Income Tax: ಪ್ರತಿ ತಿಂಗಳು ಸಂಬಳ ಪಡೆಯುವವರು ಮಾರ್ಚ್ 31 ರೊಳಗೆ ಈ ದಾಖಲೆ ನೀಡದಿದ್ದರೆ ಸಂಬಳದಲ್ಲಿ ಕಡಿತ, ಕೇಂದ್ರದ ಆದೇಶ.

ಪ್ರತಿ ತಿಂಗಳು ಸಂಬಳ ಪಡೆಯುವವರು 31 ರೊಳಗೆ ಈ ಕೆಲಸ ಮುಗಿಸಿಕೊಳ್ಳಿ

Income Tax Latest Update: ದೇಶದಲ್ಲಿ ಮಾರ್ಚ್ 31 2024 ರೊಳಗೆ ಎಲ್ಲ ತೆರಿಗೆ ಪಾವತಿಯ ಪ್ರಕ್ರಿಯೆ ಪೂರ್ಣಗೊಂಡಿರಬೇಕು ಎಂದು ಆದಾಯ ಇಲಾಖೆಯು ಮಾಹಿತಿ ನೀಡಿದೆ. ಇನ್ನು ಉದ್ಯೋಗಿಗಳು ತೆರಿಗೆ ಉಳಿಸುವ ಪ್ರಯತ್ನದಲ್ಲಿದ್ದಾರೆ ಎನ್ನಬಹುದು. ತೆರಿಗೆ ಉಳಿಸಲು ನೀವು ಸೂಕ್ತ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅಗತ್ಯವಾಗುತ್ತದೆ. ನೀವು ಉದ್ಯೋಗಿಯಾಗಿದ್ದು , ತೆರಿಗೆ ಉಳಿಸುವ ಪ್ರಯತ್ನ ಮಾಡಿದರೆ ಮಾರ್ಚ್ ತಿಂಗಳಿನಲ್ಲಿ ನಿಮ್ಮ ಸಂಬಳ ಕಡಿತವಾಗಬಹುದು.

ಸರಕಾರಿ ಯೋಜನೆಗಳ ಜೊತೆಗೆ Mutual fund ನಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆಯನ್ನು ಉಳಿಸಬಹುದು. ತೆರಿಗೆ ಉಳಿಸಲು ಬಯಸುವವರು ಪ್ರತಿ ತಿಂಗಳು ಸಂಬಳ ಪಡೆಯುವವರು ಮಾರ್ಚ್ 31 ರೊಳಗೆ ಈ ಹೂಡಿಕೆಯಲ್ಲಿನ ದಾಖಲೆಯನ್ನು ನೀಡಿದರೆ ನೀವು ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಈ ಎಲ್ಲ ಹೂಡಿಕೆಯ ದಾಖಲೆ ನೀಡದೆ ನೀವು ತೆರಿಗೆ ಉಳಿತಾಯ ಮಾಡಿದರೆ ನಿಮ್ಮ ಸಂಬಳದಲ್ಲಿ ಕಡಿತವಾಗುವುದಂತೂ ಖಂಡಿತ.

National Savings Certificate
Image Credit: India TV News

ಪ್ರತಿ ತಿಂಗಳು ಸಂಬಳ ಪಡೆಯುವವರು ಮಾರ್ಚ್ 31 ರೊಳಗೆ ಈ ದಾಖಲೆ ನೀಡದಿದ್ದರೆ ಸಂಬಳದಲ್ಲಿ ಕಡಿತ
•National Savings Certificate
ನೀವು NSC ಮೂಲಕ ಹಣವನ್ನು ಉಳಿಸಬಹುದು. ಇದು ಸ್ಥಿರ ಆದಾಯದ ಹೂಡಿಕೆಯ ಆಯ್ಕೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡುವ ಮೂಲಕ, ನೀವು 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. 5 ವರ್ಷಗಳ ಅವಧಿಗೆ ಲಾಕ್ ಇದೆ. ಇದರ ಹೊರತಾಗಿ, ಗ್ಯಾರಂಟಿ ರಿಟರ್ನ್ಸ್ ಲಭ್ಯವಿದೆ.

