Latest Gold Price: 53 ಸಾವಿರ ಗಡಿ ದಾಟಿದ ಚಿನ್ನದ ಬೆಲೆ, ಚಿನ್ನ ಖರೀದಿಸುವವರಿಗೆ ಬೇಸರದ ಸುದ್ದಿ.

Latest Gold Price: ಭಾರತದಾದ್ಯಂತ ಚಿನ್ನದ ಬೆಲೆಯಲ್ಲಿ (Gold Price) ಬಾರಿ ಮೊತ್ತದ ಏರಿಕೆಯಾಗುತ್ತಲೇ ಇದೆ. ದಿನ ಕಳೆಯುತ್ತಿದ್ದಂತೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಕಳೆದ ವರ್ಷದ ಕೊನೆಯ ತಿಂಗಳಿಂದ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಕೆ ಕಂಡು ಬರುತ್ತಿದೆ. ಇನ್ನು ಚಿನ್ನದ ಬೆಲೆಯ ಏರಿಕೆಯ ಜೊತೆಗೆ ಬೆಳ್ಳಿ ಕೂಡ ದುಬಾರಿ ಆಗುತ್ತಿದೆ.

ಚಿನ್ನದ ಬೆಲೆಯಲ್ಲಿನ ಏರಿಕೆ
ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 5,315 ರೂ. ಆಗಿದೆ. ದಿನೇ ದಿನೇ ಚಿನ್ನದ ಬೆಲೆ ಏರು ಗತಿಯಲ್ಲಿ ಸಾಗುತ್ತಿದೆ. ಇನ್ನು ಹತ್ತು ಗ್ರಾಂ ಚಿನ್ನದ ಬೆಲೆ 53,150 ರೂ. ಆಗಿದೆ. ಇನ್ನು ಸ್ವಲ್ಪ ದಿನ ಕಳೆದರೆ ಚಿನ್ನದ ಬೆಲೆ 60,000 ರೂ ಗಡಿಗೆ ತಲುಪುದರಲ್ಲಿ ಯಾವುದೇ ಸಂದೇಹವಿಲ್ಲ.

The price of gold crossing the 53,000 mark is a sad news for gold buyers
Image Source: India Today

ಚಿನ್ನದ ಬೆಲೆಯ ಏರಿಕೆಗೆ ಕಾರಣ
ಜಾಗತಿಕ ಆರ್ಥಿಕ ಬಿಕ್ಕಟಿನ ಹಿನ್ನಲೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿರುವುದು ಸೇರಿದಂತೆ ಮೊದಲಾದ ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ವರ್ಷದ ಆರಂಭದಿಂದಲೂ ಚಿನ್ನದ ಬೆಲೆ ವಿಪರೀತವಾಗಿ ಏರಿಕೆಯಾಗುತ್ತಿದೆ. 2023 ಆರಂಭವಾಗಿ ಒಂದು ತಿಂಗಳು ಕಳೆದರು ಕೂಡ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟಿನ ಇಳಿಕೆ ಇನ್ನು ಕಂಡುಬಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ 60 ಸಾವಿರದ ಗಡಿತಲುಪದರಲ್ಲಿ ಯಾವುದೇ ಸಂದೇಹವಿಲ್ಲ.

The price of gold crossing the 53,000 mark is a sad news for gold buyers
Image Source: Times Of India

ಕಳೆದ ವರ್ಷ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಾಣಬಹುದಿತ್ತು ಆದರೆ ಈ ಬಾರಿ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬರುತ್ತಿಲ್ಲ.

Join Nadunudi News WhatsApp Group

ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 5,798 ರೂ. ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆ 57,980 ರೂ. ಆಗಿದೆ. ಈ ವರ್ಷದ ಆರಂಭದಿಂದ ಹಿಡಿದು ಒಂದು ತಿಂಗಳು ಕಳೆದರು ಕೂಡ ಚಿನ್ನದ ಬೆಲೆ ಗಗನಕ್ಕೇರುತ್ತಲೇ ಇದೆ. ಆಭರಣ ಪ್ರಿಯರು ನಿರಾಸೆಗೊಳ್ಳುತ್ತಿದ್ದಾರೆ.

The price of gold crossing the 53,000 mark is a sad news for gold buyers
Image Source: Times Of India

Join Nadunudi News WhatsApp Group