನ್ಯರ ಮನೆ ಮನೆಗೆ Postman ಗಳು ಬೇರೆ ಬೇರೆ ಕಡೆಯಿಂದ ಬರುವಂತಹ Post ಅನ್ನು ತಂದು ಕೊಡುತ್ತಿದ್ದರು. ಯಾವುದಾದರು Post ಬರಬೇಕಿದ್ದರೆ Postman ಗಾಗಿ ಕಾಯುತ್ತಿರಿರುತ್ತಾರೆ. ಆದರೆ ಇನ್ನುಮುಂದೆ ನಿಮ್ಮ ಮನೆಯ ಬಾಗಿಲಿಗೆ Postman ಬಂದರೆ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆ ಎಂದರ್ಥ, ಏಕೆಂದರೆ ಕಳೆದ ತಿಂಗಳಷ್ಟೇ ಅಂಚೆ ಇಲಾಖೆ ಮತ್ತು ಬಿಹಾರ ಸಂಚಾರ ಪೊಲೀಸರ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದೀಗ ಈ ತಿಂಗಳಿನಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ಮನೆಗೆ ಅಂಚೆ ಮೂಲಕ ಚಲನ್ ಕಳುಹಿಸಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.

ವಾಹನ ಸವಾರರೆ ಈ ತಪ್ಪು ಮಾಡಿದ್ರೆ ಮನೆಗೆ ಬರಲಿದೆ ನೋಟೀಸ್
ಪಾಟ್ನಾ ಸೇರಿದಂತೆ ಇತರ ನಗರಗಳಲ್ಲಿ ಕ್ಯಾಮೆರಾಗಳ ಮೂಲಕ ಚಲನ್ ನೀಡಲಾಗುತ್ತದೆ. ಹಸ್ತಚಾಲಿತ ಚಲನ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಘಿಸಿ ಜನರ ಮೊಬೈಲ್‌ ಗೆ ಇ-ಚಲನ್ ಕಳುಹಿಸಲಾಗುತ್ತಿತ್ತು. ಆದರೆ ನೋಂದಾಯಿತ ಸಂಖ್ಯೆಯ ಅನೇಕ ಜನರು ಮುಚ್ಚಲ್ಪಟ್ಟಿರುವ ಅಥವಾ ಬದಲಾಗಿರುವ ಕಾರಣ, ನಿಯಮಗಳನ್ನು ಉಲ್ಲಂಘಿಸಿದರೂ ಇ-ಚಲನ್ ತುಂಬುವ ಬಗ್ಗೆ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಸದ್ಯ ಕರ್ನಾಟಕದಲ್ಲಿ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ.

Traffic Challan Notice
Image Credit: News Meter

ಸಾಕಷ್ಟು ಕಾರಣಗಳಿಂದ ನಿಯಮ ಉಲ್ಲಂಘಿಸುವವರಿಗೆ ಚಲನ್ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹವರನ್ನು ಗುರುತಿಸಿ ಅಂಚೆ ಮೂಲಕ ಚಲನ್ ಕಳುಹಿಸುವ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ಇನ್ನುಮುಂದೆ Postman ಗಳು ನಿಮ್ಮ ಮನೆಯ ಬಾಗಿಲಿಗೆ ರಸ್ತೆ ನಿಯಮ ಉಲ್ಲಂಘನೆಯ ಚಲನ್ ಅನ್ನು ತಂದುಕೊಡಲಿದ್ದಾರೆ. ಎಲ್ಲ ರೀತಿಯ ನಿಯಮ ಉಲ್ಲಂಘನೆಗೆ ಬೇರೆ ಬೇರೆ ರೀತಿಯಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಇನ್ನು ನೀವು ಸಂಚಾರಿ ಪೊಲೀಸರು ರಸ್ತೆಯಲ್ಲಿ ಇಲ್ಲ ಎಂದು ಸಂಚಾರ ನಿಯಮ ಉಲ್ಲಘಿಸಿದರೆ, ರಸ್ತೆಗಳಲ್ಲಿ ಇರುವ ಕ್ಯಾಮರಾಗಳು ನಿಮ್ಮ ತಪ್ಪನ್ನು ಕಂಡುಹಿಡುಯುತ್ತದೆ ಎನ್ನುವುದನ್ನು ತಿಳಿದಿರಿ.

Join Nadunudi News WhatsApp Group

Traffic Challan Rule Update
Image Credit: Business Today

Join Nadunudi News WhatsApp Group