Jio Bharat Features: 999 ರೂ ಜಿಯೋ ಭಾರತ್ ಮೊಬೈಲ್ ಎಲ್ಲಿ ಸಿಗುತ್ತದೆ, ಈ ಮೊಬೈಲ್ ನಲ್ಲಿ ಏನೇನಿದೆ.

999 ರೂ ನ ಜಿಯೋ ಭಾರತ್ ಮೊಬೈಲ್ ನ ವಿಶೇಷತೆ ಏನು ಮತ್ತು ಈ ಮೊಬೈಲ್ ಎಲ್ಲಿ ಸಿಗುತ್ತದೆ ತಿಳಿದುಕೊಳ್ಳಿ.

Jio Bharat Features: ಇದೀಗ ಜಿಯೋ (Jio) ತನ್ನ ಜಿಯೋ ಭಾರತ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲಿದ್ದರು ಜಿಯೋ ಫೋನ್ ಅನ್ನು ಕೂಡ ಬಳಸುತ್ತಾರೆ.

ಇನ್ನು ಕೆಲವರು ಸ್ಮಾರ್ಟ್ ಫೋನ್ ಗಳ ಜೊತೆಗೆ ಒಂದು ಕೀ ಪ್ಯಾಡ್ ಫೋನ್ ಗಳನ್ನೂ ಬಳಸುತ್ತಾರೆ. ಹೀಗಾಗಿ ಜಿಯೋ ಫೋನ್ ನ ಮೇಲಿನ ಬೇಡಿಕೆ ಕೂಡ ಹೆಚ್ಚಿದೆ. ಈ ಜಿಯೋ ಭಾರತ್ ಫೋನ್ ಅನ್ನು ನೀವು ಕೇವಲ 999 ರೂ. ಗಳಲ್ಲಿ ಖರೀದಿಸಬಹುದಾಗಿದೆ.

Know what is special about Jio Bharat mobile of Rs 999 and where to get this mobile.
Image Credit: firstpost

ಜಿಯೋ ಭಾರತ್ 4 ಜಿ ಫೋನ್
ಜಿಯೋ ಭಾರತ್ 4 ಜಿ ಫೋನ್ ಜುಲೈ 7 ರಿಂದ ಮೊದಲ 10 ಲಕ್ಷ ಬೀಟಾ ಪ್ರಯೋಗ ಪ್ರಾರಂಭಗೊಂಡಿದೆ. ಕಂಪನಿ ಈ ಫೋನ್ ಗಾಗಿ 123 ರೂಪಾಯಿಗಳ ಯೋಜನೆಯನ್ನು ಸಹ ಪರಿಚಯಿಸಿದೆ. ಇದು 14 ಜಿಬಿ ಡೇಟಾವನ್ನು ಹೊಂದಿದೆ ಹಾಗು ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಂದರೆ ಪ್ರತಿ ದಿನ 0.5 GB ಡೇಟಾ ಬಳಕೆ ಮಾಡಬಹುದು.

ಇದಲ್ಲದೆ ಅನಿಯಮಿತ ಕರೆಗಳ ಸೌಲಭ್ಯವು ಈ ಯೋಜನೆಯಲ್ಲಿ ಲಭ್ಯವಾಗಲಿದೆ. ಬಳಕೆದಾರರು ಫೋನ್ ಮೂಲಕ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಮತ್ತು Jio ಸಿನಿಮಾ ಮತ್ತು Jio Saavan ನಂತಹ ಮನೋರಂಜನಾ ಅಪ್ಲಿಕೇಶನ್ ಗಳನ್ನೂ ಸಹ ಬಳಸಬಹುದು.

What services can people get in Jio Bharat Mobile?
Image Credit: businesstoday

ಜಿಯೋ ಭಾರತ್ 4 ಜಿ ಫೋನ್ ನ ವಿಶೇಷತೆ
ಜಿಯೋ ಭಾರತ್ ಫೋನ್ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದೆ ಮತ್ತು 1 .77 ಇಂಚಿನ QVGA TFT ಪರದೆಯನ್ನು ಹೊಂದಿದೆ. ಈ ಫೋನ್ 1000 mAh ತಗೆಯಬಹುದಾದ ಬ್ಯಾಟರಿಯೊಂದಿಗೆ ಬರುತ್ತದೆ. ಈ ಸಾಧನದಲ್ಲಿ ಜಿಯೋ ಸಿಮ್ ಅನ್ನು ಮಾತ್ರ ಬಳಸಬಹುದಾಗಿದೆ. ಜಿಯೋ ಭಾರತ್ ಫೋನ್ ನ ಮಾಸಿಕ ಮತ್ತು ವಾರ್ಷಿಕ ಯೋಜನೆಗಳು ಇತರ ಆಪರೇಟರ್ ಗಳಿಗಿಂತ 25 % ರಿಂದ 30 % ಅಗ್ಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group

ಇತರೆ ಆಪರೇಟರ್ ಗಳು ಅನಿಯಮಿತ ಕರೆಗಳನ್ನು ಮತ್ತು 179 ರೂಪಾಯಿಗಳಿಗೆ ಕೇವಲ 2 GB ಡೇಟಾವನ್ನು ನೀಡುತ್ತಿದ್ದಾರೆ. ಆದರೆ ಜಿಯೋ ಭಾರತ್ ಫೋನ್ ನ 123 ರೂಪಾಯಿಯ ಯೋಜನೆಯು ಅನಿಯಮಿತ ಕರೆಗಳೊಂದಿಗೆ 14 gb ಡೇಟಾವನ್ನು ನೀಡುತ್ತದೆ. ಇದು ಮಾತ್ರವಲ್ಲದೆ ಜಿಯೋ ಸಾವನ್​ ಹಾಗೂ ಜಿಯೋ ಸಿನಿಮಾ ಆಯಪ್​ ಕೂಡ ಉಚಿತವಾಗಿ ಲಭ್ಯವಿದ್ದು ಗ್ರಾಹಕರು ಉಚಿತವಾಗಿ ಈ ಮೊಬೈಲ್​ನಲ್ಲಿ ಸಿನಿಮಾ ಕೂಡ ನೋಡಬಹುದಾಗಿದೆ.

Join Nadunudi News WhatsApp Group