Yoga: ಆಪಲ್ ವಾಚ್ ಜೊತೆ ಯೋಗ ಮಾಡಿ, ಅಚ್ಚರಿಗೆ ಹೊಸ ಅಪ್ಡೇಟ್ ಜಾರಿಗೆ ತಂದ ಆಪಲ್.

ಈಗ ಆಪಲ್ ವಾಚ್ ಬಳಸಿಕೊಂಡು ಜನರು ಯೋಗ ಮಾಡಬಹುದು.

Yoga Day With Apple Watch: ಸಾಮಾನ್ಯವಾಗಿ ಸ್ಮಾರ್ಟ್ ವಾಚ್ ಖರೀದಿ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಆಪಲ್ ವಾಚ್ ಇತರೆ ಸಾಮಾನ್ಯ ಫಿಟ್ ನೆಸ್ ವಾಚ್ ಗಳಿಗಿಂತ ಹೆಚ್ಚು ಫೀಚರ್ಸ್ ಹೊಂದಿದೆ. ನೀವು ಬೇಕಿದ್ದರೆ ಕಡಿಮೆ ದರದ ಆಪಲ್ ವಾಚ್ ಎಸ್ ಇ ಅಥವಾ ದುಬಾರಿ ವಾಚ್ ಸೀರಿಸ್ 7 ಖರೀದಿಸಬಹುದು.

ಆಪಲ್ ವಾಚ್ ಜೊತೆ ಉತ್ತಮ ಆರೋಗ್ಯ
ಯೋಗ ಅನ್ನುವುದು ಮಾನವನ ಜೀವಕ್ಕೆ ಎಷ್ಟು ಪ್ರಯೋಜನಕಾರಿ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಶ್ವಾಶಕೋಶದ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಯೋಗವು ಮಹತ್ವದ ಪಾತ್ರವನ್ನು ವಹಿಸುತ್ತದೆ.

Better health with Apple Watch
Image Credit: Hindustan Times

ಯೋಗವು ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ವಿವಿಧ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಆಪಲ್ ವಾಚ್ ಬಳಸಿ ನಮ್ಮ ಆರೋಗ್ಯ ಉತ್ತಮಪಡಿಸಬಹುದು.

ಹೃದಯದ ಬಡಿತ sp02 ಮಟ್ಟ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು. ಮೈಂಡ್ ಫುಲ್ ನೆಸ್ ಮತ್ತು ಬ್ರೀಥ್ ಅಪ್ಲಿಕೇಶನ್ ಗಳು ಪ್ರಯೋಜನಕಾರಿ ಎಂದು ಯೋಗ ಎಕ್ಸ್ ಪಾರ್ಟ್ ಶಾನಿ ದಯಾಲ್ ಹೇಳಿದ್ದಾರೆ.

ಆಪಲ್ ವಾಚ್ ಜೊತೆ ಯೋಗ
ನೀವು ಆಪಲ್ ವಾಚ್ ಜೊತೆ ಯೋಗ ಮಾಡಬಹುದು. ಈ ಆಪಲ್ ವಾಚ್ ನಲ್ಲಿ ಮೊದಲೇ ಲೋಡ್ ಆಗಿರುತ್ತದೆ. ಇದರಲ್ಲಿ ಹಲವು ಸೀರಿಸ್ ಉಸಿರಾಟದ ಗೈಡ್ ಗಳಿವೆ. ಪ್ರತಿನಿತ್ಯ ಸಮರ್ಪಕವಾಗಿ ಉಸಿರಾಡಲು ಈ ಆಪ್ ನೆನಪು ಮಾಡುತ್ತದೆ.

Join Nadunudi News WhatsApp Group

Better health with Apple Watch
Image Credit: tomsguide

ಎಷ್ಟು ದೀರ್ಘ ಉಸಿರಾಟ ಮಾಡಲು ಬಯಸುವಿರೋ ಅದಕ್ಕೆ ತಕ್ಕಂತೆ ಇದರಲ್ಲಿ ಹೊಂದಾಣಿಕೆ ಮಾಡಬಹುದು. ಇದನ್ನು ಬಳಸಲು ಮೈಂಡ್ ಫುಲ್ ನೆಸ್ ಅಪ್ ತೆರೆಯಬೇಕು. ನಂತರ ನಿಮ್ಮ ಉಸಿರಾಟದ ಕುರಿತು ಪರಿಶೀಲನೆ ನಡೆಸಬಹುದು. ನಿಮ್ಮ ಐಫೋನ್ ಮತ್ತು ಆಪಲ್ ವಾಚ್ ನಲ್ಲಿ ಪ್ರಯೋಗ ಪಾಠಗಳು ಲಭ್ಯವಾಗಲಿದೆ.

ವಾಚ್ ಓಎಸ್ ಮತ್ತು ಐಓಎಸ್ ಟೆಕ್ನಲಾಜಿ ಜೊತೆಯಾಗಿ ಬಳಸಬಹುದು. ವಾಚ್ ನಲ್ಲಿ ಕೇಳಿಸುವ ಆಡಿಯೋ ನೇರೈನಿಂದ ಆಸನಗಳನ್ನು ಮಾಡಲು ಸೂಚಿಸಲಾಗುತ್ತದೆ. ದೇಹದ ಹದಿನೇಳು ಜಾಯಿಂಟ್‌ಗಳನ್ನು ಈ ವಾಚ್‌ನ ಬಾಡಿ ಟ್ರಾಕಿಂಗ್‌ ಫೀಚರ್‌ ಟ್ರ್ಯಾಕ್‌ ಮಾಡುತ್ತದೆ ಮತ್ತು ಸರಿಯಾಗಿ ಮಾಡದೆ ಇದ್ದರೆ ಬದಲಾವಣೆಗಳನ್ನು ಸೂಚಿಸುತ್ತದೆ.

Join Nadunudi News WhatsApp Group