Ambani Family: ಊಟದ ಬಟ್ಟಲಲ್ಲಿ ಗರಿಗರಿ ನೋಟು ನೀಡಿದ ನೀತಾ ಅಂಬಾನಿ, ಭರ್ಜರಿ ಔತಣ ಕೂಟ.

ಊಟದ ಬಟ್ಟಲಲ್ಲಿ ನೋಟುಗಳನ್ನ ನೀಡಿದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ

Nita Ambani Cultural Centre: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ (Mukesh Ambani) ಅವರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಇನ್ನು ಮುಕೇಶ್ ಅಂಬಾನಿ ಅವರ ಐಷಾರಾಮಿ ಜೀವನದ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇದೀಗ ಅಂಬಾನಿ ಕುಟುಂಬದ ಕಾರ್ಯಕ್ರಮದ ಊಟದ ಬಟ್ಟಲಲ್ಲಿ ಊಟದ ಜೊತೆಗೆ ಗರಿ ಗರಿ ನೋಟನ್ನು ಕೂಡ ಇಟ್ಟು ಗಮನ ಸೆಳೆದಿದ್ದಾರೆ.

Mukesh Ambani and Nita Ambani giving notes in the lunch cup
Image Credit: economictimes.indiatimes

ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ
ಏಪ್ರಿಲ್ 1 ರಂದು ನೀತಾ ಮುಕೇಶ್ ಅಂಬಾನಿ (Nita Mukesh Ambani) ಅವರು ಕಲ್ಚರಲ್ ಸೆಂಟರ್ ಅನ್ನು ಉದ್ಘಾಟನೆ ಮಾಡಿದ್ದರು. NMACC ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಭಾರತ ಮತ್ತು ವಿದೇಶಗಳ ಕಲಾವಿದರ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಅವರು ಸಾಂಸ್ಕ್ರತಿಕ ಕೇಂದ್ರವನ್ನು ಉದ್ಘಾಟನೆ ಮಾಡಿದ್ದರು.

ಅಂಬಾನಿ ಕುಟುಂಬದ ಅದ್ದೂರಿ ಕಾರ್ಯಕ್ರಮ
ಅಂಬಾನಿ ಕುಟುಂಬದ ಕಾರ್ಯಕ್ರಮಗಳು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಇವರ ಕಾರ್ಯಕ್ರಮಕ್ಕೆ ದೇಶ ವಿದೇಶದ ಗಣ್ಯರಿಂದ ಹಿಡಿದು ಬಾಲಿವುಡ್ ನ ಖ್ಯಾತ ನಟ ನಟಿಯರು ಕೂಡ ಭಾಗಿಯಾಗುತ್ತಾರೆ. ಅಂಬಾನಿ ಕುಟುಂಬದ ಅದ್ದೂರಿ ಆಥಿತ್ಯ ಔತಣಕೂಟ ಎಲ್ಲರ ಗಮನ ಸೆಳೆದಿದೆ. ಅಂಬಾನಿ ಕುಟುಂಬದ ಆಥಿತ್ಯ ಪದ್ದತಿಯನ್ನು ದೌಲತ್ ಕಿ ಬಾತ್ ಎಂದು ಕರೆಯುತ್ತಾರೆ.

Nita Ambani and Mukesh Ambani donating food bowls during the opening of the Cultural Center
Image CreditL timesnownews

ಊಟದ ಜೊತೆಗೆ ಗರಿಗರಿ ನೋಟು ನೀಡಿದ ಅಂಬಾನಿ ಕುಟುಂಬ
ಅಂಬಾನಿ ಕುಟುಂಬದ ಔತಣ ಕೂಟವೆಂದರು ಬಹಳ ಅದ್ದೂರಿಯಾಗಿರುತ್ತದೆ. ಬಗೆಬಗೆಯ ಭೋಜನಗಳು ಸಿದ್ದವಾಗಿರುತ್ತದೆ. ವಿಭಿನ್ನರೀತಿಯ ಆಹಾರ ಪದಾರ್ಥಗಳು ಇರುತ್ತವೆ. ಎಂದು ತಿಂದಿರದ ತಿಂಡಿ ತಿನಿಸುಗಳು ಇರುತ್ತದೆ.

ಅಂಬಾನಿ ಕುಟುಂಬದ ಔತಣಕೂಟವು ಎಲ್ಲರ ಗಮನವನ್ನು ಸೆಳೆಯುತ್ತದೆ. ಈ ಬಾರಿ ಅಂಬಾನಿ ಕುಟುಂಬದ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಬೆಳ್ಳಿಯ ತಟ್ಟೆಗಳಲ್ಲಿ ಆಹಾರವನ್ನು ನೀಡುತ್ತಾರೆ. ಹಾಗೆಯೆ ಊಟದ ಜೊತೆಗೆ ಗರಿಗರಿ ನೋಟುಗಳನ್ನು ನೀಡಿ ಊಟವನ್ನು ಬಡಿಸಿದ್ದಾರೆ. ಅಂಬಾನಿ ಕುಟುಂಬದ ಈ ಭರ್ಜರಿ ಔತಣಕೂಟ ಇದೀಗ ಎಲ್ಲರ ಗಮನ ಸೆಳೆದಿದೆ.

Join Nadunudi News WhatsApp Group

Join Nadunudi News WhatsApp Group