Traffic Fine: ವಾಹನ ಸವಾರರೆ ಎಚ್ಚರ, ಇನ್ನುಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಟ್ರಾಫಿಕ್ ಪೊಲೀಸರು

ಇನ್ನುಮುಂದೆ ಇಂತಹ ತಪ್ಪುಗಳನ್ನು ಮಾಡಿದರೆ ಮನೆ ಬಾಗಿಲಿಗೆ ಬರಲಿದ್ದಾರೆ ಸಂಚಾರಿ ಪೊಲೀಸರು.

Traffic Rule Latest Update: ದೇಶದಲ್ಲಿ ಇತ್ತೀಚೆಗಂತೂ Traffic ಸಮಸ್ಯೆ ಹೆಚ್ಚುತ್ತಲೇ ಇದೆ. ಇನ್ನು ರಸ್ತೆ ಸಂಚಾರ ನಿಯಮವನ್ನು (Traffic Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. 

ದೇಶದಲ್ಲಿ ಹೊಸ ಹೊಸ ಸಂಚಾರಿ ನಿಯಮಗಳು ಜಾರಿಗೆ ಬರುತ್ತಿದ್ದು ವಾಹನ ಸವಾರರು ಪ್ರತಿನಿತ್ಯ ಸಾಕಷ್ಟು ದಂಡ ಕಟ್ಟುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ಇನ್ನೊಂದು ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದ್ದು ಇದು ಜನರ ತಲೆನೋವಿಗೆ ಕಾರಣವಾಗಿದೆ ಎಂದು ಹೇಳಬಹುದು.

New Traffic Rule Update
Image Credit: Businessleague

ರಸ್ತೆಗಳಲ್ಲಿ ಸಂಚರಿಸುವ ಮುನ್ನ ಸಂಚಾರ ನಿಯಮವನ್ನು ತಿಳಿದುಕೊಳ್ಳಿ
ಸಂಚಾರ ನಿಯಮ ಉಲ್ಲಂಘನೆಯಾದರೆ ದಂಡದ ಜೊತೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಈಗಾಗಲೇ ಸಂಚಾರ ನಿಯಮದಲ್ಲಿ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ. ವಾಹನ ಸವಾರರಿಗೆ ಚಾಲನಾ ಪರವಾನಗಿ ಅತಿ ಮುಖ್ಯ ದಾಖಲೆಯಾಗಿದೆ. ಡ್ರೈವಿಂಗ್ ಲೈಸನ್ಸ್ ಮತ್ತು ವಾಹನಗಳ ಇತರೆ ದಾಖಲೆಯ ವಿಫಲತೆಯ ಕಾರಣ ಜನರು ಪ್ರತಿನಿತ್ಯ ದಂಡ ಕಟ್ಟುತ್ತಿದ್ದಾರೆ ಎಂದು ಹೇಳಬಹುದು.

ವಾಹನ ಚಾಲಕರು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಇನ್ನುಮುಂದೆ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ನೀವು ಪೋಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಲಲು ಸಾದ್ಯವಾಗುವುದಿಲ. ಏಕೆಂದರೆ ಇನ್ನುಮುಂದೆ ಯಾರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡುತ್ತಾರೋ ಅಂತವರ ಮನೆ ಬಾಗಿಲಿಗೆ ಭೇಟಿ ನೀಡುವ ಬಗ್ಗೆ ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ.

Traffic Rule Latest Update
Image Credit: TV9 Telugu

ಮನೆ ಬಾಗಿಲಿಗೆ ಬರಲಿದ್ದಾರೆ ಸಂಚಾರಿ ಪೊಲೀಸರು
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಸಾಕಷ್ಟು ಜನರು ದಂಡ ಕಟ್ಟದೆ ಹಾಗೆಯೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ದಂಡ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದವರ ಬಳಿ ದಂಡ ವಸೂಲಾತಿ ಮಾಡಲಿ ಸಂಚಾರಿ ಪೊಲೀಸರು ಮನೆಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ನೀವು ದಂಡ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದರೆ ಮನೆ ಬಾಗಿಲಿಗೆ ಪೊಲೀಸರು ಬರಲಿದ್ದಾರೆ ಎಚ್ಚರ.

Join Nadunudi News WhatsApp Group

ಇನ್ನುಮುಂದೆ ಈ ತಪ್ಪುಗಳಿಗೆ ಇಷ್ಟು ದಂಡ ಕಡ್ಡಾಯ
•ಅತಿ ವೇಗದ ಚಾಲನೆಗೆ 2000 ರೂ , ರಸ್ತೆ ಮದ್ಯೆ ವಾಹನ ನಿಲ್ಲಿಸಿದರೆ 1000 ರೂ , ಸಮವಸ್ತ್ರ ಧರಿಸದೇ ಇರುವುದು, ಕರ್ಕಶ ಹಾರನ್ ಗೆ 500 ರೂ. ದಂಡ ನೀಡಬೇಕು.

•ಬಲ್ಬು ಹಾರ್ನ್ ಅಳವಡಿಸದಿರುವುದು, ಬ್ರೇಕ್ ಲೈಟ್ ಇಲ್ಲದೇ ಚಾಲನೆ, ಪ್ರಕಾಶಮಾನ ಹೆಡ್ ಲೈಟ್ ಬಳಕೆ ಮಾಡಿದರೆ 500 ರೂ. ದಂಡ ಕಡ್ಡಾಯವಾಗಿದೆ.

Traffic Rules In India
Image Credit: India TV News

•ಪೊಲೀಸ್ ನೋಟಿಸ್ ಗೆ ಸಹಿ ಹಾಕದಿರುವುದು, ಲಘುವಾಹನ ಚಾಲನೆ, ಅಸಭ್ಯರೀತಿಯ ವರ್ತನೆಗೆ 2,000 ರೂ ದಂಡ ವಿಧಿಸಲಾಗುತ್ತದೆ.

•ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸಿ ನಿಯಮ ಉಲ್ಲಂಘನೆ, ಡಿಎಲ್ ಇಲ್ಲದೆ ವಾಹನ ಚಾಲನೆ, ಡಿಎಲ್ ಪರಿಶೀಲನೆ ತೋರಿಸದೆ ಇರುವುದು ಇಂತಹ ತಪ್ಪುಗಳಿಗೆ 10,00 ರೂ ದಂಡ ವಿಧಿಸಲಾಗುತ್ತದೆ.

•ಇನ್ನು ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ 25,000 ರೂ ದಂಡವನ್ನು ಕೋರ್ಟ್ ವಿಧಿಸುತ್ತದೆ.

•ಎಫ್ ಎ ಬಾಕ್ಸ್ ಹಾಕದೆ ಇರುವುದು, ಆರ್ ಸಿ ವಿವಿರ ಬಾಡಿಗೆಯಲ್ಲಿ ಬರೆಯದೆ ಇರುವುದು, ನಂಬರ್ ಪ್ಲೇಟ್ ಬಳಸದಿರುವುದು, ಸೈಡ್ ಮಿರರ್ ಹಾಗೂ ಹ್ಯಾಂಡ್ ಬ್ರೇಕ್ ಇಲ್ಲದಿರುವುದು, ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು, ದೂಮಪಾನ ಮಾಡುತ್ತ ವಾಹನ ಓಡಿಸುವುದು ಸೇರಿದಂತೆ ಇನ್ನಿತರ ರಸ್ತೆ ನಿಯಮವನ್ನು ಉಲ್ಲಂಘಿಸಿದರೆ 5,00 ರೂ. ದಂಡ ಪಾವತಿಸಬೇಕಾಗುತ್ತದೆ.

Join Nadunudi News WhatsApp Group