Jio Phone: Jio ಬಿಡುಗಡೆ ಮಾಡಿದ 999 ರೂಪಾಯಿಯ ಜಿಯೋ ಭಾರತ್ ಫೋನ್ ವಿಶೇಷತೆ ಏನು, ಅಂಬಾನಿ ನಿಜಕ್ಕೂ ಗ್ರೇಟ್.

ಕಡಿಮೆ ಬೆಲೆಯಲ್ಲಿ ಖರೀದಿಸಿ ಜಿಯೋ ಭಾರತ್ ಫೋನ್, ಈ ಹೊಸ ಜಿಯೋ ಫೋನ್ ನ ವಿಶೇಷತೆ ತಿಳಿಯಿರಿ.

Jio Bharat Phonen Feature: ಜಿಯೋ (Jio) ಇದೀಗ 5G ನೆಟ್ ವರ್ಕ್ ನೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ದೇಶದಲ್ಲಿ ಜಿಯೋ ಪ್ರಮುಖ ಟೆಲಿಕಾಂ ಕಂಪನಿಯಾಗಿದೆ. ಜಿಯೋ ರಿಲಯನ್ಸ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ. ಇನ್ನು ಈಗಾಗಲೇ ಜಿಯೋ ಫೋನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಇದೀಗಾ ಜಿಯೋ ರಿಲಯನ್ಸ್ ಮತ್ತೊಂದು ಅತ್ಯಾಕರ್ಷಕ ಜಿಯೋ ಫೋನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇಂಟೆರ್ ನೆಟ್ ಬಳಸದೆ ಇರುವವರು ಈ ಹೊಸ ಜಿಯೋ ಫೋನ್ ನ ಪ್ರಯೋನವನ್ನು ಪಡೆಯಬಹುದು.

Jio Reliance Chairman Akash Ambani has spoken about the launch of Jio Bharat Phone.
Image Credit: Gizmotimes

 

ಜಿಯೊದ ರೂ. 999 ಫೋನ್ ಬಿಡುಗಡೆ (Jio Bharat Phone) 
ಇದೀಗ ಜಿಯೋ ಜಿಯೋ ಭಾರತ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲಿದ್ದರು ಜಿಯೋ ಫೋನ್ ಅನ್ನು ಕೂಡ ಬಳಸುತ್ತಾರೆ.

ಇನ್ನು ಕೆಲವರು ಸ್ಮಾರ್ಟ್ ಫೋನ್ ಗಳ ಜೊತೆಗೆ ಒಂದು ಕೀ ಪ್ಯಾಡ್ ಫೋನ್ ಗಳನ್ನೂ ಬಳಸುತ್ತಾರೆ. ಹೀಗಾಗಿ ಜಿಯೋ ಫೋನ್ ನ ಮೇಲಿನ ಬೇಡಿಕೆ ಕೂಡ ಹೆಚ್ಚಿದೆ. ಈ ಜಿಯೋ ಭಾರತ್ ಫೋನ್ ಅನ್ನು ನೀವು ಕೇವಲ 999 ರೂ. ಗಳಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group

Jio Reliance Chairman Akash Ambani has spoken about the launch of Jio Bharat Phone.
Image Credit: Gizmotimes

ಜಿಯೋ ಭಾರತ್ ಫೋನ್
ಭಾರತೀಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಜಿಯೋ ಭಾರತ್ ಫೋನ್ ಅನ್ನು ಪರಿಚಯಿಸಲಾಗಿದೆ. ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ಕಷ್ಟವಾಗುವರು ಈ ಜಿಯೋ ಭಾರತ್ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಇನ್ನು ಜಿಯೋ ಭಾರತ್ ಫೋನ್ ಬಿಡುಗಡೆಯ ಬಗ್ಗೆ ಜಿಯೋ ರಿಲಯನ್ಸ್ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಮಾತನಾಡಿದ್ದಾರೆ.

” ಭಾರತದಲ್ಲಿ ಇನ್ನು 250 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರು 2G ಯುಗದಲ್ಲಿಯೇ ಇದ್ದಾರೆ. 5G ಯುಗದಲ್ಲಿ ಕೂಡ ಇಂಟರ್ನೆಟ್ ನ ಮೂಲ ವೈಶಿಷ್ಟ್ಯಗಳನ್ನು ಬಳಸಲಾಗುತ್ತಿಲ್ಲ. ತಂತ್ರಜ್ಞಾನವು ಕೆಲವರಿಗೆ ಇನ್ನುಮುಂದೆ ಆಯ್ದ ಸವಲತ್ತಾಗಿ ಉಳಿಯುವುದಿಲ್ಲ. ಜಿಯೋದಲ್ಲಿನ ಡಿಜಿಟಲ್ ವಿಭಜನೆಯನ್ನು ತೊಡೆದು ಹಾಕಲು ದಿಟ್ಟ ಕ್ರಮವನ್ನು ತೆಗೆದುಕೊಳ್ಳುತ್ತೇವೆ” ಎಂದು ಆಕಾಶ್ ಅಂಬಾನಿ ಅವರು ಹೇಳಿದ್ದಾರೆ.

Join Nadunudi News WhatsApp Group