Suryakumar Yadav: ಭಾರತ ವಿಶ್ವಕಪ್ ವಾಪಾಸ್ ಕೊಡಬೇಕು, ಎಡವಟ್ಟು ಮಾಡಿಕೊಂಡ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ನಿಂದ ದೊಡ್ಡ ಎಡವಟ್ಟು...?

Suryakumar Yadav Catch Mistake: ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಇನ್ನು 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಭಾರತಕ್ಕೆ 2024ರಲ್ಲಿ ಮತ್ತೆ ವಿಜಯಲಕ್ಷ್ಮಿ ಒಲಿದು ಬಂದಿದೆ ಎನ್ನಬಹುದು. ಇಡೀ ಭಾರತೀಯರಿಗೆ 2024 ವಿಶ್ವ ಕಪ್ ಸಿಕ್ಕಿದ್ದು ಮರೆಯಲಾಗದ ಕ್ಷಣವಾಗಿದೆ.

ಭಾರತ ತಂಡ ಕೊನೆಯ ಹಂತದಲ್ಲಿ ಪಂದ್ಯವನ್ನು ಗೆದ್ದಿದ್ದು, ಇಡೀ ಪಂದ್ಯದಲ್ಲಿ ದೊಡ್ಡ ತಿರುವನ್ನು ನೀಡಿದೆ ಎನ್ನಬಹುದು. ಅದರಲ್ಲೂ ಪಂದ್ಯ ಕೈಬಿಡುವ ಹಂತದಲ್ಲಿದ್ದಾಗ ಬೌಂಡರಿ ಲೈನ್ ಬಳಿ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಭಾರತಕ್ಕೆ ಆಸರೆಯಾಗಿ ನಿಂತಿತ್ತು. ಆದರೆ ಇದೀಗ ಅದೇ ಕ್ಯಾಚ್ ಅಪಾಯ ತಂದೊಡ್ಡಿದೆ. ಸೂರ್ಯಕುಮಾರ್ ಯಾದವ್ ಹಿಡಿದ ಈ ಕ್ಯಾಚ್ ಭಾರತ ತಂಡ ಪಡೆದ ವಿಶ್ವಕಪ್ ಟ್ರೋಫಿ ಹಿಂದಕ್ಕೆ ಕೊಡುವಂತೆ ಮಾಡುತ್ತ..? ಎನ್ನುವುದು ಸದ್ಯದ ಚರ್ಚೆಯಾಗಿದೆ.

Suryakumar Yadav Catch Mistake
Image Credit: Sportzwiki

ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ನಿಂದ ದೊಡ್ಡ ಎಡವಟ್ಟು…?
ಭಾರತ ತಂಡ ಟಿ20 ವಿಶ್ವಕಪ್ 2024ರ ಫೈನಲ್‌ ನಲ್ಲಿ ಕೊನೆಯ ಓವರ್‌ ಹಾಕುವಾಗ ದಕ್ಷಿಣ ಆಫ್ರಿಕಾ ತಂಡಕ್ಕೆ ಕೇವಲ 16 ರನ್‌ ಗಳ ಅಗತ್ಯವಿತ್ತು. ಆಗಲೇ ಸಿಕ್ಸರ್ ಗೆ ಹೋಗುತ್ತಿದ್ದ ಚೆಂಡನ್ನು ತಡೆದ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಬಳಿ ಜಿಗಿದು ಕ್ಯಾಚ್ ಪಡೆದು ನೆರವಿಗೆ ನಿಂತರು. ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಲಾಂಗ್ ಆನ್ ಕಡೆಗೆ ಸಿಕ್ಸರ್ ಗೆ ಬೌಲ್ಡ್ ಮಾಡಿದಾಗ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್ ಹಿಡಿದರು. ಆದರೆ ಇದೇ ಕ್ಯಾಚ್ ಈಗ ಭಾರತ ತಂಡಕ್ಕೆ ಶಾಪವಾಗಿದೆ ಎನ್ನಬಹುದು.

ಭಾರತ ಗೆದ್ದ ವಿಶ್ವಕಪ್ ವಾಪಸ್ಸಾಗುತ್ತಾ….?
ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಕ್ಯಾಚ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ ಈ ಕ್ಯಾಚ್ ಕೈಗೆತ್ತಿಕೊಂಡಾಗ ಸೂರ್ಯಕುಮಾರ್ ಯಾದವ್ ಅವರ ಕಾಲು ಬೌಂಡರಿ ಗೆರೆ ಮುಟ್ಟಿತು. ಆದ್ದರಿಂದ ಇದು ಕ್ಯಾಚ್ ಅಲ್ಲ, ಬದಲಿಗೆ ಸಿಕ್ಸರ್ ಎಣಿಕೆ ಎನ್ನುತ್ತಿದ್ದಾರೆ. ದಕ್ಷಿಣ ಆಫ್ರಿಕಾ T20 ವಿಶ್ವಕಪ್ 2024 ಫೈನಲ್‌ ನ ನಿಜವಾದ ವಿಜೇತ ತಂಡ. ಹೀಗಾಗಿ ಭಾರತ ತಂಡ ವಿಶ್ವಕಪ್‌ ವಾಪಸ್ಸು ಮಾಡಲಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ ಇದಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸರಿಯಾದ ಉತ್ತರ ನೀಡುತ್ತಿದ್ದಾರೆ.

Suryakumar Yadav Catch
Image Credit: espncricinfo

Join Nadunudi News WhatsApp Group

Join Nadunudi News WhatsApp Group