Coronavirus: ಕರೋನ ಸೋಂಕು ಅಂತ್ಯವಾಗಿದೆ, ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆ.

ಕೋರೋಣ ಅಂತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆಯನ್ನ ಮಾಡಿದೆ.

Corona Virus Updates: ವಿಶ್ವದೆಲ್ಲೆಡೆ ಕೊರೊನಾ (Corona) ತನ್ನ ಛಾಪನ್ನು ಪಸರಿಸಿದ್ದು ಕೋಟ್ಯಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾಧಾರಣ ಎರಡು ವರ್ಷದಿಂದ ಕೊರೊನಾ ಭೀತಿ ಕಡಿಮೆ ಆಗಿದೆ. ಕೊರೊನಾ ಸೋಂಕಿನ ಭಯದಿಂದ ಜನರು ಇನ್ನು ಹೊರಗೆ ಬರಲಿಲ್ಲ. ಅಂತಹವರಿಗೆ ಇದೀಗ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ.

ಇದೀಗ ವಿಶ್ವದೆಲ್ಲೆದ್ದೆ ಕೊರೊನಾ ವೈರಸ್ ಬಹುತೇಕ ತೊಲಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸಿಹಿ ಸುದ್ದಿ ತಿಳಿಸಿದ್ದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಯಾಗಿದೆ ಎಂದಿದೆ. ಬರೋಬ್ಬರಿ ಮೂರೂ ವರ್ಷಗಳ ನಂತರ ಎಲ್ಲವೂ ಸರಿದಾರಿಗೆ ಬಂದಂತಾಗಿದೆ. 68 ಲಕ್ಷ ಜನರ ಸಾವಿನೊಂದಿಗೆ ಕೊರೊನಾ ವೈರಸ್ ಬಹುತೇಕ ಕರಾಳ ಅಧ್ಯಾಯ ಮುಗಿಸಿದೆ.

corona virus information
Image Credit: ndtv

ಕೊರೊನಾ ವೈರಸ್ ಹುಟ್ಟಿಕೊಂಡಿದ್ದು ಹೇಗೆ
17 ನವೆಂಬರ್ 2019, ಯಾರಿಗೂ ತಿಳಿಯದ ವೈರಸ್ ಒಂದು ಚೀನಾದಲ್ಲಿ ಕಂಡುಬಂದಿತ್ತು. ಚೀನಾದ ವುಹಾನ್ ಜನರ ಮೇಲೆ ಮೊದಲು ದಾಳಿ ಮಾಡಿದ್ದ ಕೊರೊನಾ ನಂತರ ಜಗತ್ತಿಗೇ ಹರಡಿತ್ತು. ವುಹಾನ್ ಪ್ರಾಂತ್ಯದಲ್ಲಿ ಈ ವೈರಸ್ ಕಂಡ ಕೂಡಲೇ ಚೀನಾದಲ್ಲಿ ಲಾಕ್ ಡೌನ್ ಆಗಿದೆ, ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿತ್ತು.

ಆದರೆ ಯಾವ ಪ್ರಯತ್ನವು ಸಹ ವರ್ಕ್ ಆಗಲಿಲ್ಲ. ನೋಡ ನೋಡುತ್ತಲೇ ಜಗತ್ತಿಗೇ ವ್ಯಾಪಿಸಿದ ಕೊರೊನಾ ಸೋಂಕು, ಈವರೆಗೂ 68 ಲಕ್ಷಕ್ಕೂ ಹೆಚ್ಚು ಜನರನ್ನ ಬಲಿಪಡೆದಿದೆ. ಆದರೆ ಕೊನೆಗೂ 3 ವರ್ಷದ ನಂತರ ಮನುಷ್ಯರಿಗೆ ಸಿಹಿಸುದ್ದಿ ಸಿಕ್ಕಿದೆ.

The World Health Organization has announced that Corona is over.
Image Credit: time

ಕೊರೊನಾ ವೈರಸ್ ಇನ್ನು ಮುಕ್ತಾಯವಾಗಿಲ್ಲ
ವಿಶ್ವ ಆರೋಗ್ಯ ಸಂಸ್ಥೆ ಇದೀಗ ಘೋಷಣೆ ಮಾಡಿದಂತೆ ಕೊರೊನಾ ತುರ್ತು ಪರಿಸ್ಥಿತಿ ಮುಕ್ತಾಯವಾಗಿದೆ. ಆದರೆ ಕೊರೊನಾ ವೈರಸ್ ಸಂಪೂರ್ಣವಾಗಿ ತೊಲಗಿಲ್ಲ. ಹೀಗಾಗಿ ಈಗಲೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.

Join Nadunudi News WhatsApp Group

ಕೊರೊನಾ ವೈರಸ್ ಇನ್ನೂ ಹಲವು ವರ್ಷಗಳ ಕಾಲ ಮನುಷ್ಯರ ನಡುವೆ ಇರುವುದು ಪಕ್ಕಾ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಹಿಂದೆ ಇದ್ದಷ್ಟು ಪ್ರಬಲತೆ ವೈರಸ್‌ಗೆ ಇಲ್ಲ, ಹೀಗಾಗಿ ತುರ್ತು ಪರಿಸ್ಥಿತಿ ಬದಲಾಗಿದೆ ಅಷ್ಟೇ. ಆದರೆ ಕೊರೊನಾ ಕಂಟಕ ಇದ್ದೇ ಇರುತ್ತದೆ, ಈ ಮೂಲಕ ಮುನ್ನೆಚ್ಚರಿಕೆ ವಹಿಸಿ ಜೀವನ ನಡೆಸಬೇಕಿದೆ.

Join Nadunudi News WhatsApp Group