Jio Plan: ಪ್ರತಿನಿತ್ಯ 2GB ಡೇಟಾ ಮತ್ತು ಅನಿಯಮಿತ ಉಚಿತ ಕರೆ, ಜಿಯೋ ಗ್ರಾಹಕರಿಗೆ ಬಂಪರ್ ಎರಡು ರಿಚಾರ್ಜ್ ಬಿಡುಗಡೆ.

2 ಹೊಸ ವಾರ್ಷಿಕ ಯೋಜನೆಯನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದ ಜಿಯೋ.

Annual Recharge Plan For Jio: ಇದೀಗ ಜಿಯೋ (Jio) ತನ್ನ ಗ್ರಾಹಕರಿಗೆ ತಿಂಗಳ ರಿಚಾರ್ಜ್ ಅನ್ನು ತಪ್ಪಿಸಲು 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ. ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ.

ವಿವಿಧ ಟೆಲಿಕಾಂ ಕಂಪನಿಗಳು ವಿಭಿನ್ನ ರೀತಿಯ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪೆನಿಯಾದ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಗ್ರಾಹಕರನ್ನು ಸೆಳೆಯುತ್ತಿದೆ. ಓಟಿಟಿ ಸೌಲಭ್ಯದ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವನ್ನು ನೀಡಲು ಜಿಯೋ ತನ್ನ ಗ್ರಾಹಕರಿಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ.

Jio introduced 2 annual plan to its customers.
Image Credit: News24online

ಜಿಯೋ 1559 ರೂ. ರಿಚಾರ್ಜ್ ಪ್ಲಾನ್
ಜಿಯೋ ಗ್ರಾಹಕರು ಪ್ರತಿನಿತ್ಯ 4.21 ರೂ. ಖರ್ಚು ಮಾಡುವ ಮೂಲಕ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಪಡೆಯಬಹುದು. ಈ ಯೋಜನೆಯು ನಿಮಗೆ ಅನಿಯಮಿತ ಕರೆಯ ಜೊತೆಗೆ 3600 SMS ಸೌಲಭ್ಯವನ್ನು ನೀಡಲಿದೆ.

ಈ ಯೋಜನೆಯು ಕಡಿಮೆ ಡೇಟಾ ಬಳಕೆದಾರರಿಗೆ ಸಹಾಯವಾಗಲಿದೆ. ಈ ಯೋಜನೆಯಲ್ಲಿ ನಿಮಗೆ 24GB ಡೇಟಾ ಲಭ್ಯವಾಗಲಿದೆ. ಡೇಟಾ ಖಾಲಿಯಾದ ಬಳಿಕ 64Kbps ವೇಗದ ಮಿತಿಯ ಡೇಟಾವನ್ನು ಪಡೆಯಬಹುದು. ಈ ಯೋಜನೆಯ ಮೂಲಕ ಬಳಕೆದಾರರು ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಜಿಯೋ 2879 ರೂ. ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 2,879 ರೂ. ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಜಿಯೋ ಗ್ರಾಹಕರು ರೂ. 2,879 ರಿಚಾರ್ಜ್ ಮಾಡಿದರೆ 365 ದಿನಗಳ ಮಾನ್ಯತೆಯ ಜೊತೆಗೆ ಅನ್ಲಿಮಿಟೆಡ್ ಕರೆಯ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 2GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

Jio introduced 2 annual plan to its customers.
Image Credit: Businessleague

ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಜಿಯೋ 2879 ರೂ. ಯೋಜನೆಯಲ್ಲಿ ಗ್ರಾಹಕರು ಒಟ್ಟಾಗಿ 730GB ಡೇಟಾವನ್ನು ಪಡೆಯಬಹುದಾಗಿದೆ.

ಜಿಯೋ 2,999 ರೂ. ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 2,999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು.

ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ 912.5GB ಡೇಟಾವನ್ನು ನೀಡುತ್ತದೆ. ಪ್ರತಿ ನಿತ್ಯ 2 .5GB ಡೇಟಾ ಲಭ್ಯವಿರುವ ಕಾರಣ ಹೆಚ್ಚಿನ ಡೇಟಾವನ್ನು ಬಳಸಲು ಅವಕಾಶವಿದೆ.

Join Nadunudi News WhatsApp Group