Expensive Currencies: ವಿಶ್ವದ ಅತೀ ದುಬಾರಿ ಕರೆನ್ಸಿ ಯಾವುದು, ಇಲ್ಲಿದೆ ನೋಡಿ 5 ಪ್ರಬಲ ರಾಷ್ಟ್ರದ ಕರೆನ್ಸಿ ಪಟ್ಟಿ.

ವಿಶ್ವದ ಅತೀ ದುಬಾರಿ ಕರೆನ್ಸಿ ಯಾವುದು, ಇಲ್ಲಿದೆ ನೋಡಿ ವಿಶ್ವದ ದುಬಾರಿ ಕರೆನ್ಸಿ ಪಟ್ಟಿ.

Expensive Currencies In World: ವಿವಿಧ ದೇಶಗಳ ಕರೆನ್ಸಿಯನ್ನು (Currency) ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಕರೆನ್ಸಿಯನ್ನು (Indian Currency) ರೂಪಾಯಿಗಳಲ್ಲಿ ಪರಿಗಣಿಸಿದರೆ ಇನ್ನು ಹಲವು ದೇಶದ ಕರೆನ್ಸಿಗಳನ್ನು ಆ ದೇಶಕ್ಕೆ ಅನುಗುಣವಾಗಿ ಪರಿಗಣಿಸಲಾಗುತ್ತದೆ. ಇನ್ನು ಯುಎಸ್ ನಲ್ಲಿ ಕರೆನ್ಸಿ (US Currency) ಯನ್ನು ಡಾಲರ್ (Dollar) ಆಗಿ ಪರಿಗಣಿಸಲಾಗುತ್ತದೆ.

What is the most expensive currency in the world, see here the list of most expensive currencies in the world.
Image Credit: peakpx

ಯುಎಸ್ ಡಾಲರ್
ಜನರು ಸಾಮಾನ್ಯವಾಗಿ ಯುಎಸ್ ಡಾಲರ್ ಅನ್ನು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಕರೆನ್ಸಿ ಎಂದು ಭಾವಿಸುತ್ತಾರೆ. ಆದರೆ ವಿಶ್ವದ ಅತ್ಯಂತ ದುಬಾರಿ ಡಾಲರ್ ಯುಎಸ್ ಡಾಲರ್ ಅಲ್ಲ. ಇದೀಗ ಯುಎಸ್ ಡಾಲರ್ ಗಿಂತಲೂ ದುಬಾರಿಯಾಗಿರುವ ವಿಶ್ವದ ಐದು ಕರೆನ್ಸಿಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

ವಿಶ್ವದ ಮೊದಲ ಪ್ರಬಲ ಕರೆನ್ಸಿ ಕುವೈತ್ ದಿನಾರ್
ವಿಶ್ವದಲ್ಲಿಯೇ ಅತ್ಯಂತ ದುಬಾರಿ ಕರೆನ್ಸಿ ಎಂದರೆ ಅದು ಕುವೈತ್ ದಿನಾರ್ ಎನ್ನಲಾಗುತ್ತದೆ. 1 ಕುವೈತ್ ದಿನಾರ್ ನ ಬೆಲೆ 3.26 ಡಾಲರ್ ಗೆ ಸಮಾನವಾಗಿದೆ. ಕುವೈರ್ ದಿನಾರ್ ನ ಬೆಲೆಯನ್ನು ಭಾರತೀಯ ರೂಪಾಯಿಗೆ ಹೋಲಿಸಿ ನೋಡಿದರೆ 1 ಕುವೈತ್ ದಿನಾರ್ ನ ಬೆಲೆ 268.21 ಭಾರತೀಯ ರೂಪಾಯಿಗಳಿಗೆ ಸಮಾನವಾಗಿರುತ್ತದೆ.

