Gold Rate In Bangalore: ಎರಡು ದಿನದಲ್ಲಿ 1550 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ದೇಶದ ಮತ್ತೆ ಕುಸಿತವಾದ ಚಿನ್ನದ ವಹಿವಾಟು.

ತಿಂಗಳ ಆರಂಭದಲ್ಲಿ ಭರ್ಜರಿ ಇಳಿಕೆ ಆಗುವುದರ ಮೂಲಕ ಜನರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ್ದ ಚಿನ್ನದ ಬೆಲೆ ಈಗ ಜನರಿಗೆ ದೊಡ್ಡ ಆಘಾತವನ್ನ ನೀಡುತ್ತಿದೆ. ಹೌದು ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಭರ್ಜರಿಯಾಗಿ ಏರಿಕೆಯನ್ನ ಕಂಡಿದ್ದು ಚಿನ್ನವನ್ನ ಖರೀದಿ ಮಾಡುವ ಜನರಿಗೆ ಆಘಾತವನ್ನ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭರ್ಜರಿಯಾಗಿ ಏರಿಕೆಯಾಗುತ್ತಿರುವ ಕಾರಣ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ನವರಾತ್ರಿಯ ಆರಂಭದಲ್ಲಿ ಇಳಿಕೆಯನ್ನ ಕಂಡಿದ್ದ Gold Rate ಈಗ ಏರಿಕೆಯ ಹಾದಿಯನ್ನ ಹಿಡಿದಿದ್ದು ದೇಶದಲ್ಲಿ ಚಿನ್ನದ ವಹಿವಾಟು ಕೂಡ ಕಡಿಮೆ ಆಗಿದೆ.

ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟು ಮತ್ತು ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. Gold Rate In Bangalore 4740 Rupees . ಹೌದು ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ 4740 ರೂಪಾಯಿ ಆಗಿದೆ. ತಿಂಗಳ ಆರಂಭದಲ್ಲಿ 4585 ರೂಪಾಯಿ ಆಗಿದ್ದ 22 Carat ನ ಒಂದು ಗ್ರಾಂ ಚಿನ್ನದ ಬೆಲೆ ಈಗ 4740 ರೂಪಾಯಿ ಆಗುವುದರ ಮೂಲಕ ಭರ್ಜರಿ ಏರಿಕೆಯನ್ನ ಕಂಡಿದೆ. 22 Carat Gold Price 4740 Rupees . ತಿಂಗಳ ಆರಂಭಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ ಸುಮಾರು 155 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದಾಗಿದೆ.

Navaratri gold rate
Image Credit: www.livemint.com

ಅದೇ ರೀತಿಯಲ್ಲಿ ಒಂದೇ ವಾರದಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1550 ರೂಪಾಯಿ ಏರಿಕೆ ಆಗಿದ್ದು ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 47400 ರೂಪಾಯಿ ಆಗಿದೆ. 22 ಕ್ಯಾರಟ್ ಚಿನ್ನದ ಜೊತೆಗೆ 24 Carat Gold Price ನಲ್ಲಿ ಕೂಡ ಭರ್ಜರಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು. ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5171 ರೂಪಾಯಿ ಆಗಿದೆ. ತಿಂಗಳ ಆರಂಭದ ದಿನಕ್ಕೆ ಹೋಲಿಕೆ ಮಾಡುವುದಾದರೆ ದೇಶದಲ್ಲಿ 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ ಸುಮಾರು 171 ರೂಪಾಯಿ ಆಗಿದೆ. 5000 ರುಪಾಯಿ ಇದ್ದ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ ಈಗ 5171 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 51170 ರೂಪಾಯಿ ಆಗಿದೆ.

ಎರಡು ದಿನಗಳಲ್ಲಿ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1710 ರೂಪಾಯಿ ಏರಿಕೆ ಆಗಿದ್ದು ಗಟ್ಟಿ ಇನ್ನ ಖರೀದಿ ಮಾಡುವವರಿಗೆ ಇದು ಬೇಸರವನ್ನ ತರಿಸಿದೆ. ದೇಶದ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆ ಕೂಡ ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಲು ಪ್ರಮುಖವಾದ ಕಾರಣ ಆಗಿದೆ. ತಜ್ಞರ ಅಭಿಪ್ರಾಯದ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಮತ್ತು ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಹೀಗೆ ಏರಿಕೆಯಾದರೆ ಮತ್ತೆ ದಾಖಲೆಯ ಏರಿಕೆಯನ್ನ ಕಾಣುವುದರಲ್ಲಿ ಎರಡು ಮಾತಿಲ್ಲ.

Join Nadunudi News WhatsApp Group

Join Nadunudi News WhatsApp Group