Darshan Imprisonment: ಜೈಲಿನಲ್ಲಿ ದರ್ಶನ ಮತ್ತು ಪವಿತ್ರ ಗೌಡಗೆ ಯಾವ ಆಹಾರ ಕೊಡಲಾಗುತ್ತದೆ…? ಇಲ್ಲಿದೆ ಮೆನು ಪಟ್ಟಿ.

ಜೈಲಿನಲ್ಲಿ ದರ್ಶನ್ ಮತ್ತು ಪವಿತ್ರ ಗೌಡಗೆ ಯಾವ ಆಹಾರ ಕೊಡಲಾಗುತ್ತದೆ...?

Darshan And Pavitra Gowda Imprisonment: ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್ ಹಾಗೂ ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮೊದಲು ಪವಿತ್ರ ಗೌಡ ಹಾಗೂ 10 ಆರೋಪಿಗಳನ್ನು ನ್ಯಾಯ್ಯಂಗ ಬಂಧನದಲ್ಲಿ ಇರಿಸಲಾಗಿತ್ತು, ಪವಿತ್ರ ಗೌಡಗೆ ನ್ಯಾಯಾಂಗ ಬಂಧನದ ಆದೇಶದ ಸಮಯದಲ್ಲಿ ದರ್ಶನ್ ಸೇರಿದಂತೆ ನಾಲ್ಕು ಆರೋಪಿಗಳನ್ನು ಇನ್ನೆರಡು ದಿನಗಳು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಲಾಗಿತ್ತು.

Darshan And Pavitra Gowda Imprisonment
Image Credit: Headlinekarnataka

ಕೊನೆಗೂ ಜೈಲು ಪಲಾದ್ರೂ ಅಭಿಮಾನಿಗಳ ಡಿ ಬಾಸ್…!
ಇನ್ನು ಕಸ್ಟಡಿಯಲ್ಲಿದ್ದ ದರ್ಶನ್ ಹಾಗೂ 4 ಮಂದಿ ಆರೋಪಿಗಳನ್ನು ನಿನ್ನೆ ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ದರ್ಶನ್ ಸೇರಿದಂತೆ ನಾಲ್ಕು ಆರೋಪಿಗಳಿಗೆ ನ್ಯಾಯಾಂಗ ಬಂಧನ ಆದೇಶಿಸಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳು ಕೂಡ ನ್ಯಾಯಾಂಗ ಬಂದಲ್ಲಿದ್ದಾರೆ. ನಟ ದರ್ಶನ್ ಗೆ ಕೋರ್ಟ್ ಜುಲೈ 4 ರವರೆಗೆ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿದೆ. ಇತ್ತ ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಜೈಲಿನಲ್ಲಿ ಯಾವ ಪರಿಸ್ಥಿಯಲ್ಲಿ ಇರಬಹುದು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

Darshan Imprisonment Latest News
Image Credit: The Hindu

ಜೈಲಿನಲ್ಲಿ ದರ್ಶನ್ ಮತ್ತು ಪವಿತ್ರ ಗೌಡಗೆ ಯಾವ ಆಹಾರ ಕೊಡಲಾಗುತ್ತದೆ…?
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್‌ ನ ಸಹಚರರಿಗೆ ಬಾಡೂಟ ನೀಡಲಾಗಿದೆ. ಜೈಲಿನ ಮೆನುವಿನಲ್ಲಿ ಇದ್ದಂತೆ ಮಟನ್, ಚಪಾತಿ, ಮುದ್ದೆ, ಅನ್ನ ನೀಡಲಾಗುತ್ತದೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ಇಷ್ಟು ದಿನ ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಪವಿತ್ರಾ ಗೌಡ ಇದೀಗ ಜೈಲು ಪಾಲಾಗಿದ್ದಾರೆ. ಸೆಲೆಬ್ರೆಟಿ ಜೀವನ ನಡೆಸುತ್ತಿದ್ದ ದರ್ಶನ್ ಕೂಡ ಜೈಲುವಾಸ ಅನುಭಸಿಬೇಕಾಗಿದೆ. ಪರಪ್ಪನ ಅಗ್ರಹಾರದ ಮೆನುವಿನಂತೆ ಜೈಲಿನಲ್ಲಿ ನಾನ್ ವೆಜ್ ಊಟ ನೀಡಲಾಗಿದೆ.

Join Nadunudi News WhatsApp Group

ಆರೋಪಿಗಳಾದ ದರ್ಶನ್ ಪವಿತ್ರಾ ಗೌಡ ಹಾಗೂ ಇತರ ಸಹಚರರಿಗೆ ಜೈಲಿನಲ್ಲಿ ನಾನ್ ವೆಜ್ ಊಟ ನೀಡಲಾಗಿತ್ತು. ಮೆನು ಪ್ರಕಾರ ಮಟನ್, ಮುದ್ದೆ, ಚಪಾತಿ, ಅನ್ನ ನೀಡಲಾಗುತ್ತದೆ. ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್ ಬಾಡೂಟ ಸೇವಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಜೈಲು ಸಿಬ್ಬಂದಿ ಊಟ ಬಡಿಸಿದ್ದರು. ಊಟ ಮುಗಿಸಿ ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಪವಿತ್ರಾ ಗೌಡ ಮೌನಕ್ಕೆ ಶರಣಾದರು. ತಮಗೆ ಎದುರಾದ ಪರಿಸ್ಥಿತಿ ನೋಡಿ ಕಣ್ಣೀರಿಟ್ಟರು ಎನ್ನಲಾಗಿದೆ.

Darshan And Pavitra Gowda
Image Credit: TV9telugu

Join Nadunudi News WhatsApp Group