Darshan Imprisonment: ಅಪರಾಧ ಸಾಭೀತಾದರೆ ದರ್ಶನ್ ಗೆ ಇಷ್ಟು ವರ್ಷ ಜೈಲು ಖಚಿತ, ಕಾನೂನು ನಿಯಮ

ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ...?

Darshan Imprisonment Details: ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ಇದೀಗ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಲಾಗಿದೆ. ದರ್ಶನ್ ಹಾಗೂ ಅವರ ಗೆಳತಿ ಪವಿತ್ರ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯವು ವಿಚಾರಣೆ ನಡೆಸಿ ದರ್ಶನ್ ಅಂಡ್ ಗ್ಯಾಂಗ್ ಅನ್ನು 6 ದಿನ ಕಸ್ಟಡಿಗೆ ನೀಡಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಸಾಕಷ್ಟು ಹೊಸ ಹೊಸ ಅಪ್ಡೇಟ್ ಕೂಡ ಹೊರಬಿದ್ದಿದೆ.

ಇನ್ನು ಕೊಲೆ ಆರೋಪ ಸಾಬೀತಾದರೆ ದರ್ಶನ್ ಜೈಲು ಪಾಲಾಗುವುದಂತೂ ಖಂಡಿತ. ರೇಣುಕಾಸ್ವಾಮಿ ಕೊಲೆಯ ನ್ಯಾಯಕ್ಕಾಗಿ ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ಟ್ ಸೆಲೆಬ್ರೆಟಿಗಳು ಕೂಡ ದ್ವನಿಯೆತ್ತುತ್ತಿದ್ದರೆ. ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ…? ಎನ್ನುವ ಚರ್ಚೆ ಜೋರಾಗಿದೆ. ಕೊಲೆ ಅಪರಾಧಕ್ಕೆ ನ್ಯಾಯಾಲಯ ಏನು ಶಿಕ್ಷೆ ನೀಡುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Darshan Imprisonment Details
Image Credit: Times Now News

ಪೊಲೀಸ್ ಕಸ್ಟಡಿಯಲ್ಲಿ ನಟ ದರ್ಶನ್
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ರೇಣುಕಾ ಸ್ವಾಮಿಯನ್ನು ಹತ್ಯೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ನಟ ದರ್ಶನ್ ಸೂಚನೆ ಮೇರೆಗೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಸಂಚಲನ ಮೂಡಿಸಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದರು. ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಕೊಲೆ ಶಿಕ್ಷಾರ್ಹ ಅಪರಾಧವಾಗಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ರ ಅಡಿಯಲ್ಲಿ ಕೊಲೆಯ ಶಿಕ್ಷೆಯನ್ನು ವಿವರಿಸಲಾಗಿದೆ. ಅಪರಾಧದ ಸಂದರ್ಭಗಳನ್ನು ಅವಲಂಬಿಸಿ ಕೊಲೆಗೆ ಶಿಕ್ಷೆಯು ಬದಲಾಗಬಹುದು.

ಅಪರಾಧ ಸಾಭೀತಾದರೆ ದರ್ಶನ್ ಗೆ ಇಷ್ಟು ವರ್ಷ ಜೈಲು ಖಚಿತ
IPC ಸೆಕ್ಷನ್ 304 ರ ಅಡಿಯಲ್ಲಿ ತಪ್ಪಿತಸ್ಥ ನರಹತ್ಯೆಗೆ ಶಿಕ್ಷೆಯು ಕೊಲೆಗೆ ಸಮನವಲ್ಲದ ಶಿಕ್ಷೆಯು ಇದು ಜೀವಾವಧಿಯ ಜೈಲುವಾಸದಿಂದ ನಿಗದಿತ ಅವಧಿಗೆ ಜೈಲು ಶಿಕ್ಷೆಯವರೆಗೆ ಇರುತ್ತದೆ. ಪ್ರಕರಣದ ಸಂದರ್ಭಗಳನ್ನು ಅವಲಂಬಿಸಿ ಇದು ಬದಲಾಗಬಹುದು. ಅಂತಹ ಪ್ರಕರಣಗಳಲ್ಲಿ ನಿಖರವಾದ ಶಿಕ್ಷೆಯನ್ನು ನಿರ್ಧರಿಸುವಾಗ ಕೃತ್ಯದ ಸ್ವರೂಪ, ಆರೋಪಿಯ ಉದ್ದೇಶ ಮತ್ತು ಯಾವುದೇ ದೋಷಪೂರಿತ ಸಂದರ್ಭಗಳಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ. ಯಾವುದೇ ಉದ್ದೇಶವಿಲ್ಲದೇ ಇದ್ದಲ್ಲಿ, ಆದರೆ ಯಾವುದೋ ಕೃತ್ಯದಿಂದ ಸಾವು ಸಂಭವಿಸಿರಬಹುದು ಎಂದು ತಿಳಿದಿದ್ದರೆ, ಆರೋಪಿಗಳ ವಿರುದ್ಧ u/s 304 IPC ರೀತ್ಯಾ ಕಾನೂನು ಕ್ರಮ ಜರುಗಿಸಬಹುದಾಗಿದೆ.

Join Nadunudi News WhatsApp Group

actor darshan arrested in connection with murder case
Image Credit: Mathrubhumi

ಈ ಪ್ರಕರಣದಲ್ಲಿ ಕೇವಲ ಹತ್ತು ವರ್ಷ ಶಿಕ್ಷೆಯಾಗಬಹುದು. ಆರೋಪಿಯು ಉದ್ದೇಶ ಮತ್ತು ತಿಳುವಳಿಕೆಯಿಂದ ಕೊಲೆ ಮಾಡಲು ಯೋಜಿಸಿದ್ದರೆ, ಜೀವಾವಧಿ ಶಿಕ್ಷೆ (302 ಐಪಿಸಿ) ಅದು ಕ್ರೂರವಾಗಿದ್ದರೆ (ಬಹು ಕೊಲೆ, ಶಿಶುಹತ್ಯೆ, ಅತ್ಯಾಚಾರ ಮತ್ತು ಕೊಲೆಯಂತಹ) ಅದಕ್ಕೆ ಮರಣದಂಡನೆ ವಿಧಿಸಬಹುದು. ಕೊಲೆ ಮತ್ತು ಕೊಲೆ ಯತ್ನವು ಗಂಭೀರವಾದ ಕ್ರಿಮಿನಲ್ ಅಪರಾಧಗಳಾಗಿದ್ದು, ಇದು ಮಾನವ ಜೀವ ಅಥವಾ ಗಮನಾರ್ಹ ಹಾನಿಯನ್ನು ಉಂಟುಮಾಡುವ ಉದ್ದೇಶವನ್ನು ಒಳಗೊಂಡಿರುತ್ತದೆ. ಪರಿಣಾಮವಾಗಿ, ಅಂತಹ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವುದನ್ನು ಖಾತರಿಪಡಿಸಲಾಗುವುದಿಲ್ಲ.

Darshan Imprisonment Update
Image Credit: New Indian Express

Join Nadunudi News WhatsApp Group