Gold Price: ಬೆಂಗಳೂರಿನಲ್ಲಿ ಮತ್ತೆ ಏರಿಕೆಯ ಹಾದಿಯನ್ನ ಹಿಡಿದ ಚಿನ್ನದ ಬೆಲೆ, ಮತ್ತೆ ಐತಿಹಾಸಿಕ ಏರಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ.

Gold Price: ಬೆಂಗಳೂರಿನಲ್ಲಿ ಮತ್ತೆ ಏರಿಕೆಯ ಹಾದಿಯನ್ನ ಹಿಡಿದ ಚಿನ್ನದ ಬೆಲೆ. ಚಿನ್ನದ ಬೆಲೆ (Gold Price) ಇಂದು ಇನ್ನಷ್ಟು ಏರಿಕೆ ಆಗಿದ್ದು ಜನರು ಚಿನ್ನವನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಚಿನ್ನದ ಬೆಲೆ ಕಡೆಯಾಯಿತು ಎಂದು ಖುಷಿಯನ್ನ ವ್ಯಕ್ತಪಡಿಸಿದ್ದ ಜನರು ದಿಡೀರ್ ಆಗಿ ಚಿನ್ನದ ಬೆಲೆ ಏರಿಕೆಯ ಹಾದಿಯನ್ನ ಹಿಡಿದ ಕಾರಣ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಮೂರೂ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುವುದರ ಮೂಲಕ ಜನರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ಇಂದು ಬೆಂಗಳೂರಿನಲ್ಲಿ ಇಂದು ಗ್ರಾಂ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ತಿಂಗಳ ಆರಂಭದಲ್ಲಿ 4580 ರೂಪಾಯಿ ಆಗುವುದರ ಮೂಲಕ ಭರ್ಜರಿ ಇಳಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಇಂದು 4780 ರೂಪಾಯಿ ಆಗಿದೆ. ಹೌದು ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ (22 Carat) ಒಂದು ಗ್ರಾಂ ಚಿನ್ನದ ಬೆಲೆ 4780 ರೂಪಾಯಿ ಆಗಿದೆ ಮತ್ತು ಒಂದೇ ವಾರದಲ್ಲಿ ಚಿನ್ನದ ಬೆಲೆ 200 ರೂಪಾಯಿ ಏರಿಕೆ ಕಂಡಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 47800 ರೂಪಾಯಿ ಆಗಿದೆ ಮತ್ತು ಒಂದು ವಾರದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 2000 ರೂಪಾಯಿ ಏರಿಕೆ ಕಂಡುಬಂದಿರುವುದನ್ನ ನಾವು ಗಮನಿಸಬಹುದಾಗಿದೆ. ಅದೇ ರೀತಿಯಲ್ಲಿ 22 ಕ್ಯಾರಟ್ ನ ಒಂದು ಪವನ್ ಚಿನ್ನದ ಬೆಲೆ 38240 ರೂಪಾಯಿ ಆಗಿದೆ.

gold price
Image Credit: www.thehansindia.com

ಇನ್ನು 22 ಕ್ಯಾರಟ್ ಚಿನ್ನದ ಜೊತೆಗೆ 24 ಕ್ಯಾರಟ್ (24 Carat ) ಚಿನ್ನದ ಬೆಲೆಯಲ್ಲಿ ಕೂಡ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಹೌದು ಒಂದು ವಾರದಲ್ಲಿ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 215 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು. 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಗೆ ಇಂದು 5215 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 52150 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 2150 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು ಮತ್ತು ಇಂದು 24 ಕ್ಯಾರಟ್ ಒಂದು ಪವನ್ ಚಿನ್ನದ ಬೆಲೆ 41720 ರೂಪಾಯಿ ಆಗಿದೆ.

ಚಿನ್ನದ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಗಣನೀಯ ರೀತಿಯಲ್ಲಿ ಏರಿಕೆ ಕಂಡುಬಂದಿದ್ದು ಇದು ಚಿನ್ನ ಖರೀದಿ ಮಾಡುವವರ ಬೇಸರಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಕಂಡುಬಂದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಪ್ರಗತಿ ಕೂಡ ಚಿನ್ನದ ಬೆಲೆಯಲ್ಲಿನ ಏರಿಕೆಗೆ ಪ್ರಮುಖವಾದ ಕಾರಣ ಆಗಿದೆ.

Join Nadunudi News WhatsApp Group

Join Nadunudi News WhatsApp Group