Public Provident Fund
Image Credit: Smallcase

•Public Provident Fund
ನೀವು PPF ನಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ಉಳಿಸಬಹುದು. ಇದರಲ್ಲಿ ಹಣ ಉಳಿತಾಯದ ಜತೆಗೆ ತೆರಿಗೆಯೂ ಉಳಿತಾಯವಾಗುತ್ತದೆ. ಇದು ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ವಿಧಾನವಾಗಿದೆ. ಇದರ ಮೂಲಕ ನೀವು ತೆರಿಗೆಯನ್ನು ಉಳಿಸಬಹುದು. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು 80C ಅಡಿಯಲ್ಲಿ ವಿನಾಯಿತಿಯ ಪ್ರಯೋಜನವನ್ನು ಒದಗಿಸುತ್ತದೆ. ಇದರ ಲಾಕ್ ಇನ್ ಅವಧಿ 15 ವರ್ಷಗಳು.

Senior Citizen Savings Scheme
Image Credit: Retirement

•Senior Citizen Savings Scheme
ನೀವು ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೂಲಕ ತೆರಿಗೆಯನ್ನು ಉಳಿಸಬಹುದು. ಇದರಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಈ ಯೋಜನೆಯನ್ನು ಮಾಡಲಾಗಿದೆ. ಇದರಲ್ಲೂ ಒಬ್ಬರು ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯ ಲಾಕ್-ಇನ್ ಅವಧಿಯು 5 ವರ್ಷಗಳು ಮತ್ತು ನೀವು ಅದನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು. ಈ ಯೋಜನೆಯಲ್ಲಿ, 80C ಅಡಿಯಲ್ಲಿ 1.5 ಲಕ್ಷದ ವರೆಗೆ ವಿನಾಯಿತಿಯ ಪ್ರಯೋಜನವು ಲಭ್ಯವಿದೆ.

Join Nadunudi News WhatsApp Group

Sukanya Samriddhi Yojana Profit
Image Credit: Topbihar

•Sukanya Samriddhi Yojana
ಸುಕನ್ಯಾ ಸಮೃದ್ಧಿ ಯೋಜನೆಯು ತೆರಿಗೆ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ವಿಶೇಷವಾಗಿ ಹೆಣ್ಣುಮಕ್ಕಳಿಗೆ ರೂಪಿಸಲಾಗಿದೆ. ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಮೋದಿ ಸರ್ಕಾರ ಈ ಯೋಜನೆ ಆರಂಭಿಸಿತ್ತು. ನಿಮ್ಮ ಮಗಳಿಗೆ 21 ವರ್ಷ ತುಂಬಿದಾಗ ನೀವು ಹಣವನ್ನು ಹಿಂಪಡೆಯಬಹುದು. ಇದರಲ್ಲಿ 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುತ್ತದೆ. ಈ ಯೋಜನೆಯಡಿ ಪಡೆದ ಬಡ್ಡಿಯು ತೆರಿಗೆ ಮುಕ್ತವಾಗಿದೆ.

Equity Linked saving Scheme
Image Credit: Smallcase

•Equity Linked saving Scheme
ಆದಾಯ ತೆರಿಗೆ ಕಾಯಿದೆ 80ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡುವ ಏಕೈಕ ಮ್ಯೂಚುವಲ್ ಫಂಡ್ ಇದಾಗಿದೆ. ಇದಲ್ಲದೇ 1 ಲಕ್ಷದವರೆಗಿನ ರಿಟರ್ನ್ಸ್‌ಗೆ ತೆರಿಗೆ ಇರುವುದಿಲ್ಲ. ಇದರ ಕಡಿಮೆ ಲಾಕ್-ಇನ್ ಅವಧಿಯು 3 ವರ್ಷಗಳು.

Join Nadunudi News WhatsApp Group