Kuwait's dinar holds the title of the strongest currency in the world.
Image Credit: theceo

ವಿಶ್ವದ ಎರಡನೇ ಮತ್ತು ಮೂರನೆಯ ಪ್ರಬಲ ಕರೆನ್ಸಿ
ಬಹ್ರೇನ್ ದಿನಾರ್ ವಿಶ್ವದಲ್ಲಿಯೇ ಅತ್ಯಂತ ಎರಡನೆಯ ದುಬಾರಿ ಕರೆನ್ಸಿ ಆಗಿದೆ. ಯುಎಸ್ ಡಾಲರ್ ಗೆ ಹೋಲಿಸಿದರೆ 1 ಬಹ್ರೇನ್ ದಿನಾರ್ ನ ಬೆಲೆ 2.65 ಯುಎಸ್ ಡಾಲರ್ ಗೆ ಸಮಾನವಾಗಿದೆ. 1 ಬಹ್ರೇನ್ ದಿನಾರ್ 218.36 ಭಾರತೀಯ ರೂಪಾಯಿಗೆ ಸಮಾನವಾಗಿರುತ್ತದೆ.

ಓಮೆನ್ ರಿಯಾಲ್ ವಿಶ್ವದಲ್ಲಿಯೇ ಅತ್ಯಂತ ಮೂರನೆಯ ದುಬಾರಿ ಕರೆನ್ಸಿ ಆಗಿದೆ. ಯುಎಸ್ ಡಾಲರ್ ಗೆ ಹೋಲಿಸಿದರೆ 1 ಓಮೆನ್ ರಿಯಾಲ್ ನ ಬೆಲೆ 2.60 ಯುಎಸ್ ಡಾಲರ್ ಗೆ ಸಮಾನವಾಗಿದೆ. 1 ಓಮೆನ್ ರಿಯಾಲ್ 213.82 ಭಾರತೀಯ ರೂಪಾಯಿಗೆ ಸಮಾನವಾಗಿರುತ್ತದೆ.

Join Nadunudi News WhatsApp Group

The Bahraini Dinar is the second strongest currency in the world.
Image Credit: gulfnews

ವಿಶ್ವದ ನಾಲ್ಕನೇ ಮತ್ತು ಐದನೇ ಪ್ರಬಲ ಕರೆನ್ಸಿ
ಜೋರ್ಡಾನ್ ಕರೆನ್ಸಿ ವಿಶ್ವದಲ್ಲಿಯೇ ಅತ್ಯಂತ ನಾಲ್ಕನೇ ದುಬಾರಿ ಕರೆನ್ಸಿ ಆಗಿದೆ. ಯುಎಸ್ ಡಾಲರ್ ಗೆ ಹೋಲಿಸಿದರೆ 1 ಜೋರ್ಡಾನ್ ಕರೆನ್ಸಿಯ ಬೆಲೆ 1.14 ಯುಎಸ್ ಡಾಲರ್ ಗೆ ಸಮಾನವಾಗಿದೆ. 1 ಜೋರ್ಡಾನ್ ಕರೆನ್ಸಿ 115.85 ಭಾರತೀಯ ರೂಪಾಯಿಗೆ ಸಮಾನವಾಗಿರುತ್ತದೆ.

ಬ್ರಿಟಿಷ್ ಕರೆನ್ಸಿ ವಿಶ್ವದಲ್ಲಿಯೇ ಅತ್ಯಂತ ಐದನೇ ದುಬಾರಿ ಕರೆನ್ಸಿ ಆಗಿದೆ. ಯುಎಸ್ ಡಾಲರ್ ಗೆ ಹೋಲಿಸಿದರೆ 1 ಬ್ರಿಟಿಷ್ ಕರೆನ್ಸಿಯ ಬೆಲೆ 1.24 ಯುಎಸ್ ಡಾಲರ್ ಗೆ ಸಮಾನವಾಗಿದೆ. 1 ಬ್ರಿಟಿಷ್ ಕರೆನ್ಸಿ 101.80 ಭಾರತೀಯ ರೂಪಾಯಿಗೆ ಸಮಾನವಾಗಿರುತ್ತದೆ.

Join Nadunudi News WhatsApp Group