Yash Is Brand Ambassador: ಪೆಪ್ಸಿ ಬ್ರಾಂಡ್ ಗೆ ಯಶ್ ರಾಯಭಾರಿ, ಬೇಸರ ವ್ಯಕ್ತಪಡಿಸಿದ ಯಶ್ ಫ್ಯಾನ್ಸ್.
Yash Is Brand Ambassador For Pepsi Advertisement: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಮುಂದಿನ ಚಿತ್ರದ ನಿರೀಕ್ಷೆಯಲ್ಲಿ ಯಶ್ ಅಭಿಮಾನಿಗಳು (Yash Fans) ಕಾಯುತ್ತಿದ್ದಾರೆ. ಈ ನಡುವೆ ಯಶ್ ಅವರ ಮುಂದಿನ ಚಿತ್ರದ ವಿಷಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಡಿದ್ದವು.
ಇದೀಗ ರಾಕಿಂಗ್ ಸ್ಟಾರ್ ಯಶ್ ಪೆಪ್ಸಿ ಪಾನೀಯದ ಬ್ರಾಂಡ್ (Pepsi Brand) ಆಗಿದ್ದಾರೆ. ಯಶ್ ಪೆಪ್ಸಿ ಪಾನೀಯದ ರಾಯಭಾರಿ ಆದ ಕಾರಣ ಅದೆಷ್ಟೋ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೆಪ್ಸಿ ಬ್ರಾಂಡ್ ಗೆ ರಾಯಭಾರಿಯಾದ ನಟ ಯಶ್
ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ (Yash Twitter Account) ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಯಶ್ ಅಭಿಮಾನಿಗಳು ಸಿನಿಮಾ ವಿಚಾರಕ್ಕೆ ಸಂಬಂದಿಸಿದ ವಿಷಯ ಆಗಿರಬಹುದು ಎಂದು ಊಹಿಸಿದ್ದರು. ಆದರೆ ಪೆಪ್ಸಿ ಪಾನೀಯ ಕಂಪನಿಯ ಉತ್ಪನ್ನಕ್ಕೆ ಯಶ್ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಸ್ಟೈಲ್ ಆಗಿ ಪೆಪ್ಸಿ ಕುಡಿಯುವ ಸಣ್ಣ ವಿಡಿಯೋ ತುಣುಕನ್ನು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಅವರ ಈ ಪೋಸ್ಟ್ ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ.
View this post on Instagram
ಯಶ್ ಮೇಲೆ ಅಭಿಮಾನಿಗಳ ಮುನಿಸು
ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೆಪ್ಸಿ ಬ್ರಾಂಡ್ ಗೆ ರಾಯಭಾರಿಯಾಗಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಪೆಪ್ಸಿ ಕುಡಿಯುವ ಸಣ್ಣ ವಿಡಿಯೋ ತುಣುಕನ್ನು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಗಮನಿಸಿದ ನೆಟ್ಟಿಗರು ಯಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಯಶ್ ಅವರಿಗೆ ಅಭಿನಂದನೆ ತಿಳಿಸಿದರೆ ಅನೇಕರು ಇದೆಲ್ಲ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ನಿಮಗೆ ಹಾಗು ನಮಗ್ಯಾರಿಗೂ ಇದು ಬೇಕಿರಲಿಲ್ಲ ಯಶ್ ಅವರೇ . ನಂದಿನಿ ಮಜ್ಜಿಗೆ ಬಳಸಿ, ಎಳನೀರು ಬಳಸಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಹಾಗೆಯೆ ಇನ್ನೊಬ್ಬರು ದಿಸ್ ಇಸ್ ಟೂ ಮಚ್ ಸರ್, ನಿಮ್ಮ ಗೌರವವಿದೆ ನೀವು ತಂಪು ಪಾನೀಯ ಯಾವುದು ಎಂಬುದನ್ನು ನೋಡಿ ಜಾಹಿರಾತು ಕೊಡಬೇಕಿತ್ತು. ಜನರಿಗೆ ದಯಮಾಡಿ ಮೋಸಮಾಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
ಯಶ್ ಅಭಿಮಾನಿಗಳು ಯಶ್ ಅವರ ಮುಂದಿನ ಚಿತ್ರದ ಘೋಷಣೆಯ ನಿರೀಕ್ಷೆಯಲ್ಲಿದ್ದರು. ಆದರೆ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ವಿಚಾರ ಹಂಚಿಕೊಳ್ಳುವ ಬದಲು ಪೆಪ್ಸಿ ರಾಯಭಾರಿ ಆಗಿರುವ ವಿಚಾರ ಹಂಚಿಕೊಂಡಿರುವುದು ಅನೇಕರಲ್ಲಿ ಬೇಸರ ಮೂಡಿಸಿದೆ. ಯಶ್ ಅವರ ಈ ಪೋಸ್ಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ.