Jio Offer: ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್, 84 ದಿನಗಳ ಎರಡು ರಿಚಾರ್ಜ್ ಪ್ಲ್ಯಾನ್ ಘೋಷಣೆ.

84 ದಿನಗಳ ಮಾನ್ಯತೆ ಇರುವ ಎರಡು ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದ ಜಿಯೋ.

Jio 84 Days Recharge Plan: ಇತ್ತೀಚಿಗೆ ಜಿಯೋ ರಿಲಯೆನ್ಸ್ (jio)  ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಜಿಯೋ ರಿಲಯನ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆ ಇರುವ ಎರಡು ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ. ಜಿಯೊದ ಈ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರಗಳನ್ನು ತಿಳಿಯೋಣ.

Jio has launched two new recharge plans for its customers with 84 days validity.
Image Credit: abplive

84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ
ಪ್ರತಿ ತಿಂಗಳು ಮುಗಿದಂತೆ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರು ಪ್ರತಿ ತಿಂಗಳು ರಿಚಾರ್ಜ್ ಮಾಡಿಕೊಳ್ಳುದರಿಂದ ಬಿಡುಗಡೆ ನೀಡಲಿದೆ. ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 84 ದಿನಗಳ ಮಾನ್ಯತೆ ನೀಡುವ ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಜಾರಿಗೊಳಿಸಿದೆ.

Jio has launched two new recharge plans for its customers with 84 days validity.
Image Credit: 91mobiles

739 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಜಿಯೋ
ಇದೀಗ ಜಿಯೋ ಕಂಪನಿ 739 ರೂ. ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಯೋಜನೆಯಿಂದ ಬಳಕೆದಾರರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನೀವು ಇದೀಗ 739 ರೂ. ರಿಚಾರ್ಜ್ ಮಾಡಿದರೆ 84 ದಿನಗಳ ಮಾನ್ಯತೆ ಪಡೆಯಬಹುದು.

ಜಿಯೋ ಈ ಹೊಸ 739 ರೂ. ರಿಚಾರ್ಜ್ ಮಾಡುವುದರಿಂದ ಗ್ರಾಹಕರು ಪ್ರತಿನಿತ್ಯ 1 .5GB ಡೇಟಾವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆ ಪ್ರತಿ ದಿನ 100 SMS ಈ 739 ಯೋಜನೆಯಲ್ಲಿ ಲಭ್ಯವಿದೆ.

Join Nadunudi News WhatsApp Group

Jio has launched two new recharge plans for its customers with 84 days validity.
Image Credit: techlusive

ಜಿಯೋ 789 ರೂ. ರಿಚಾರ್ಜ್ ಪ್ಲಾನ್
ಇದೀಗ ಜಿಯೋ ಕಂಪನಿ 789 ರೂ. ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ನೀವು ಇದೀಗ 789 ರೂ. ರಿಚಾರ್ಜ್ ಮಾಡಿದರೆ 84 ದಿನಗಳ ಮಾನ್ಯತೆ ಪಡೆಯಬಹುದು. ಜಿಯೋನಾ ಈ ಹೊಸ 789 ರೂ. ರಿಚಾರ್ಜ್ ಮಾಡುದರಿಂದ ಗ್ರಾಹಕರು ಪ್ರತಿನಿತ್ಯ 2GB ಡೇಟಾವನ್ನು ಪಡೆಯಬಹುದು.

ಅನಿಯಮಿತ ಕರೆಯ ಜೊತೆ ಪ್ರತಿ ದಿನ 100 SMS ಈ 789 ಯೋಜನೆಯಲ್ಲಿ ಲಭ್ಯವಿದೆ. JioSaavn Pro, JioTV, JioCinema, JioSecurity ಮತ್ತು JioCloud ನಂತಹ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Join Nadunudi News WhatsApp Group