Narendra Modi: 9 ತಿಂಗಳಿಂದ ಪ್ರತಿದಿನ ನರೇಂದ್ರ ಮೋದಿಗೆ ಬರುತ್ತಿದೆ ಈ ಮಹಿಳೆಯಿಂದ ಪತ್ರ, ಅಷ್ಟಕ್ಕೂ ಪತ್ರ ಬರೆಯುತ್ತಿರುವ ಮಹಿಳೆ ಯಾರು…?

ಕಳೆದ 9 ತಿಂಗಳಿಂದ ನರೇಂದ್ರ ಮೋದಿಗೆ ಪತ್ರ ಬರೆಯುತ್ತಿರುವ ಮಹಿಳೆ ಯಾರು...?

Women Wrote A Letter To Modi: ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ (Narendra Modi) ಅವರು ಜನರ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಕ್ರಮ ಕೈಗೊಳ್ಳುತ್ತಾರೆ. ಜನರ ಸಮಸ್ಯೆ ಪರಿಹಾರಕ್ಕೆಂದೇ ಮೋದಿ ಸರ್ಕಾರ ಹೆಚ್ಚಿನ ಸೌಲಭ್ಯವನ್ನು ನೀಡುತ್ತದೆ. ಇದೀಗ ಜನರ ಸಮಸ್ಯೆಯ ಬಗ್ಗೆ ಗರ್ಭಿಣಿ ಮಹಿಳೆಯೊಬ್ಬರು ಮೋದಿ ಅವರಿಗೆ 9 ತಿಂಗಳಿನಿಂದ ಪ್ರತಿದಿನ ಪತ್ರವನ್ನು ಬರೆಯುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸುವಂತೆ ಮೋದಿ ಅವರ ಬಳಿ ಮನವಿ ಪತ್ರ ಬರೆಯುತ್ತಿದ್ದಾರೆ.ಅಷ್ಟಕ್ಕೂ ಮೋದಿ ಅವರು ಪತ್ರ ಬರೆಯುತ್ತಿರುವ ಮಹಿಳೆ ಯಾರು..? ಯಾವ ಯಾವ ಸಮಸ್ಯೆಯ ಬಗ್ಗೆ ಮಹಿಳೆ ಮೋದಿ ಅವರಿಗೆ ಮಾಹಿತಿ ತಲುಪಿಸಿದ್ದಾರೆ..? ಎನ್ನುವ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

narendra modi
Image Credit: Live Mint

9 ತಿಂಗಳಿಂದ ಪ್ರತಿದಿನ ನರೇಂದ್ರ ಮೋದಿಗೆ ಬರುತ್ತಿದೆ ಈ ಮಹಿಳೆಯಿಂದ ಪತ್ರ
ಮೂಲತಃ ಕೊಯಮತ್ತೊರಿನ ಗಾಂಧಿನಗರದ ಕೃತಿಕಾ ಎನ್ನುವ ಗರ್ಭಿಣಿ ಮಹಿಳೆಯು 2018 ಮಾರ್ಚ್ 8 ಮಹಿಳಾ ದಿನಾಚರಣೆಯಿಂದ ಇಲ್ಲಿಯವರೆಗೂ ಪ್ರತಿ ದಿನವೂ ಯಾವುದಾದರು ಸಾರ್ವಜನಿಕ ಸಮಸ್ಯೆಯ ಕುರಿತು ಪತ್ರವನ್ನು ಬರೆಯುತ್ತಿದ್ದಾರೆ. 2018 ಮಾರ್ಚ್ 8 ರಂದು ಕೃತಿಕಾ ಪ್ರಧಾನಿ ಮೋದಿ ಅವರಿಗೆ ಮೊದಲ ಪತ್ರ ಬರೆದಿದ್ದರು. ಕೃತಿಕಾ ತಮ್ಮ ಮಾತೃ ಭಾಷೆ ತಮಿಳಿನಲ್ಲಿ ಪತ್ರವನ್ನು ಬರೆದಿದ್ದರೆ. ಮೋದಿ ಸರ್ಕಾರದಿಂದ ಕೃತಿಕಾ ಅವರಿಗೆ ಉತ್ತರ ಕೂಡ ಲಭ್ಯವಾಗಿತ್ತು.

