Dwarakanath Guruji: ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ, ಭವಿಷ್ಯ ನುಡಿದ ಗುರುಗಳು.

ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಅನ್ನುವುದರ ಬಗ್ಗೆ ಭವಿಷ್ಯವನ್ನ ಹೇಳಿದ್ದಾರೆ ದ್ವಾರಕಾನಾಥ್ ಗುರೂಜಿ.

Next CM In Karnataka: ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದೆ. ಪಕ್ಷಕಗಳ ನಾಯಕರ ಪ್ರಚಾರ ಹೆಚ್ಚಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಮೂರೂ ದಿನ ಮಾತ್ರ ಉಳಿದಿದೆ.

ಈ ನಡುವೆ ಪಕ್ಷಗಳ ಪ್ರಚಾರದಲ್ಲಿ ಪೈಪೋಟಿ ಹೆಚ್ಚಾಗಿ ಕಾಣುತ್ತಿದೆ. ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಜೋತಿಷಿಗಳು ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ.

Dwarkanath has predicted who will be the next Chief Minister
Image Credit: ndtv

ರಾಜ್ಯದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದಕ್ಕೆ ರಾಶಿ ಭವಿಷ್ಯ ನುಡಿದ ಗುರೂಜಿ
ಈ ಬಾರಿ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಭವಿಷ್ಯವನ್ನು ಜೋತಿಷಿಗಳು ನುಡಿಯುತ್ತಿದ್ದಾರೆ.

ಬರೆದಿಟ್ಟುಕೊಳ್ಳಿ ಮೇ ಹದಿನೆಂಟರಂದು ನಾನು ಪ್ರಮಾಣವಚನ ಸ್ವೀಕರಿಸುತ್ತೇನೆ ಎನ್ನುವ ಖಚಿತ ವಿಶ್ವಾಸದ ಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಕಡೆ ಅವರ ತಂದೆ ದೇವೇಗೌಡ ಅವರು ಈ ಬಾರಿ ನನ್ನ ಮಗನೆ ಮುಂದಿನ ಸಿಎಂ ಎಂದು ಹೇಳುತ್ತಿದ್ದಾರೆ. ಈ ನಡುವೆ ಖ್ಯಾತ ಜೋತಿಷಿ ಒಬ್ಬರು ಕುಮಾರಸ್ವಾಮಿ ಅವರ ರಾಶಿ ಫಲಗಳ ಬಗೆ ಹೇಳಿದ್ದಾರೆ.

Dwarkanath spoke of the future saying that the expectation of Kumaraswamy becoming the next Chief Minister is high
Image Credit: deccanherald

ಕುಮಾರಸ್ವಾಮಿ ಅವರ ರಾಶಿ ಭವಿಷ್ಯ ನುಡಿದ ಡಾ. ದ್ವಾರಾಕನಾಥ್ ಗುರೂಜಿ
ಖ್ಯಾತ ಜ್ಯೋಷಿಯಾದ ಡಾ. ದ್ವಾರಾಕನಾಥ್ ಗುರೂಜಿಯವರು ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, ಪ್ರಸಕ್ತ ಹೊತ್ತಿನಲ್ಲಿ ಅತ್ಯಂತ ಉತ್ತಮ ಜಾತಕ ಎನ್ನುವುದಿದ್ದರೆ ಅದು ಕುಮಾರಸ್ವಾಮಿಯವರದ್ದು. ಆದ್ರಾ ನಕ್ಷತ್ರ, ಮಿಥುನ ರಾಶಿ, ಈ ರಾಶಿಗೆ ಏಕಾದಶದಲ್ಲಿ ಗುರುವಿದ್ದಾನೆ, ಹಾಗಾಗಿ ಅವರ ಜಾತಕ ಬಹಳ ಉತ್ತಮವಾಗಿದೆ ಎಂದು ಗುರೂಜಿಗಳು ಹೇಳಿದ್ದಾರೆ.

Join Nadunudi News WhatsApp Group

Dwarkanath Guruji told who is the most likely politician to become the next Chief Minister
Image Credit: abplive

ಮಾಧ್ಯಮಗಳ ಜೊತೆಗೆ ಮಾತನಾಡಿದ ಗುರೂಜಿ, ಕುಮಾರಸ್ವಾಮಿ ಅವರ ರಾಶಿಫಲ ಕುಮಾರಸ್ವಾಮಿಯವರನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ. ಆದರೆ ರಾಹು ಉತ್ತಮ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಅವರು ತಾಳ್ಮೆಯಿಂದ ಇರಬೇಕು.

ಬೇಕಾಬಿಟ್ಟಿ ನಿರ್ಧಾರ ಅಥವಾ ಹೇಳಿಕೆಯನ್ನು ನೀಡಬಾರದು ಎನ್ನುವ ಸಲಹೆಯನ್ನು ಗುರೂಜಿ ನೀಡಿದ್ದಾರೆ. ಈ ಮೂಲಕ ಗುರೂಜಿ ಕುಮಾರಸ್ವಾಮಿ ಅವರೇ ಈ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ಸೂಚನೆ ನೀಡಿದ್ದಾರೆ.

Join Nadunudi News WhatsApp Group