Free Home: ಇಂತಹ ಜನರಿಗೆ ಸರ್ಕಾರದಿಂದ ಉಚಿತ ಮನೆ, 6 ನೇ ಗ್ಯಾರಂಟಿ ಘೋಷಣೆ ಮಾಡಿದ ಸಿ.ಎಂ ಸಿದ್ದರಾಮಯ್ಯ.

ಸರ್ಕಾರದಿಂದ ಆರನೇ ಗ್ಯಾರಂಟಿ ಘೋಷಣೆ, 2.32 ಲಕ್ಷ ಉಚಿತ ಮನೆ ನೀಡಲಿದ್ದಾರೆ ಸಿದ್ದರಾಮಯ್ಯ.

Karnataka Government Free Housing Scheme 2023: ಸದ್ಯ ರಾಜ್ಯ ಸರ್ಕಾರ ಜನರಿಗಾಗಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ ಎನ್ನಬಹುದು. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಘೋಷಣೆ ಹೊರಡಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದರ ಜೊತೆಗೆ ಕಾಂಗ್ರೆಸ್ ಸರ್ಕಾರ ವಿವಿಧ ಯೋಜನೆಗಳನ್ನು ಜನರಿಗಾಗಿ ಪರಿಚಯಿಸುತ್ತಿದೆ.

ಸದ್ಯ ರಾಜ್ಯ ಸರ್ಕಾರ ಜನರಿಗಾಗಿ ಮನೆ ನಿರ್ಮಾ ಮಾಡಲು ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ರಾಜ್ಯದ ಜನತೆಗೆ ಉಚಿತ ಮನೆ ನೀಡುವ ಬಗ್ಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಜಮೀರ್ ಅಹಮದ್ ಖಾನ್ (Zameer Ahmed Khan) ಮಾಹಿತಿ ನೀಡಿದ್ದಾರೆ.

CM Siddaramaiah Latest news
Image Credit: India Today

ಸರ್ಕಾರದಿಂದ ಆರನೇ ಗ್ಯಾರಂಟಿ ಘೋಷಣೆ
ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು ರೂಪಿಸಿದ್ದ ಯೋಜನೆ ಫಲಾನುಭವಿಗಳ ವಂತಿಗೆ ಪಾವತಿ ಆಗದೆ ನೆನೆ ಗುದಿಗೆ ಬಿದ್ದಿದ್ದು, ಇದೀಗ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ. ಐದು ಖಾತ್ರಿ ಜತೆಗೆ ಆರನೇ ಖಾತ್ರಿಯಾಗಿ ಅಪೂರ್ಣ 2.32 ಲಕ್ಷ ಮನೆಗಳನ್ನು ಮುಂದಿನ ವರ್ಷಾಂತ್ಯಕ್ಕೆ ಪೂರ್ಣಗೊಳಿಸುವ ಗುರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆ.

2.32 ಲಕ್ಷ ಉಚಿತ ಮನೆ ನೀಡಲಿದ್ದಾರೆ ಸಿದ್ದರಾಮಯ್ಯ
ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2.42 ಲಕ್ಷ ಮನೆಗಳನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದು, 8 ಸಾವಿರ ಕೋಟಿ ರೂ. ಹಂತ ಹಂತವಾಗಿ ನೀಡುವುದಾಗಿ ಭರವಸೆ ನೀಡಿದ್ದು, ಮುಂದಿನ ವಾರ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ.

New Housing scheme
Image Credit: Thenewsglory

ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿ ಕೊಡುವ ಮನೆಗೆ ಘಟಕ ವೆಚ್ಚ 7 ಲಕ್ಷ ರೂ. ಆಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ 3 ಲಕ್ಷ ರೂ. ವರೆಗೆ ಸಿಗಲಿದ್ದು ಉಳಿದ ನಾಲ್ಕು ಲಕ್ಷ ರೂ. ಫಲಾನುಭವಿಗಳ ಕಟ್ಟಬೇಕಾಗುತ್ತದೆ. ಸದ್ಯ ಫಲಾನುಭವಿಗಳ ವಂತಿಗೆ ಸರ್ಕಾರವೇ ಭರಿಸದಂತಾಗಲಿದೆ ಎಂದು ಜಮೀರ್ ಅಹಮದ್ ಖಾನ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group