ಮಹಿಳೆ ಮೋದಿ ಅವರಿಗೆ ಬರೆದ ಪತ್ರದಲ್ಲಿ ಏನಿತ್ತು..?
ಗೃಹಿಣಿಯಾಗಿರುವುದರಿಂದ ಸರ್ಕಾರವನ್ನು ತಲುಪಲು ಮತ್ತು ನನ್ನ ಕುಂದುಕೊರತೆಗಳನ್ನು ಹೇಳಲು ನನಗೆ ಅಡ್ಡಿಯಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಪೆಟ್ರೋಲ್, ಎಲ್‌ಪಿಜಿ ಬೆಲೆಯನ್ನು ಕಡಿಮೆ ಮಾಡಲು ಅಥವಾ ದೇಶಾದ್ಯಂತ ಕೆಲವು ಬದಲಾವಣೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಏನು ಮಾಡಬಹುದು ಎಂದು ನಾನು ಪತ್ರ ಬರೆದಿದ್ದೇನೆ. ಅದಕ್ಕಾಗಿಯೇ ನಾನು ನೇರವಾಗಿ ಪ್ರಧಾನ ಮಂತ್ರಿಗೆ ಸಮಸ್ಯೆಗಳನ್ನು ತಿಳಿಸಿದ್ದೇನೆ. ಎಲ್ಲಾ ಗೃಹಿಣಿಯರು ಆಡಳಿತಗಾರರನ್ನು ತಲುಪಬಹುದು ಎಂದು ನಾನು ಪ್ರೇರೇಪಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.

Women Wrote A Letter To Modi
Image Credit: Theweek

ಮಹಿಳೆ ಮೋದಿ ಅವರಿಗೆ ಯಾವ ಯಾವ ಸಮಸ್ಯೆ ಹೇಳಿಕೊಂಡಿದ್ದಾರೆ..?
ಮಹಿಳೆಯರಿಗೆ ಶೇ.33 ಮೀಸಲಾತಿಗೆ ಒತ್ತಾಯ, ಆನ್‌ ಲೈನ್ ರಮ್ಮಿ ನಿಷೇಧ, ನಿರ್ಭಯಾ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಹೆಚ್ಚಿನ ಪ್ರಾಮುಖ್ಯತೆ, ಬಿಎಸ್‌ ಎನ್‌ ಎಲ್ 5ಜಿ ಸೇವೆ ಒದಗಿಸುವುದು, ಪ್ರಸ್ತುತ ಇಸ್ರೇಲ್ ಗಾಜಾ ಯುದ್ಧವನ್ನು ನಿಲ್ಲಿಸುವುದು, ಚುನಾವಣೆಯಲ್ಲಿ ಮತಯಂತ್ರ ಪದ್ಧತಿಯನ್ನು ಮರು ಪರಿಚಯಿಸುವುದು ಸೇರಿದಂತೆ ಸಾಕಷ್ಟು ಸಮಸ್ಯೆಗಳ ಬಗ್ಗೆ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ ಮಾರ್ಚ್ ನಿಂದ ಇಲ್ಲಿಯವರೆಗೂ 264 ಪತ್ರಗಳನ್ನು ಮೋದಿ ಅವರಿಗೆ ಕಳುಹಿಸಿದ್ದಾರೆ. ದೇಶದ ಜನತೆಯ ಸಮಸ್ಯೆಯ ಬಗ್ಗೆ ಕೃತಿಕಾ ಬರೆಯುತ್ತಿರುವ ಪತ್ರದ ಬಗ್ಗೆ ಪ್ರಧಾನಿ ಮೋದಿ ಅವರ ಕಚೇರಿ ಮನ್ನಣೆ ನೀಡುತ್ತಿದೆ. ಇನ್ನು ಕೃತಿಕಾ ಆವಾ ಈ ಕೆಲಸದಾ ಬಗ್ಗೆ ಎಲ್ಲರು ಕೂಡ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group