Nita Ambani: ಐಷಾರಾಮಿ ರೋಲ್ಸ್ ರಾಯ್ಸ್ ಕಾರ್ ಖರೀದಿಸಿದ ನೀತಾ ಅಂಬಾನಿ, ಬೆಲೆ ಮತ್ತು ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ.
ಐಷಾರಾಮಿ ರೋಲ್ಸ್ ರಾಯ್ಸ್ ಕಾರ್ ಖರೀದಿಸಿದ ನೀತಾ ಅಂಬಾನಿ, ಬೆಲೆ ಮತ್ತು ಫೀಚರ್ ಇಲ್ಲಿದೆ
Nita Ambani Rolls Royce Expensive Car: ದೇಶದ ಶ್ರೀಮಂತ ಕುಟುಂಬವಾಗಿ ಗುರುತಿಸಲ್ಪಟ್ಟ ಮುಕೇಶ್ ಅಂಬಾನಿ (Mukesh Ambani) ಅವರ ಕುಟುಂಬ ತಮ್ಮ ಐಷಾರಾಮಿ ಜೀವನದ ವಿಚಾರವಾಗಿ ಆಗಾಗ ಸುದ್ದಿಯಾಗುತ್ತ ಇರುತ್ತಾರೆ. ದೇಶದಲ್ಲಿ ಅತಿ ದುಬಾರಿ ಮನೆಯಲ್ಲಿ ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬ ವಾಸಿಸುತ್ತಿದ್ದಾರೆ.
ಅಂಬಾನಿ ಕುಟುಂಬವು ಅನೇಕ ಐಷಾರಾಮಿ ಮತ್ತು ದುಬಾರಿ ಕಾರುಗಳ ಸಂಗ್ರಹವನ್ನು ಹೊಂದಿದೆ. 850 ಕೋಟಿ ರೂಪಾಯಿ ಮೌಲ್ಯದ ಖಾಸಗಿ ಜೆಟ್ ಗಳನ್ನು ಹೊಂದಿದ್ದಾರೆ. ಈಗ ಆ ಸಂಗ್ರಹಕ್ಕೆ ಹೊಸ ಸೇರ್ಪಡೆಯಾಗಿದೆ. ನೀತಾ ಅಂಬಾನಿಯ ಹೊಸ ರೋಲ್ಸ್ ರಾಯ್ಸ್ ಖರೀದಿಸುವ ಮೂಲಕ ತಮ್ಮ ದುಬಾರಿ ಕಾಲ್ ಕಲೆಕ್ಷನ್ ಗಳಿಗೆ ಹೊಸದನ್ನು ಸೇರಿಸಿದ್ದಾರೆ.
![Nita Ambani Rolls Royce Expensive Car](https://nadunudi.in/wp-content/uploads/2024/04/Nita-Ambani-Rolls-Royce-Expensive-Car.jpg)
ಐಷಾರಾಮಿ ರೋಲ್ಸ್ ರಾಯ್ಸ್ ಕಾರ್ ಖರೀದಿಸಿದ ನೀತಾ ಅಂಬಾನಿ
ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು 12 ಕೋಟಿ ರೂಪಾಯಿ ಮೌಲ್ಯದ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ VIII EWB ಖರೀದಿಸಿದ್ದಾರೆ. ಈ ಕಾರಿನ ವಿಶೇಷತೆ ಏನೆಂದರೆ ರೋಸ್ ಕ್ವಾರ್ಟ್ಜ್ ಹೊರಭಾಗ ಮತ್ತು ಆರ್ಕಿಡ್ ವೆಲ್ವೆಟ್ ಇಂಟೀರಿಯರ್ ಹೊಂದಿದೆ. ಇದರ ಜೊತೆಗೆ ನೀತಾ ಅಂಬಾನಿಯವರ ಅತಿ ದುಬಾರಿ ರೋಲ್ಸ್ ರಾಯ್ಸ್ ಗೋಲ್ಡ್ SoE, ಡಿನ್ನರ್ ಪ್ಲೇಟ್ ಚಕ್ರಗಳು ಮತ್ತು NMA ಮೊದಲಕ್ಷರಗಳನ್ನು ಹೆಡ್ ರೆಸ್ಟ್ ಗಳಲ್ಲಿ ಎಂಬ್ರಾಯಿಡ್ ಮಾಡಲಾಗಿದೆ.
ಬೆಲೆ ಮತ್ತು ವಿಶೇಷತೆ ತಿಳಿದರೆ ಆಶ್ಚರ್ಯ ಆಗುತ್ತೆ
ರೋಲ್ಸ್-ರಾಯ್ಸ್ ಫ್ಯಾಂಟಮ್ VIII EWB 6.75-ಲೀಟರ್ V12 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ನಿಂದ ಚಾಲಿತವಾಗಿದೆ. ಇದು 571 Bhp ನ ಉನ್ನತ ವೇಗ ಮತ್ತು 900 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಬಿಗಿ ಭದ್ರತೆಯಲ್ಲಿ ಮುಂಬೈನ ಬೀದಿಗಳಲ್ಲಿ ನೀತಾ ಅಂಬಾನಿ ಹೊಸ 12 ಕೋಟಿ ರೂ. ರೋಲ್ಸ್ ರಾಯ್ಸ್ ಚಲಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೀತಾ ಅಂಬಾನಿ ಅವರ ದುಬಾರಿ ಕಾರ್ ಅನ್ನು ಕಂಡು ನೋಡುಗರು ಅಚ್ಚರಿ ಪಟ್ಟಿದ್ದಾರೆ. ಮುಖೇಶ್ ಅಂಬಾನಿ ಅವರು ಇತ್ತೀಚೆಗೆ ತಮ್ಮ ಪತ್ನಿ ನೀತಾ ಅಂಬಾನಿ ಅವರಿಗೆ ಭಾರತದ ಅತ್ಯಂತ ದುಬಾರಿ ಎಸ್ಯುವಿ, ರೂ. 10 ಕೋಟಿ ರೋಲ್ಸ್ ರಾಯ್ಸ್ ಕಲಿನ ಕಪ್ಪು ಬ್ಯಾಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಸದ್ಯ ಮತ್ತೊಂದು ದುಬಾರಿ ರೋಲ್ಸ್ ರಾಯ್ಸ್ ಖರೀದಿಸುವ ಮೂಲಕ ನೀತಾ ಅಂಬಾನಿ ಮತ್ತೆ ಸುದ್ದಿಯಾಗಿದ್ದಾರೆ.
![nita ambani rolls royce price](https://nadunudi.in/wp-content/uploads/2024/04/nita-ambani-rolls-royce-price.jpg)