Gold Rate In Bangalore: ಬೆಲೆ ಕುಸಿತದ ನಡುವೆ ಸ್ಥಿರತೆಯನ್ನ ಕಾಯ್ದುಕೊಂಡ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದೆ ಸರಿಯಾದ ಸಮಯ.

ಕಳೆದ ಎರಡು 10 ದಿನಗಳಿಂದ ದೇಶದಲ್ಲಿ ಚಿನ್ನದ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವುದು ತಿಳಿದುಬಂದಿದೆ. ದೇಶದಲ್ಲಿ Gold Price ಇಳಿಕೆಯ ಹಾದಿಯನ್ನ ಹಿಡಿದಿದ್ದು ದೇಶದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಇನ್ನೇನು ಮದುವೆಯ ಸೀಸನ್ ಗಳು ಆರಂಭ ಆಗಲಿದ್ದು ಈ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿರುವುದು ಜನರ ಸಂತಸಕ್ಕೆ ಕಾರಣವಾಗಿದೆ. ಚಿನ್ನದ ಬೆಲೆಯ ಏರಿಕೆಯ ಕಾರಣ ಬೇಸರವನ್ನ ವ್ಯಕ್ತಪಡಿಸಿದ್ದ ಜನರು ಈಗ ಚಿನ್ನದ ಬೆಲೆ ಇಳಿಕೆಗೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ನಿನ್ನೆ ದೇಶದಲ್ಲಿ ಇಳಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಇಂದು ಸ್ಥಿರತೆಯನ್ನ ಕಾಯ್ದುಕೊಂಡಿದ್ದು ದೇಶದಲ್ಲಿ ಇಂದು Gold Rate ಯಾವುದೇ ರೀತಿಯಲ್ಲಿ ಏರಿಕೆ ಅಥವಾ ಇಳಿಕೆ ಆಗಿಲ್ಲ.

ಇಂದು ದೇಶದಲ್ಲಿ ಚಿನ್ನದ ಬೆಲೆ ಸ್ಥಿರತೆಯನ್ನ ಕಾಯ್ದುಕೊಂಡಿದ್ದು ಯಾವುದೇ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಹಾಗಾದರೆ ಇಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. Gold Rate In Bangalore 4584 Rupees. ಹೌದು ಬೆಂಗಳೂರಿನಲ್ಲಿ ಇಂದು 22 Carat Gold Price 4584 ರೂಪಾಯಿ ಆಗಿದೆ. ನಿನ್ನೆ ಮತ್ತು ಇಂದು ಚಿನ್ನದ ಬೆಲೆ ಯಾವುದೇ ಇಳಿಕೆ ಮತ್ತು ಏರಿಕೆ ಆಗದ ಕಾರಣ ನಿನ್ನೆಯ ಹಾಗೆ ಇಂದು ಕೂಡ ಚಿನ್ನದ ಬೆಲೆ 4584 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 45840 ರೂಪಾಯಿ ಆಗಿದ್ದು ಒಂದು ಪವನ್ ಚಿನ್ನದ ಬೆಲೆ 36672 ರೂಪಾಯಿ ಆಗಿದೆ.

Gold rate in bangalore
Image Credit: www.moneycontrol.com

ಆಭರಣವನ್ನ ಖರೀದಿ ಮಾಡುವವರಿಗೆ ದಸರಾ ಹಬ್ಬ ಅನ್ನುವುದು ಸಿಹಿ ಸುದ್ದಿಯನ್ನ ನೀಡಿದ್ದು ಇದು ಚಿನ್ನವನ್ನ ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಎಂದು ಚಿನ್ನದ ತಜ್ಞರು ಹೇಳುತ್ತಿದ್ದಾರೆ. ಅದೇ ರೀತಿಯಲ್ಲಿ 24 Carat Gold Price ನಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5001 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆ 50010 ರೂಪಾಯಿ ಆಗಿದೆ ಮತ್ತು 24 ಕ್ಯಾರಟ್ ನ ಒಂದು ಪವನ್ ಚಿನ್ನದ ಬೆಲೆ 40008 ರೂಪಾಯಿ ಆಗಿದೆ.

ದೇಶದ ಷೇರು ಮಾರುಕಟ್ಟೆಯಲ್ಲಿ ಕುಸಿತವಾದ ಕಾರಣ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತವನ್ನ ಕಂಡಿರುವ ಕಾರಣ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯ ಹಾದಿಯನ್ನ ಹಿಡಿದಿದ್ದು ಇದು ಚಿನ್ನವನ್ನ ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಆಗಿದೆ. ದೇಶದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನ ಕಾಣುತ್ತಿದ್ದು ಇದು ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದ್ದು ಮಗಳ ಮದುವೆಗೆ ಚಿನ್ನವನ್ನ ಖರೀದಿ ಮಾಡಬೇಕು ಅಂದುಕೊಂಡವರು ಚಿನ್ನವನ್ನ ಈ ಸಮಯದಲ್ಲಿ ಖರೀದಿ ಮಾಡಿಟ್ಟುಕೊಳ್ಳುವುದು ಉತ್ತಮವಾಗಿದೆ.

Join Nadunudi News WhatsApp Group

Join Nadunudi News WhatsApp Group