Rohit Sharma: ಭಾರತದ ಯಾವ ನಾಯಕ ಕೂಡ ಮಾಡದ ದಾಖಲೆ ನಿರ್ಮಾಣ ಮಾಡಿದ ಹಿಟ್ ಮ್ಯಾನ್ ರೋಹಿತ್, ಐತಿಹಾಸಿಕ ಸಾಧನೆ.

ಯಾವ ಆಟಗಾರನು ಮಾಡದ ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮ.

Rohit Sharma New Record In World Cup: 2023 ರ ಐಸಿಸಿ (ICC) ಪುರುಷರ ಕ್ರಿಕೆಟ್ ವಿಶ್ವಕಪ್ (World Cup) ವಿಶ್ವಕಪ್ ನ 13 ನೇ ಆವೃತ್ತಿಯಾಗಿದೆ. ದೇಶದ ವಿವಿಧ ನಗರಗಳಲ್ಲಿ  ನಡೆಯುವ ವಿಶ್ವಕಪ್ ಟೂರ್ನಮೆಂಟ್ ಈಗಾಗಲೇ ಆರಂಭಗೊಂಡಿದ್ದು, ಸೆಮಿ ಫೈನಲ್ ಹಂತ ತಲುಪಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತದ ನ್ಯೂಜಿಲ್ಯಾಂಡ್ ತಂಡವನ್ನ ಸೋಲಿಸುವುದರ ಮೂಲಕ ಫೈನಲ್ ತಲುಪಿದ್ದು ಇಂದೇ ನಡೆಯುವ ಎರಡನೆಯ ಸೆಮಿ ಫೈನಲ್ ನಲ್ಲಿ ಯಾರು ವಿನ್ ಆಗುತ್ತಾರೆ ಎಂದು ಕಾದು ನೋಡಬೇಕಿದೆ.

2023 ರ ವರ್ಲ್ಡ್ ಕಪ್ ಪಂದ್ಯದಲ್ಲಿ ಈವರೆಗೂ ಯಾವುದೇ ಪಂದ್ಯದಲ್ಲೂ ಸೋಲದೆ ಭಾರತ ತಂಡ ಮುನ್ನುಗ್ಗುತ್ತಿದೆ, ಹೀಗಾಗಿ ಭಾರತೀಯರಿಗೆ ಈ ಬಾರಿ ಇಂಡಿಯಾ ಕಪ್ ವಿನ್ ಆಗುವುದರ ಬಗ್ಗೆ ನಿರೀಕ್ಷೆ ಹೆಚ್ಚಿದೆ. World cup ನಲ್ಲಿ ಟೀಮ್ ಇಂಡಿಯಾ ಅತ್ಯತ್ತಮ ಪ್ರದರ್ಶನ ನೀಡಿ ಇದೀಗ ಗೆಲುವಿಗೆ ಹತ್ತಿರವಾಗುತ್ತಿದೆ. ಇನ್ನು ಈ ಬಾರಿಯ ವಿಶ್ವಕಪ್ ನಲ್ಲಿ ಭಾರತದ ಯಾವ ನಾಯಕ ಕೂಡ ಮಾಡದ ದಾಖಲೆಯನ್ನು Team India ದ ಈ ಖ್ಯಾತ ಆಟಗಾರ ಮಾಡಿದ್ದಾರೆ.

Rohit Sharma Latest News
Image Credit: Jagran

ನ್ಯೂಜಿಲ್ಯಾಂಡ್ ನ ವಿರುದ್ಧ ಜಯ ಸಾಧಿಸಿದ ಟೀಮ್ ಇಂಡಿಯಾ
ಇನ್ನು November 15 ರಂದು ಮುಂಬೈ ನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ನ ತಂಡವನ್ನು ಭಾರತ ಎದುರಿಸಿದೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ಇಡೀ ದೇಶವೇ ಕಾದಿದ್ದು India ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತೀಯರಿಗೆ ಇನ್ನಷ್ಟು ಖುಷಿ ನೀಡಿದೆ. ಈವರೆಗೂ ಸೋಲೇ ಕಾಣದ ಭಾರತ ತಂಡ ಈ ಬಾರಿ ಕಪ್ ತನ್ನದಾಗಿಸಿಕೊಳ್ಳುತ್ತದೆ ಎನ್ನುವ ಉತ್ಸಾಹ ಜನರಲ್ಲಿ ಇನ್ನಷ್ಟು ಹೆಚ್ಚಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ನ ವಿರುದ್ಧ 70 ರನ್ ಗಳಿಂದ ಜಯ ಸಾಧಿಸಿದೆ. ಇನ್ನೇನು ವಿಶ್ವಕಪ್ ಗೆಲುವಿನ ಹಂತಕ್ಕೆ ಟೀಮ್ ಇಂಡಿಯಾ ಕೆಲವೇ ಹೆಜ್ಜೆ ಹಿಂದೆ ಇದೆ.

Rohit Sharma New Record
Image Credit: The Quint

ಭಾರತದ ಯಾವ ನಾಯಕ ಕೂಡ ಮಾಡದ ದಾಖಲೆ ನಿರ್ಮಾಣ ಮಾಡಿದ ಹಿಟ್ ಮ್ಯಾನ್ ರೋಹಿತ್
ಈ ಬಾರಿ ನಡೆದ ICC World Cup ಪಂದ್ಯದಲ್ಲಿ Team India ಯಾವ ಪಂದ್ಯವನ್ನು ಸೋಲದೆ ಹೆಚ್ಚಿನ ಯಶಸ್ಸು ಕಂಡಿದೆ. ಇದಕ್ಕಿಂತಲೂ ವಿಶೇಷವೆಂದರೆ ಟೀಮ್ ಇಂಡಿಯಾದ ಯಾವ ನಾಯಕ ಕೂಡ ಮಾಡದ ದಾಖಲೆಯನ್ನು ಈ ಬಾರಿ ಟೀಮ್ ಇಂಡಿಯಾದ ಖ್ಯಾತ ಆಟಗಾರ Rohit Sharma ಮಾಡಿದ್ದಾರೆ. ಭಾರತ ತಂಡದ ಯಾವುದೇ ನಾಯಕ ಕೂಡ ಒಂದು ಪಂದ್ಯವನ್ನ ಸೋಲದೆ ಸೆಮಿನಲ್ ತನಕ ಬಂದಿಲ್ಲ, ಆದರೆ ಈ ವಿಶೇಷ ಸಾಧನೆಯನ್ನ ರೋಹಿತ್ ಶರ್ಮ ಮಾಡಿದ್ದಾರೆ. ಈ ಮೂಲಕ ಯಾವ ಆಟಗಾರನು ಮಾಡದ ವಿಶೇಷ ಸಾಧನೆಯನ್ನು ರೋಹಿತ್ ಶರ್ಮ ಮಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group