Jio Recharge Plan Hike: ಜಿಯೋ ಸಿಮ್ ಇದ್ದವರಿಗೆ ಬೇಸರದ ಸುದ್ದಿ, ರಿಚಾರ್ಜ್ ದರದಲ್ಲಿ ಏರಿಕೆ.

ಜಿಯೋ ತನ್ನ ರಿಚಾರ್ಜ್ ದರಗಳನ್ನ ಏರಿಕೆ ಮಾಡಲು ನಿರ್ಧಾರ ಮಾಡಿದ್ದು ಮುಂದಿನ ದಿನಗಳಲ್ಲಿ ಹಲವು ಪ್ಲ್ಯಾನ್ ಗಳ ಬೆಲೆ ಏರಿಕೆ ಆಗಲಿದೆ.

Jio Recharge Price Hike: ಭಾರತೀಯ ಟೆಲಿಕಾಮ್ ವಲಯದಲ್ಲಿ ಜಿಯೋ (Jio) ಎತ್ತರದ ಸ್ಥಾನದಲ್ಲಿದೆ. ಇನ್ನು ದೇಶದೆಲ್ಲೆಡೆ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಇತ್ತೀಚೆಗಂತೂ ಸಾಕಷ್ಟು ಪ್ರತಿಷ್ಠಿತ ಟೆಲಿಕಾಮ್ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ.

ಏರ್ ಟೆಲ್ (Airtel) ಹಾಗೂ ವೊಡಾಫೋನ್ (Vodafone) ಬಳಕೆದಾರರಿಗೆ ಹೋಲಿಸಿದರೆ ಜಿಯೋ ಬಳಕೆದಾರರು ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿ ಜಿಯೋ ಬಳಕೆದಾರರಿಗೆ ಬಾರಿ ನಷ್ಟ ಉಂಟಾಗಲಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Jio Recharge Price Hike
Imsge Source: India Today

ಜಿಯೋ ಗ್ರಾಹಕರಿಗೆ ಮಹತ್ವದ ಸೂಚನೆ
ಜಿಯೋ ಬಳಕೆದಾರರು ಬೇರೆ ಕಂಪನಿಗಳಿಗೆ ಹೋಲಿಸಿದರೆ ಸಾಕಷ್ಟು ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇನ್ನು ಜಿಯೋ ಇತ್ತೀಚೆಗಂಟೆ ವಿವಿಧ ರಿಚಾರ್ಜ್ ಪ್ಲಾನ್ ಗಳ ಮೂಲಕ ತಮ್ಮ ಗ್ರಾಹಕರನ್ನು ಸೆಳೆಯುತ್ತಿದೆ. ಆದರೆ ಇದೀಗ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಕೆಲವೇ ದಿನಗಳಲ್ಲಿ ಹೊಸ ನಿರ್ಧಾರವನ್ನು ಪ್ರಕಟಿಸಲಿದೆ. ಜಿಯೋ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.

Jio Recharge Price Hike
Imsge Source: India Today

ಜಿಯೋ ತನ್ನ ಆದಾಯವನ್ನುಹೆಚ್ಚಿಸಿಕೊಳ್ಳಲು ಕಾರಣ
ಜಿಯೋ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿರ್ಧಾರ ಮಾಡಿರುವ ಏನು ಕಾರಣ ಎನ್ನುವ ಬಗ್ಗೆ ತಿಳಿಯೋಣ. ಕಳೆದ ಕೆಲವು ತಿಂಗಳಿಂದ ಜಿಯೋ ಕಂಪನಿ ಸ್ವಲ್ಪ ಮಟ್ಟಿನ ನಷ್ಟ ಅನುಭವಿಸಿದೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯದಲ್ಲಿ ಉತ್ತಮ ಸಾಧನೆ ಕಂಡುಬಂದಿಲ್ಲ. ಈ ಕಾರಣಕ್ಕೆ ARPU ಬೆಲೆ ಏರಿಕೆಗೆ ಮುಂದಾಗಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಏರ್ ಟೆಲ್ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ರಿಚಾರ್ಜ್ ದರಗಳನ್ನು ಹೆಚ್ಚಿಸಿತ್ತು, ಆದರೆ ಇದೀಗ ಜಿಯೋ ಮುಂದಾಗಿದೆ. ಜಿಯೋ ತನ್ನ ಕೆಲವು ಮೂಲ ರಿಚಾರ್ಜ್ ಪ್ಲಾನ್ ಗಳನ್ನೂ ತೆಗೆದು ಹಾಕಲಿದೆ. ಇನ್ನು ಕೆಲವು ಪ್ಲಾನ್ ಗಳ ರಿಚಾರ್ಜ್ ದರವನ್ನು ಹೆಚ್ಚಿಸಲು ಜಿಯೋ ಮುಂದಾಗಿದೆ. ಜಿಯೋ ರಿಚಾರ್ಜ್ ಬೆಲೆಯ ಏರಿಕೆಯಿಂದಾಗಿ ಜಿಯೋ ಗ್ರಾಹಕರು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿದೆ.

Join Nadunudi News WhatsApp Group

Jio Recharge Price Hike
Image Source: India Today

Join Nadunudi News WhatsApp Group