Gold Rate Today: ದೇಶದಲ್ಲಿ ಭರ್ಜರಿ ಏರಿಕೆಯ ನಡುವೆ ಚಿನ್ನದ ಬೆಲೆ ಸ್ಥಿರತೆಯನ್ನ ಕಾಯ್ದುಕೊಂಡ ಚಿನ್ನದ ಬೆಲೆ.

Gold Rate Today: ದೇಶದಲ್ಲಿ ಭರ್ಜರಿ ಏರಿಕೆಯ ನಡುವೆ ಚಿನ್ನದ ಬೆಲೆ ಸ್ಥಿರತೆಯನ್ನ ಕಾಯ್ದುಕೊಂಡಿದೆ. ಕಳೆದನಾಲ್ಕು ದಿನಗಳಿಂದ ಬಾರಿ ಏರಿಕೆಯತ್ತ ಮುಖವನ್ನ ಮಾಡಿದ್ದ ಚಿನ್ನದ ಬೆಲೆ (Gold Rate) ಈಗ ಸ್ಥಿರತೆಯನ್ನ ಕಾಯ್ದುಕೊಂಡಿದ್ದು ಚಿನ್ನವನ್ನ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ. ಇಂದು ಬೆಂಗಳೂರಿನಲ್ಲಿ Gold Price ಎಷ್ಟಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಭರ್ಜರಿಯಲ್ಲಿ ಇಳಿಕೆಯನ್ನ ಕಾಣುವುದರ ಮೂಲಕ ಚಿನ್ನದ ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ್ದ ಚಿನ್ನದ ಬೆಲೆ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಏರಿಕೆಯನ್ನ ಕಾಣುತ್ತಿದ್ದು ಇದು ಚಿನ್ನ ಖರೀದಿ ಮಾಡುವವರ ಆಘಾತಕ್ಕೆ ಕೂಡ ಕಾರಾಣವಾಗಿದೆ. ಸದ್ಯ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಸ್ಥಿರತೆಯನ್ನ ಕಾಯ್ದುಕೊಂಡಿದ್ದು ಇಂದು ಬೆಂಗಳೂರಿನಲ್ಲಿ 22 Carat ನ ಒಂದು ಗ್ರಾಂ ಚಿನ್ನದ ಬೆಲೆ 4790 ರೂಪಾಯಿ ಆಗಿದೆ.

The price of gold rose sharply in the country amid a continuous decline
Image Credit: economictimes.indiatimes.com

ತಿಂಗಳ ಆರಂಭದಲ್ಲಿ ಸತತವಾಗಿ ಇಳಿಕೆಯನ್ನ ಕಾಣುವುದರ ಮೂಲಕ 4583 ರೂಪಾಯಿ ಆಗಿದ್ದ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ ಕಳೆದ ನಾಲ್ಕು ದಿನಗಳಿಂದ ಭರ್ಜರಿಯಾಗಿ ಏರಿಕೆಯನ್ನ ಕಾಣುವುದರ ಮೂಲಕ 4790 ರೂಪಾಯಿಗೆ ಬಂದು ತಲುಪಿದೆ ಮತ್ತು ನಾಲ್ಕು ದಿನಗಳಲ್ಲಿ ನಾವು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 207 ರೂಪಾಯಿ ಏರಿಕೆ ಆಗಿರುವುದನ್ನ ಗಮನಿಸಬಹುದು. ಅದೇ ರೀತಿಯಲ್ಲಿ ದೇಶದಲ್ಲಿ 24 Carat ಚಿನ್ನದ ಬೆಲೆಯಲ್ಲಿ ಕೂಡ ಸತತವಾಗಿ ಏರಿಕೆಯಾಗಿ ಕಳೆದ ಎರಡು ದಿನಗಳಿಂದ ಸ್ಥಿರತೆಯನ್ನ ಕಾಯ್ದುಕೊಂಡಿರುವುದನ್ನ ಗಮನಿಸಬಹುದು.

ಅಕ್ಟೋಬರ್ ತಿಂಗಳ ಆರಂಭದಲ್ಲಿ 5000 ರೂಪಾಯಿ ಆಗಿದ್ದ 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ ನಂತರ ಸತತ ಏರಿಕೆಯ ಕಾರಣ 5225 ರೂಪಾಯಿಗೆ ಬಂದು ತಲುಪಿದೆ. ನಾಲ್ಕು ದಿನಗಳಲ್ಲಿ 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಸುಮಾರು 225 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು. ಅದೇ ರೀತಿಯಲ್ಲಿ ದೇಶದಲ್ಲಿ ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 47900 ರೂಪಾಯಿ ಆಗಿದೆ ಮತ್ತು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 52250 ರೂಪಾಯಿ ಆಗಿದೆ.

ಸತತ ಇಳಿಕೆಯಿಂದ ಸಂತಸವನ್ನ ವ್ಯಕ್ತಪಡಿಸಿದ್ದ ಜನರು ಈಗ ಸತತ ಏರಿಕೆಯ ಕಾರಣ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾದ ಕಾರಣ ಮತ್ತು ದೇಶದ ಷೇರು ಮಾರುಕಟ್ಟೆಯಲ್ಲಿ ಬದಲಾವಣೆ ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗಲು ಪ್ರಮುಖವಾದ ಕಾರಣ ಆಗಿದೆ. ತಜ್ಞರ ಅಭಿಪ್ರಾಯಗಳ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group